ಪುತ್ತೂರಿನ ಚರ್ಚ್ ಬಳಿ ಎರಡು ಪ್ರತ್ಯೇಕ ಪ್ರಕರಣ – ಹಿಂದೂ ಯುವಕನ ಮೇಲೆ ಹಲ್ಲೆಗೈದ ಬುರ್ಖಾಧಾರಿ ಮಹಿಳೆ ; ರಾತ್ರೋ ರಾತ್ರಿ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ..!!

Spread the love

ನ್ಯೂಸ್ ಆ್ಯರೋ‌ : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹೃದಯಭಾಗದಲ್ಲಿರುವ ಫ್ಯಾನ್ಸಿ ಅಂಗಡಿಯೊಂದಕ್ಕೆ ದುಷ್ಕರ್ಮಿಯೊಬ್ಬ ತಡರಾತ್ರಿ ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ.

ಪುತ್ತೂರಿನ ಮೈದೇ ದೇವುಸ್ ಚರ್ಚ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಶಫೀಕ್ ಮಾಲಕತ್ವದ ಬ್ಲ್ಯಾಕ್ ಡೈಮಂಡ್ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ್ದು, ದುಷ್ಕರ್ಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಇನ್ನು ಈ ಘಟನೆ ಸುಮಾರು ತಡರಾತ್ರಿ 2:30ರ ಸಮಯಕ್ಕೆ ನಡೆದಿದೆ. ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿ ಫ್ಯಾನ್ಸಿ ಅಂಗಡಿಗೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಇದೇ ಫ್ಯಾನ್ಸಿ ಅಂಗಡಿ ಮುಂಭಾಗ ನಿನ್ನೆ ರಾತ್ರಿ 8:30ರ ಸಮಯಕ್ಕೆ ಗಲಾಟೆಯೊಂದು ನಡೆದಿತ್ತು. ಆಟೋ ರಿಕ್ಷಾ ಫ್ಯಾನ್ಸಿ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದನ್ನು ಕಾರಿನಲ್ಲಿದ್ದ ಯುವಕನೊಬ್ಬ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆದಿತ್ತು. ಬ್ಲ್ಯಾಕ್ ಡೈಮಂಡ್ ಫ್ಯಾನ್ಸಿ ಮುಂಭಾಗದ ರಸ್ತೆಯಲ್ಲಿ ಆಟೋ ರಿಕ್ಷಾವನ್ನ ಪಾರ್ಕ್ ಮಾಡಲಾಗಿತ್ತು.

ಸೈಡ್ ಕೊಡುವಂತೆ ಕಾರಿನಲ್ಲಿದ್ದ ಪುನೀತ್ ಕೇಳಿಕೊಂಡಿದ್ದಾರೆ. ಈ ವೇಳೆ ಏಕಾಏಕಿ ಕಾರಿನಲ್ಲಿದ್ದ ಪುನೀತ್ ಮೇಲೆ ಆಟೋ ರಿಕ್ಷಾ ಚಾಲಕ ನೌಶದ್ ಪತ್ನಿ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಬಳಿಕ ಕಾರಿನಲ್ಲಿದ್ದ ಪುನೀತ್ ಅವರ ಇತರ ಗೆಳೆಯರ ಮೇಲೂ ಅಲ್ಲಿ ಸೇರಿದ್ದವರು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಹಿಂದೂ ಮುಖಂಡರು ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Leave a Reply

Your email address will not be published. Required fields are marked *