ಇಂದು ವಿಶ್ವ ವಿದ್ಯಾರ್ಥಿಗಳ ದಿನ; ಕಲಾಂ ಜನ್ಮದಿನದಂದೇ ಈ ದಿನ ಆಚರಿಸುವುದು ಯಾಕೆ?

World Students' Day 2024
Spread the love

ನ್ಯೂಸ್ ಆ್ಯರೋ: ಇಂದು “ವಿಶ್ವ ವಿದ್ಯಾರ್ಥಿಗಳ ದಿನ“. ಪ್ರತಿ ವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ. ಭಾರತದ ಕ್ಷಿಪಣಿ ಮನುಷ್ಯ, ಭಾರತ ಕಂಡ ಗ್ರೇಟ್‌ ಸೈಂಟಿಸ್ಟ್ ಮತ್ತು ಶಿಕ್ಷಕರು ಆದ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ದಿನದ ಸವಿ ನೆನಪಿಗಾಗಿ ‘ವಿಶ್ವ ವಿದ್ಯಾರ್ಥಿಗಳ ದಿನ’ವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.

2010 ರಲ್ಲಿ ವಿಶ್ವಸಂಸ್ಥೆಯು (ಯುಎನ್‌ಒ) ಅಕ್ಟೋಬರ್ 15 ರಂದು ‘ವಿಶ್ವ ವಿದ್ಯಾರ್ಥಿಗಳ ದಿನ’ (World Students Day) ಎಂದು ಘೋಷಿಸಿತು. ಈ ಮೂಲಕ ಅವರು ಶಿಕ್ಷಣವನ್ನು ಉತ್ತೇಜಿಸಲು ಪಟ್ಟ ಪ್ರಾಮಾಣಿಕ ಪ್ರಯತ್ನವನ್ನು ಸಹ ನೆನೆಯುವುದು ಇದರ ಉದ್ದೇಶವು ಆಗಿದೆ. ಸಮಾಜ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಇನ್ನು ಎ.ಪಿ.ಜೆ ಅಬ್ದುಲ್ ಕಲಾಂ ಅವರು 1998 ರಲ್ಲಿ ಪೋಖ್ರಾನ್ -II ಪರಮಾಣು ಪರೀಕ್ಷೆಗಳಲ್ಲಿ ಅವರ ಪಾತ್ರಕ್ಕಾಗಿ ‘ಭಾರತದ ಕ್ಷಿಪಣಿ ಮನುಷ್ಯ’ ಎಂಬ ಬಿರುದನ್ನು ಪಡೆದರು.

ಅವರು 2005 ರಲ್ಲಿ ಸ್ವಿಟ್ಜರ್ಲೆಂಡ್‌ಗೆ ಭೇಟಿ ನೀಡಿದರು, ನಂತರ ದೇಶವು ಗೌರವಾರ್ಥವಾಗಿ ಮೇ 26 ಅನ್ನು ‘ವಿಜ್ಞಾನ ದಿನ’ ಎಂದು ಘೋಷಿಸಿತು. ಅಬ್ದುಲ್ ಕಲಾಂ ರವರು ಭಾರತದ 11ನೇ ರಾಷ್ಟ್ರಪತಿ ಆಗಿದ್ದು, ದೇಶದ ಅತಿಹೆಚ್ಚು ಜನ ಪ್ರೀತಿಸಿದ ರಾಷ್ಟ್ರಪತಿ ಆಗಿದ್ದರಿಂದ ‘ಜನರ ರಾಷ್ಟ್ರಪತಿ’ ಎಂದೇ ಪ್ರಖ್ಯಾತಿ ಆಗಿದ್ದರು. ಇವರು ಬೋಧಿಸುವುದನ್ನು ಹೆಚ್ಚು ಇಷ್ಟಪಡುತ್ತಿದ್ದರು. ಹಾಗೆ ‘ನಾನು ಶಿಕ್ಷಕನಾಗಿ ನೆನಪಿನಲ್ಲಿರಲು ಇಷ್ಟಪಡುತ್ತೆನೇ’ ಎಂದಿದ್ದರು ಕಲಾಂ.

