ಮಹಾಕುಂಭ ಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿ ಅಸ್ವಸ್ಥ; ಗಂಗಾ ಸ್ನಾನದ ನಂತರ ‘ಕಮಲಾ’ ಚೇತರಿಕೆ

Steve Jobs Wife
Spread the love

ನ್ಯೂಸ್ ಆ್ಯರೋ: ಮಹಾಕುಂಭ ಮೇಳ 2025 ರಲ್ಲಿ ಭಾಗಿಯಾಗಲು ಭಾರತಕ್ಕೆ ಆಗಮಿಸಿದ ಆಪಲ್ ನ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರಿಗೆ ಸ್ವಲ್ಪ ಆರೋಗ್ಯ ಹದಗೆಟ್ಟಿತ್ತು. ಆದರೆ, ಗಂಗಾ ಸ್ನಾನ ಮತ್ತು ವಿಶ್ರಾಂತಿ ನಂತರ ಅವರು ಚೇತರಿಸಿಕೊಂಡಿದ್ದಾರೆ.

ಸನಾತನ ಧರ್ಮದ ಬಗ್ಗೆ ಕಲಿಯುವ ಅವರ ಉತ್ಸಾಹವು ಬಲವಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ಬಿಲಿಯನೇರ್ ಉದ್ಯಮಿ-ಪರೋಪಕಾರಿ ಮಹಿಳೆ ಪೊವೆಲ್ ಜಾಬ್ಸ್ ಗೆ ‘ಕಮಲಾ’ ಎಂಬ ಹೊಸ ಹೆಸರನ್ನು ಅವರ ಗುರು ನಿರಂಜನಿ ಅಖಾರದ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ನೀಡಿದ್ದಾರೆ.

ಲಾರೆನ್ ಪೊವೆಲ್ ಜಾಬ್ಸ್ ಸೋಮವಾರ ಸ್ವಲ್ಪಕಾಲದವರೆಗೆ ಅಸ್ವಸ್ಥರಾಗಿದ್ದರು ಆದರೆ ‘ಗಂಗಾ ಸ್ನಾನ’ ಮತ್ತು ವಿಶ್ರಾಂತಿಯ ನಂತರ ಚೆನ್ನಾಗಿದ್ದಾರೆ. ಸನಾತನ ಧರ್ಮವನ್ನು ಆಳವಾಗಿ ಅಧ್ಯಯನ ಮಾಡುವ ಅವರ ಉತ್ಸಾಹ ಇನ್ನೂ ಬಲವಾಗಿ ಉಳಿದಿದೆ ಎಂದು ಸ್ವಾಮಿ ಕೈಲಾಶಾನಂದರು ಹೇಳಿದ್ದಾರೆ ಎಂದು ಸರ್ಕಾರದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಜಾಬ್ಸ್​ ಪತ್ನಿ ಇಲ್ಲಿಯವರೆಗೆ ಇಷ್ಟೊಂದು ಪ್ರಮಾಣದ ಜನಸಾಗರ ನೋಡಿರಲಿಲ್ಲ. ಅವರು ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶಿಬಿರದಲ್ಲಿ ಚೇತರಿಸಿಕೊಳ್ತಿದ್ದು, ಚಿಕಿತ್ಸೆ ಮುಂದುವರಿದಿದೆ. ಜನವರಿ 20ರಂದು ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಶೀಘ್ರದಲ್ಲೇ ತೆರಳಲಿದ್ದಾರೆ. ಅಲ್ಲಿಯವರೆಗೂ ಶಿಬಿರದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಸ್ವಾಮಿ ಕೈಲಾಶಾನಂದರು ತಿಳಿಸಿದರು..

Leave a Comment

Leave a Reply

Your email address will not be published. Required fields are marked *