ʼಅಪ್ಪುʼ ಹೆಸರಿನ ನಗು ಕಳೆದು ಮೂರು ವರ್ಷ; ʼಬೆಟ್ಟದ ಹೂವುʼ ಮರೆಯಾದ ದಿನ ನಡೆದಿದ್ದೇನು?
ನ್ಯೂಸ್ ಆ್ಯರೋ: ಪುನೀತ್ ರಾಜ್‌ಕುಮಾರ್ ಅವರು ನಿಧನ ಹೊಂದಿ ಅಕ್ಟೋಬರ್ 29ಕ್ಕೆ ಅಂದರೆ ಇಂದಿಗೆ ಮೂರು ವರ್ಷ ತುಂಬಲಿದೆ. ಪುನೀತ್ ರಾಜ್‌ಕುಮಾರ್ ಇಷ್ಟು ಸಣ್ಣ ವಯಸ್ಸಲ್ಲಿ (46 ವರ್ಷ) ನಿಧನ ಹೊಂದುತ್ತಾರೆ ಎಂದರೆ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರ ನಿಧನ ವಾರ್ತೆ ಎಲ್ಲರಿಗೂ ಶಾಕಿಂಗ್ ಎನಿಸಿತ್ತು. ಈಗಲೂ ಜನರ ಬಳಿ ಪುನೀತ್ ನಿಧನ ವಾರ್ತೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಕ್ಟೋಬರ್ 28ರಂದು ಗುರುಕಿರಣ್ ಜನ್ಮದಿನ. ಈ ಬರ್ತ್ಡೇ ಪಾರ್ಟಿಗೆ ಪುನೀತ್ ತೆರಳಿದ್ದರು. ಬರ್ತ್ಡೇನ ಅದ್ದೂರಿಯಾಗಿ ಆಚರಿಸಿಕೊಂಡ ಬಳಿಕ ಅವರು ಮನೆಗೆ ಬಂದರು. ಅಕ್ಟೋಬರ್ 29ರ ಬೆಳಿಗ್ಗೆ ಪುನೀತ್ ಜಿಮ್ ಮಾಡಿದರು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಪುನೀತ್ ಜಿಮ್ ಮಾಡಿಲ್ಲ ಎನ್ನುತ್ತಾರೆ. ಆದರೆ, ಅವರಿಗೆ ತೀವ್ರ ಹೃದಯಾಘಾತವಂತೂ ಆಯಿತು.
ಪುನೀತ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಪುನೀತ್ ಇಲ್ಲ ಎಂಬ ವಾರ್ತೆ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಯಾರಿಗೂ ಈ ಸುದ್ದಿಯನ್ನು ನಂಬೋಕೆ ಆಗುತ್ತಲೇ ಇರಲಿಲ್ಲ. ‘ಇದು ಸುಳ್ಳಾಗಲಿ’ ಎಂದು ಎಲ್ಲರೂ ಕೋರಿಕೊಂಡರು. ಆದರೆ, ನಿಧನ ವಾರ್ತೆ ನಿಜವಾಯಿತು. ಅವರ ಅಂತಿಮ ದರ್ಶನಕ್ಕೆ ಪರಭಾಷೆಯ ಹೀರೋಗಳು ಕೂಡ ಆಗಮಿಸಿದರು. ಅವರ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಕೊನೆಯ ಬಾರಿಗೆ ನೆಚ್ಚಿನ ಹೀರೋನ ದರ್ಶನ ಪಡೆದರು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಮಣ್ಣಾದರು.
