ಅದೃಷ್ಟ ಲಕ್ಷ್ಮೀಯನ್ನು ಒಲಿಸಿ ಶ್ರೀಮಂತರಾಗಬೇಕಾ?; ವಾಸ್ತು ಪ್ರಕಾರ ಹೀಗೆ ಮಾಡಿ ನೋಡಿ

vastu tips
Spread the love

ನ್ಯೂಸ್ ಆ್ಯರೋ: ಜೀವನದಲ್ಲಿ ಕಷ್ಟ ಸುಖ ಎಲ್ಲ ಇರುತ್ತೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿದ್ರೆ ಜೀವನವು ಸ್ವಲ್ಪ ಸುಲಭವಾಗುತ್ತದೆ. ಇದರರ್ಥ ಹಣ ಹೊಂದಿದ್ರೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು ಅಂತ. ನೀವು ಸಹ ಹೆಚ್ಚು ಹಣ ಗಳಿಸಿ ಶ್ರೀಮಂತರಾಗಲು ಬಯಸಿದರೆ, ವಾಸ್ತು ಪ್ರಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು, ಇದರಿಂದ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರುತ್ತೆ.

ಹೌದು. . . ಮನೆಯಿಂದ ಹೊರಗೆ ಹೋಗುವಾಗ, ಕೈಯಲ್ಲಿ ಐದು ಲವಂಗಗಳನ್ನ ಹಿಡ್ಕೊಂಡು ಹೋಗಿ, ಇನ್ನು ಕೆಲಸಕ್ಕೆ ಹೋಗುವಾಗ ಲವಂಗಗಳನ್ನು ಕೆಂಪು ಬಟ್ಟೆಯಲ್ಲಿ ಇರಿಸಿ ಜೇಬಿನಲ್ಲಿ ಇಡಬೇಕು. ಮನೆಗೆ ಹಿಂತಿರುಗಿ ಬಂದ ನಂತರ ಅವುಗಳನ್ನು ಮನೆಯ ಪೂಜಾ ಮಂದಿರದಲ್ಲಿ ಇರಿಸಿ.

ಭಗವದ್ಗೀತೆ ಓದಿ: ಶ್ರೀಮದ್ ಭಗವದ್ಗೀತೆಯನ್ನು ಓದುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಅದರ 11 ನೇ ಅಧ್ಯಾಯ ಓದುವುದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತೆ, ಇದಲ್ಲದೆ, ಯಾವಾಗಲೂ ನಿಮ್ಮ ದೇಶ ಮತ್ತು ಮಹಿಳೆಯರನ್ನು ಗೌರವಿಸಿ. ಮಹಿಳೆಯರನ್ನು ಕೀಳಾಗಿ ಕಾಣುವ ಮೂಲಕ ಅವರನ್ನು ಎಂದಿಗೂ ಅಗೌರವಗೊಳಿಸಬೇಡಿ.

ತುಪ್ಪದ ದೀಪ ಹಚ್ಚಿ: ಪ್ರತಿದಿನ ಲಕ್ಷ್ಮಿ ದೇವಿಯ ಮುಂದೆ ತುಪ್ಪದ ದೀಪ ಬೆಳಗಿಸಿ, ಕನಕಧಾರ ಸ್ತೋತ್ರವನ್ನು ಪಠಿಸುವ ಜನರ ಮನೆಯಲ್ಲಿ ಎಂದಿಗೂ ಹಣದ ಕೊರತೆಯಿರೋದಿಲ್ಲ. ಕನಕಧಾರ ಸ್ತೋತ್ರವನ್ನು ಪಠಿಸಿದ್ರೆ ಮನೆ ಸಂಪತ್ತಿನಿಂದ ತುಂಬಿರುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯ ಮಳೆಯಾಗುತ್ತೆ. ಲಕ್ಷ್ಮೀ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ.

ಗಾಯತ್ರಿ ಮಂತ್ರ: ಸೂರ್ಯನ ಮುಂದೆ ಗಾಯತ್ರಿ ಮಂತ್ರವನ್ನು ಪಠಿಸುವ ವ್ಯಕ್ತಿಯ ಎಲ್ಲಾ ಗ್ರಹ ದೋಷಗಳು ದೂರವಾಗುತ್ತವೆ. ಗಾಯತ್ರಿ ಮಂತ್ರವನ್ನು ಪಠಿಸುವುದು ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿಸುತ್ತದೆ, ಅವನ ನಡವಳಿಕೆಯನ್ನು ಸೌಮ್ಯಗೊಳಿಸುತ್ತದೆ ಮತ್ತು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನು ಒದಗಿಸುತ್ತದೆ.

ಶನಿವಾರ ಶನಿಯ ದಿನ. ಈ ದಿನ ಕಬ್ಬಿಣದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಇದಲ್ಲದೇ ಈ ದಿನ ಕಪ್ಪು ಬಟ್ಟೆಗಳನ್ನು ಖರೀದಿಸುವುದು ಸಹ ಸರಿಯಲ್ಲ. ಶನಿವಾರ ಸಂಜೆ ದೀಪವನ್ನು ಬೆಳಗಿಸಿ ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಿ. ಲಕ್ಷ್ಮೀ ಒಲಿದು ಬರುತ್ತಾಳೆ.

Leave a Comment

Leave a Reply

Your email address will not be published. Required fields are marked *

error: Content is protected !!