ಪುತ್ತಿಲ ಪರಿವಾರ ಹಾಗೂ ವಿಎಚ್ ಪಿ ಕಾರ್ಯಕರ್ತರ ನಡುವೆ ಹೊಯ್ ಕೈ; ಅಸಲಿಗೆ ಆಗಿದ್ದೇನು?
ನ್ಯೂಸ್ ಆ್ಯರೋ: ವಿಶ್ವ ಹಿಂದೂ ಪರಿಷದ್ ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಹಾಗೂ ವಿಶ್ವ ಹಿಂದೂ ಪರಿಷದ್ ನ ಕಾರ್ಯಕರ್ಯರ ನಡುವೆ ಹೊಯ್ ಕೈ ನಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ವಿಶ್ವ ಹಿಂದೂ ಪರಿಷದ್ ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗಮಿಸಿದ್ದಕ್ಕೆ ಕೆರಳಿದ ವಿಎಚ್ ಪಿ ಕಾರ್ಯಕರ್ತರು, ಕಾರ್ಯಕ್ರಮ ನಡೆಯುತ್ತಿರುವಾಗ್ಲೇ ಪುತ್ತಿಲ ಪರಿವಾರ ಹಾಗೂ ವಿಎಚ್ ಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಪುತ್ತೂರಿನಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅರುಣ್ ಕುಮಾರ್ ಪುತ್ತಿಲ ಆಂಡ್ ಟೀಂ ಹಿಂದೂ ಸಂಘಟನೆಗಳಿಗೆ ಹಾಗೂ ಸಂಘ ಪರಿವಾರಕ್ಕೆ ನಿಂದಿಸಿದ್ದರು ಎಂಬ ಆರೋಪ ಇತ್ತು, ಹಾಗಾಗಿ ಪುತ್ತಿಲ ಆಂಡ್ ಟೀಂ ಯವುದೇ ಕಾರಣಕ್ಕೂ ನಮ್ಮ ವಿಎಚ್ ಪಿ ಕಾರ್ಯಕ್ರಮಕ್ಕೆ ಬರಬಾರದು ಸಂಘಟಕರು ಹೇಳಿದ್ದರು.
ಇದಾದ ಬಳಿಕ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬಿಕ್ಕಟ್ಟು ಶಮನಗೊಂಡು ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿದ್ದರು, ಆದರೆ ಆದ್ರೆ ವಿಎಚ್ ಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಸಮರ ಹಾಗೆಯೇ ಉಳಿದಿತ್ತು. ಮತ್ತೆ ಇಂದು ವಿಎಚ್ ಪಿ ನೂತನ ಕಾರ್ಯಾಲಯದ ಕಾರ್ಯಕ್ರಮದಲ್ಲಿ ಅದು ಉಲ್ಭನಗೊಂಡಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರುಣ್ ಕುಮಾರ್ ಅವರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಕಾರಿನಿಂದ ಇಳಿಯಬಾರದು ಎಂದು ಹೇಳಿದ್ದರು. ಆಗ ಪ್ರತಾಪ್ ಸಿಂಹ ಮತ್ತು ಇತರೇ ಮುಖಂಡರು ಬಂದು ಕರೆದುಕೊಂಡು ಹೋದರು, ಅಷ್ಟೇ ಬೇರೆ ಏನು ಇಲ್ಲ. ವಿಶ್ವ ಹಿಂದೂ ಪರಿಷದ್ ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮ ಯಶಸ್ವಿಯಾಗಿ ಆಗಿದೆ. ಸುಮಾರು 10 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಇಂದು ಶಿಲಾನ್ಯಾಸ ನೆರವೇರಿಸಲಾಗಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಗುರಿಯನ್ನು ಹೊಂದಿದ್ದೇವೆ. ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕೇಂದ್ರವಾಗಿ ಆಗಬೇಕು ಎಂಬುವುದು ನಮ್ಮ ಆಶಯ ಎಂದು ಹೇಳಿದ್ದಾರೆ.
Leave a Comment