ಕನ್ನಡ ಚಿತ್ರರಂಗದಲ್ಲಿಯೇ ಅತ್ಯಂತ ಫಿಟ್ ಆಗಿದ್ದ ಪುನೀತ್ ರಾಜಕುಮಾರ್ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದ ಖ್ಯಾತ ನಟ ಡಾ. ರಾಜಕುಮಾರ್‌ರವರ ಮೂರನೇ ಪುತ್ರನಾಗಿದ್ದ ಪುನೀತ್ ರಾಜಕುಮಾರ್ ಬಾಲ್ಯದಿಂದಲೇ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು. ಪುನೀತ್ ಅವರ ಮೂಲ ಹೆಸರು ಆಗ ಲೋಹಿತ್ ಎಂದಾಗಿತ್ತು. ಚೆನ್ನೈನಲ್ಲಿ ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್‌ಗೆ ಜನಿಸಿದ ಪುನೀತ್ ಐದನೇ ಮಗು. ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಅವರ ತಂದೆ ನಟನನ್ನು ಮತ್ತು ಅವನ ಸಹೋದರಿ ಪೂರ್ಣಿಮಾ ಅವರನ್ನು ಹತ್ತು ವರ್ಷ ವಯಸ್ಸಿರುವಾಗಲೇ ಅವರ ಚಲನಚಿತ್ರ ಸೆಟ್‌ಗಳಿಗೆ ಕರೆತರುತ್ತಿದ್ದರು.
ಪುನೀತ್, ಅವರ ತಂದೆಯಂತೆಯೇ, ವೃತ್ತಿಪರ ಗಾಯನದಲ್ಲಿಯೂ ಮಿಂಚಿದ ಕೆಲವೇ ಕೆಲವು ನಟರಲ್ಲಿ ಒಬ್ಬರು ಅಪ್ಪು. ಅವರು ಅಪ್ಪುವಿನಲ್ಲಿ ಏಕಾಂಗಿಯಾಗಿ ಹಾಡಿದ್ದರು. ವಂಶಿಯವರ “ಜೊತೆ ಜೊತೆಯಲಿ” ಯುಗಳ ಗೀತೆಯನ್ನು ಹಾಡಿದ್ದಾರೆ. ಅವರು ಜಾಕಿಯಲ್ಲಿ ಸ್ಪೀಡ್ ಸಾಂಗ್ ಹಾಡಿದರು. ಲವ ಕುಶ ಮತ್ತು ಮೈಲಾರಿ ಚಿತ್ರಗಳಲ್ಲಿ ಹಾಡಿದರು.ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಅಕಿರಾ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅವರು “ಕಣ್ಣ ಸಣ್ಣೆ ಇಂದಲೇನೆ” ಹಾಡನ್ನು ಹಾಡಿದ್ದಾರೆ. ಅವರ ಹೋಮ್-ಪ್ರೊಡಕ್ಷನ್ಸ್ ಹೊರತುಪಡಿಸಿ ಇತರ ಹಾಡುಗಳ ಸಂಭಾವನೆ ದಾನಕ್ಕೆ ಹೋಗುತ್ತದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಇನ್ನು ದಾನ, ಸಹಾಯಗಳಲ್ಲಿ ಮುಂದೆ ಇದ್ದ ನಟ ಪವರ್‌ಸ್ಟಾರ್ ತಂದೆಯಂತೆಯೇ ತಮ್ಮ ನೇತ್ರಗಳನ್ನು ದಾನ ಮಾಡಿದ್ದಾರೆ. ಅವರ ತಂದೆ ವರನಟ ಡಾ. ರಾಜ್‌ಕುಮಾರ್ ಅವರೂ ನೇತ್ರದಾನ ಮಾಡಿದ್ದರು. ಅವರ ಸಾವಿನಂದೇ ಮಕ್ಕಳೂ ನೇತ್ರದಾನ ಮಾಡುವ ನಿರ್ಧಾರ ಮಾಡಿದ್ದರು.
ಅಪ್ಪು ಅವರ ಸಾವಿನಿಂದ ಆಘಾತಗೊಂಡಿರುವ ಅವರ ಅಭಿಮಾನಿಗಳ ಸಾವಿನ ಸರಣಿ ಮುಂದುವರೆದು 5 ದಿನಗಳ ಅವಧಿಯಲ್ಲಿ ಆತ್ಮಹತ್ಯೆ ಮತ್ತು ಹೃದಯಾಘಾತ ಪ್ರಕರಣಗಳೂ ಸೇರಿದಂತೆ ಕನಿಷ್ಠ 13 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
Leave a Comment