4 ವರ್ಷ ಪ್ರೀತಿಸಿ ಮದುವೆಯಾದ ಗೆಳತಿಯರು; ಮೊದಲ ರಾತ್ರಿ ಮರುದಿನವೇ ಮದುವೆ ಮುರಿದುಕೊಂಡರು

Girls
Spread the love

ನ್ಯೂಸ್ ಆ್ಯರೋ: ಝಾಲಾವಾಡ್ ಜಿಲ್ಲೆಯ ಭವಾನಿಮಂಡಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಬ್ಬರು ಯುವತಿಯರು 4 ವರ್ಷಗಳ ಕಾಲ ಪ್ರೀತಿಸಿ ಭಾವುಕ ಕ್ಷಣಗಳಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾಗದೇ ಮದುವೆಯಾದರು. ಆದರೆ, ಅವರ ಮದುವೆ ಸಂಬಂಧ ಮೂರೇ ದಿನಗಳಲ್ಲಿ ಈ ಸಂಬಂಧ ಮುರಿದುಬಿತ್ತು.

ಕಳೆದ ಮೂರು ದಿನಗಳ ಹಿಂದೆ ಸೋಮವಾರ ಭವಾನಿಮಂಡಿಯ ನಿವಾಸಿ ಸೋನಂ ಮಾಳಿ ಮತ್ತು ಭೈಸೋದಾಮಂಡಿಯ ರೀನಾ ಶರ್ಮಾ ನ್ಯಾಯಾಲಯದ ಆವರಣದಲ್ಲಿ ವಕೀಲರ ಮುಂದೆ ಮದುವೆಯಾದರು. ಆದರೆ, ಸಲಿಂಗ ವಿವಾಹಕ್ಕೆ ವಿರೋಧಿಸಿ ರೀನಾಳ ಕುಟುಂಬದವರ ಜೊತೆ ಜಗಳವಾಗಿದ್ದರಿಂದ ಆಕೆಯನ್ನು ಮನೆಯಿಂದ ಹೊರಹಾಕಲಾಗಿತ್ತು. ಆಗ ತನ್ನ ಆತ್ಮೀಯ ಪ್ರಾಣ ಸ್ನೇಹಿತೆ ಸೋನಂಳಿಗೆ ಎಲ್ಲ ವಿಷಯವನ್ನು ಹೇಳಿದ್ದಾಳೆ. ಜೊತೆಗೆ, ರೀನಾ ತನ್ನ ಪರಿಸ್ಥಿತಿಯನ್ನು ವಿವರಿಸುತ್ತಾ, ನಾನು ನಿನ್ನ ಜೊತೆ ಇರಲು ಬಯಸುತ್ತೇನೆ. ಒಂದು ವೇಳೆ ನೀನು ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದಳು.

ಸೋನಂ ಈ ವಿಷಯವನ್ನು ತನ್ನ ಹೆತ್ತವರಿಗೆ ತಿಳಿಸಿದಳು. ಮತ್ತು ಅವರ ಒಪ್ಪಿಗೆಯ ನಂತರ ಇಬ್ಬರೂ ನ್ಯಾಯಾಲಯಕ್ಕೆ ಹೋಗಿ ಮದುವೆಯಾದರು. ಮದುವೆಯ ಸಮಯದಲ್ಲಿ ಸೋನಂ ವರನ (ಹುಡುಗ) ಪಾತ್ರ ವಹಿಸಿದಳು. ಇಬ್ಬರೂ ಪರಸ್ಪರ ಹಾರವನ್ನು ಬದಲಾಯಿಸಿಕೊಂಡರು. ಆದರೆ, ಇವರ ಈ ವೈವಾಹಿಕ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ನಿನ್ನೆ ರಾತ್ರಿ ರೀನಾಳ ಮಾವ ಅವಳನ್ನು ತಮ್ಮೊಂದಿಗೆ ಮನೆಗೆ ಕರೆದೊಯ್ದಿದ್ದಾರೆ. ನಂತರ, ಸೋನಂ ಕೂಡ ಈ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾಳೆ. ನಾವು ತುಂಬಾ ಭಾವುಕ ಸಂದರ್ಭದಲ್ಲಿ ಈ ಮದುವೆ ನಿರ್ಧಾರ ತೆಗೆದುಕೊಂಡಿದ್ದೆವು. ಆದರೆ ಈಗ ನಾವು ಬೇರೆ ಬೇರೆಯಾಗಿ ನಮ್ಮ ಜೀವನವನ್ನು ಸಾಮಾನ್ಯ ರೀತಿಯಲ್ಲಿ ನಡೆಸುವುದಕ್ಕೆ ಮುಂದಾಗುತ್ತೇವೆ ಎಂದು ಸೋನಂ ಹೇಳಿದ್ದಾಳೆ.

