4 ಕೋಟಿಗೆ ಹರಾಜಾಯ್ತು ಈ ನಾಣ್ಯ; ಅಷ್ಟಕ್ಕೂ ಇದರ ಹಿಂದಿರೋ ಮಹಾ ರಹಸ್ಯವೇನು?
ನ್ಯೂಸ್ ಆ್ಯರೋ: ಸಾಮಾನ್ಯವಾಗಿ ಈ ನಾಣ್ಯಗಳನ್ನು ನೋಡುವಾಗ ಸಣ್ಣದು, ಅಷ್ಟೊಂದು ಬೆಲೆ ಇರ್ಲಿಕ್ಕಿಲ್ಲ, ಹೀಗೆಲ್ಲಾ ಅಂದುಕೊಳುತ್ತೇವೆ. ಆದರೆ ಇಂದು ನಾವು ನಿಮಗೆ ಅಂತಹ ಒಂದು ನಾಣ್ಯದ ವಿಶೇಷತೆಯನ್ನು ಹೇಳಲಿದ್ದೇವೆ, ಅದನ್ನು ತಯಾರಿಸಲು ನೂರರಿಂದ ಸಾವಿರದವರೆಗೆ ಖರ್ಚಾಗಬಹುದು. ಆದರೆ ಅದನ್ನು ಹರಾಜು ಮಾಡಿದಾಗ, ಬಿಡ್‌ನಲ್ಲಿ 4 ಕೋಟಿ ರೂಪಾಯಿಗೆ ಸೇಲ್ ಆಗಿದೆ.
ಹೌದು, ಇಲ್ಲೊಂದು ವಿಶೇಷ ನಾಣ್ಯವಿದೆ. ಈ ನಾಣ್ಯವನ್ನು ಕೆಲ ದಿನಗಳ ಹಿಂದೆಯಷ್ಟೇ ಈ ನಾಣ್ಯವನ್ನ ಹರಾಜಿಗೆ ಇಟ್ಟಿದ್ದರು. ಹರಾಜಿನಲ್ಲಿ ಈ ನಾಣ್ಯ ಮಾತ್ರ ಬರೋಬ್ಬರಿ 4 ಕೋಟಿಗೂ ಅಧಿಕ ಹಣಕ್ಕೆ ಇದು ಸೇಲ್ ಆಗಿದೆ.
ಈ ನಾಣ್ಯವನ್ನು 1975 ರಲ್ಲಿ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಇದು 20ನೇ ಶತಮಾನದ ಅಪರೂಪದ ನಾಣ್ಯಗಳಲ್ಲೊಂದು ಎಂದು ವರದಿಗಳಲ್ಲಿ ಹೇಳಲಾಗಿದೆ. ಈ ನಾಣ್ಯವು ಅಮೇರಿಕನ್ ಡೈಮ್ ಆಗಿದೆ ಎಂದು ಹರಾಜು ಏಜೆನ್ಸಿ ಹೇಳುತ್ತದೆ, ಇದನ್ನು 1975 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮಿಂಟ್ ತಯಾರಿಸಿದೆ. ಸದ್ಯ ಅಮೆರಿಕದ ಗ್ರೇಟ್ ಕಲೆಕ್ಷನ್ ಹೆಸರಿನ ಸಂಸ್ಥೆಯೊಂದು ನಡೆಸಿದ ಹರಾಜಿನಲ್ಲಿ ಈ ನಾಣ್ಯ 4.25 ಕೋಟಿಗೆ ಹರಾಜಾಗಿದೆ ಎಂದು ಹೇಳಲಾಗಿದೆ.
ಇನ್ನು ಈ ನಾಣ್ಯವನ್ನು ನೋಡುವಾಗಲೇ ಒಂದು ಫೋಟೋ ಕಾಣಿಸುತ್ತದೆ. ಇದು ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರ ಚಿತ್ರ. ಇದರ ಹೊರತಾಗಿ ಪ್ರತಿ ನಾಣ್ಯದ ಮೇಲೆ ಮಾಡಲಾಗುವ ‘ಎಸ್’ ಚಿಹ್ನೆಯನ್ನು ಈ ನಾಣ್ಯದಲ್ಲಿ ಮುದ್ರಿಸಲಾಘಿಲ್ಲ. ಇಡೀ ಪ್ರಪಂಚದಲ್ಲಿ ಈ ರೀತಿಯ ಎರಡು ನಾಣ್ಯಗಳು ಮಾತ್ರ ಇವೆ, ಅದಕ್ಕಾಗಿಯೇ ಈ ನಾಣ್ಯ ತುಂಬಾ ವಿಶೇಷವಾಗಿದೆ ಎಂದು ಹೇಳಲಾಗಿದೆ.
ಗ್ರೇಟ್ ಕಲೆಕ್ಷನ್ ಹೆಸರಿನ ಹರಾಜು ಸಂಸ್ಥೆಯು ಈ ವಿಶೇಷ ನಾಣ್ಯದ ಹರಾಜನ್ನು ಆನ್‌ಲೈನ್‌ನಲ್ಲಿ ನಡೆಸಿತು. ಈ ಬಗ್ಗೆ ಕ್ಯಾಲಿಫೋರ್ನಿಯಾ ಗ್ರೇಟ್ ಕಲೆಕ್ಷನ್ಸ್ ನ ಅಧ್ಯಕ್ಷ ಇಯಾನ್ ರಸೆಲ್ ಮಾತನಾಡಿದ್ದು, ಈ ನಾಣ್ಯದ ಹರಾಜಿನ ಯಶಸ್ಸಿನಿಂದ ತುಂಬಾ ಸಂತೋಷವಾಗಿದ್ದು, 4.25 ಕೋಟಿ ರೂ.ಗೆ ಹರಾಜಾಗಿದೆ ಎಂದು ಹೇಳಿದ್ದಾರೆ.
ಇನ್ನು ಹರಾಜಿಗಿಂತಲೂ ಈ ನಾಣ್ಯ ಓಹಿಯೋದ ಮೂವರು ಸಹೋದರಿಯರ ಬಳಿ ಇತ್ತು. ಆದರೆ ಹರಾಜು ಕಂಪನಿಯೊಂದಿಗೆ ಮಾತನಾಡುವಾಗ, ಅವರು ತಮ್ಮ ಸಹೋದರನ ಮರಣದ ನಂತರ ಈ ನಾಣ್ಯವನ್ನು ಪಡೆದರು ಎಂದು ಹೇಳಿದ್ದಾರೆ. ಅವರ ಸಹೋದರ ಮತ್ತು ತಾಯಿ ಅಂತಹ ಎರಡು ನಾಣ್ಯಗಳನ್ನು ಹೊಂದಿದ್ದರಂತೆ, ಪಿತ್ರಾರ್ಜಿತವಾಗಿ ಈ ನಾಣ್ಯಗಳನ್ನು ಅವರು ಪಡೆದುಕೊಂಡಿದ್ದರು. ಆದರೆ 1978ರಲ್ಲಿ ಈ ನಾಣ್ಯಗಳಲ್ಲಿ ಒಂದನ್ನು 15 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರಂತೆ. ಇದೀಗ ಮತ್ತೊಂದು ನಾಣ್ಯವನ್ನ ಹರಾಜಿಗೆ ಇಟ್ಟು, ಬರೋಬ್ಬರಿ 4 ಕೋಟಿಗೂ ಅಧಿಕ ಹಣಕ್ಕೆ ಸೇಲ್ ಆಗಿದೆ ಎಂದು ವರದಿಯಾಗಿದೆ.
Leave a Comment