ವಿದ್ಯಾರ್ಥಿಗಳ ದಿನ ಆಚರಿಸುವುದು ಏಕೆ ಮುಖ್ಯ?:

ವಿಶ್ವ ವಿದ್ಯಾರ್ಥಿಗಳ ದಿನವನ್ನು ಹಲವಾರು ಕಾರಣಗಳಿಗಾಗಿ ಆಚರಿಸಲಾಗುತ್ತದೆ. ಇದು ವಿದ್ಯಾರ್ಥಿಗಳು ಮತ್ತು ಅವರ ಸಾಧನೆಗಳನ್ನು ಗೌರವಿಸುವ ದಿನವಾಗಿದೆ. ಮುಖ್ಯವಾಗಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುವ ದಿನ. ಜಗತ್ತು ಎಷ್ಟೇ ಅಭಿವೃದ್ಧಿ ಹೊಂದಿದರೂ ಶೈಕ್ಷಣಿಕ ಸವಾಲುಗಳ ಬಗ್ಗೆ ಈ ದಿನ ಜಾಗೃತಿ ಮೂಡಿಸುತ್ತದೆ. ಶೈಕ್ಷಣಿಕ ಪ್ರಯಾಣದಲ್ಲಿ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಧ್ವನಿಯೆತ್ತಲು ಮತ್ತು ಶಿಕ್ಷಣ ವ್ಯವಸ್ಥೆಯೊಳಗಿನ ಅಂತರವನ್ನು ಪರಿಹರಿಸಲು ಈ ದಿನ ವೇದಿಕೆಯಾಗಿದೆ. ಹಾಗೆಯೇ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಡೆಗೆ ಕಲಾಂ ಅವರ ಒಲವನ್ನು ಗುರುತಿಸುವ ಮತ್ತು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.

2024ರ ವಿಶ್ವ ವಿದ್ಯಾರ್ಥಿಗಳ ದಿನಾಚರಣೆಯ ವಿಷಯವೆಂದರೆ, ‘ವಿದ್ಯಾರ್ಥಿಗಳನ್ನು ಬದಲಾವಣೆ ತರುವ ವ್ಯಕ್ತಿಗಳಾಗಿ ಸಶಕ್ತಗೊಳಿಸುವುದು‘.

ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಕಲಾಂ ಅವರು, ವಿಜ್ಞಾನ ಮತ್ತು ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು. ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಮತ್ತು ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅತ್ಯಂತ ಮಹತ್ವದ ಭಾರತೀಯ ಕ್ಷಿಪಣಿಗಳ ಅಭಿವೃದ್ಧಿಗಾಗಿ ಶ್ರಮಿಸಿದ ಅವರನ್ನು ‘ಭಾರತದ ಕ್ಷಿಪಣಿ ಮನುಷ್ಯ’ ಎಂದೂ ಕರೆಯಲಾಗುತ್ತದೆ.

2002ರಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದರು. ಕಲಾಂ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಭಾರತ ಸರ್ಕಾರದ ವೈಜ್ಞಾನಿಕ ಸಲಹೆಗಾರರಾಗಿ ಅವರು ಮಾಡಿದ ಕೆಲಸಕ್ಕಾಗಿ ಅವರಿಗೆ ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳೂ ಸಂದಿವೆ. ಕಲಾಂ ಅವರು 2015ರ ಜುಲೈ 27ರಂದು ಐಐಎಂ-ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುತ್ತಿದ್ದಾಗ ಕುಸಿದು ಬಿದ್ದು ಹೃದಯ ಸ್ತಂಭನದಿಂದ ನಿಧನರಾದರು.

Leave a Comment

Leave a Reply

Your email address will not be published. Required fields are marked *

error: Content is protected !!