ಸೋನಂ ಮತ್ತು ರೀನಾ ಕಳೆದ 4 ವರ್ಷಗಳಿಂದ ಪರಸ್ಪರ ಪರಿಚಿತರು. ಅವರ ಸ್ನೇಹ ಎಷ್ಟು ಆತ್ಮೀಯವಾಗಿತ್ತೆಂದರೆ, ಅವರು ಪ್ರತಿ ಸುಖ-ದುಃಖದಲ್ಲಿ ಒಬ್ಬರಿನ್ನೊಬ್ಬರಿಗೆ ಆಸರೆಯಾಗಿದ್ದರು. ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು ಮತ್ತು ದಿನವಿಡೀ ದಣಿದ ನಂತರ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದಾದ ನಂತರ ಅವರಿಬ್ಬರೂ ತಮ್ಮ ನಡುವೆ ಸ್ನೇಹ ಮಾತ್ರವಲ್ಲ ಇದನ್ನೂ ಮೀರಿ ಪ್ರೀತಿ ಇದೆ ಎಂದು ತಿಳಿದು ಪ್ರೀತಿಸಲು ಆರಂಭಿಸಿದರು. ಆದರೆ, ರೀನಾಳಿಗೆ ಮದುವೆ ಮಾಡುವ ವಿಚಾರ ಬಂದಾಗ ಮನೆಯಿಂದ ಗಲಾಟೆ ಮಾಡಿಕೊಂಡು ಹೊರಬಂದ ರೀನಾಳನ್ನು ಮದುವೆ ಮಾಡಿಕೊಳ್ಳುವುದಾಗಿ ಸೋನಂ ಒಪ್ಪಿಕೊಂಡಳು.

ಇದಾದ ನಂತರ ಸೋನಂ ತಮ್ಮ ಮನೆಯವರನ್ನು ಒಪ್ಪಿಸಿ ಇಬ್ಬರೂ ನ್ಯಾಯಾಲಯಕ್ಕೆ ಹೋಗಿ ಮುದವೆ ಮಾಡಿಕೊಂಡಿದ್ದಾರೆ. ಆದರೆ, ಮೊದಲ ರಾತ್ರಿ ಶಾಸ್ತ್ರ ಸೇರಿದಂತೆ ಕೆಲವು ಕಾರ್ಯಕ್ರಮಗಳನ್ನು ಮಾಡಿದ 3 ದಿನದೊಳಗೆ ತಾವಿಬ್ಬರೂ ಹುಡುಗಿಯರು ಏನೂ ಮಾಡಲು ಸಾಧ್ಯವಿಲ್ಲ. ಜೊತೆಗೆ, ಬಡತನದಲ್ಲಿ ಜೀವನ ಮಾಡುವ ನಮಗೆ ಸಲಿಂಗ ವಿವಾಹ ಮಾಡಿಕೊಂಡು ಸಮಾಜದಲ್ಲಿ ಜೀವನ ಮಾಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದೀಗ ಪುನಃ ಕೋರ್ಟ್ ಮೊರೆ ಹೋಗಿದ್ದು, ವಿಚ್ಛೇದನ ಪಡೆಯಲು ಸಿದ್ಧತೆ ನಡೆಸಿದ್ದಾರೆ.

ಈ ಘಟನೆಯು ಭಾವನೆಗಳ ಪ್ರಭಾವದಲ್ಲಿ ತೆಗೆದುಕೊಂಡ ನಿರ್ಧಾರಗಳು ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸುತ್ತದೆ. ಈ ಸಂಬಂಧ ಎಷ್ಟು ಬೇಗನೆ ಪ್ರಾರಂಭವಾಯಿತೋ ಅಷ್ಟೇ ಬೇಗನೆ ಕೊನೆಗೊಂಡಿತು. ಈಗ ಇಬ್ಬರೂ ತಮ್ಮ ಹಳೆಯ ಜೀವನಕ್ಕೆ ಮರಳಲು ನಿರ್ಧರಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!