ʼಮರ್ಯಾದೆ ಇಲ್ಲದೆ ಮಾತನಾಡಲು ನಾನು ಬಂದಿಲ್ಲʼ; ರಾಜಕೀಯ ರ‍್ಯಾಲಿಯಲ್ಲಿ ಪವರ್ ತೋರಿಸಿದ ದಳಪತಿ ವಿಜಯ್
ನ್ಯೂಸ್ ಆ್ಯರೋ: ದಳಪತಿ ವಿಜಯ್ ಅವರು ಸಿನಿಮಾ ರಂಗ ತೊರೆಯಲು ರೆಡಿ ಆಗಿದ್ದಾರೆ. ಅವರು ‘ತಮಿಳಗ ವೆಟ್ರಿ ಕಳಗಮ್’ (ಟಿವಿಕೆ) ಪಕ್ಷ ಲಾಂಚ್ ಮಾಡಿದ್ದು ರ‍್ಯಾಲಿ ನಡೆಸಿದ್ದಾರೆ. ಇದು ಪಕ್ಷದ ಮೊದಲ ರ‍್ಯಾಲಿ ಆಗಿತ್ತು. ಈ ರ‍್ಯಾಲಿಯಲ್ಲಿ ಲಕ್ಷಾಂತರ ಮಂದಿ ಆಗಮಿಸಿದ್ದರು. ಅವರ ಎದುರು ವಿಜಯ್ ಅವರು ಮಾತನಾಡಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರು ಈ ರ‍್ಯಾಲಿ ಮೂಲಕ ತಮ್ಮ ಪವರ್ ತೋರಿಸಿದ್ದಾರೆ.
ವಿಜಯ್ ಅವರು ಏಕೆ ಯಾರ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ? ಯಾರ ವಿರುದ್ಧವೂ ಅವರು ಏಕೆ ಪ್ರಶ್ನೆ ಮಾಡುವುದಿಲ್ಲ ಎಂದು ಅನೇಕರು ಕೇಳಿದ್ದರಂತೆ. ಇದಕ್ಕೆ ವಿಜಯ್ ಉತ್ತರ ನೀಡಿದ್ದಾರೆ. ‘ವಿಜಯ್ ಯಾರ ಹೆಸರನ್ನು ಏಕೆ ತೆಗೆದುಕೊಂಡು ಮಾತನಾಡುವುದಿಲ್ಲ? ನನಗೇನು ಭಯವೇ ಎಂದು ಅನೇಕರು ಕೇಳುತ್ತಾರೆ. ಯಾರ ಹೆಸರು ಹೇಳಿ ರಾಜಕೀಯ ಮಾಡಲು ಬಂದಿಲ್ಲ. ಮರ್ಯಾದೆ ಇಲ್ಲದೆ ಮಾತನಾಡಲು ನಾನು ಬಂದಿಲ್ಲ. ಡಿಸೆಂಟ್ ಆಗಿ ಮಾತನಾಡುತ್ತೇವೆ, ಡಿಸೆಂಟ್ ಆಗಿ ಅಪ್ರೋಚ್ ಮಾಡುತ್ತೇವೆ’ ಎಂದರು.
ಚೆನ್ನೈನಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ವಿಲ್ಲುಪುರಂನಲ್ಲಿ ಈ ರ‍್ಯಾಲಿ ನಡೆದಿದೆ. ಸುಮಾರು ಐದರಿಂದ ಆರು ಲಕ್ಷ ಮಂದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರ‍್ಯಾಲಿ ನಡೆದ ಜಾಗದಲ್ಲಿ ಭರ್ಜರಿ ಟ್ರಾಫಿಕ್ ಜಾಮ್ ಆಗಿತ್ತು. ತಡರಾತ್ರಿವರೆಗೂ ಟ್ರಾಫಿಕ್ ಹಾಗೆಯೇ ಇತ್ತು.
‘ತಮಿಳಗ ವೆಟ್ರಿ ಕಳಗಮ್’ ಪಕ್ಷ ಸ್ಥಾಪನೆ ಆಗಿದ್ದು, ವಿಜಯ್ ಇದರ ಸ್ಥಾಪಕ. ಅವರು ತಮ್ಮ ನಟನಾ ವೃತ್ತಿ ಉತ್ತುಂಗದಲ್ಲಿ ಇರುವಾಗಲೇ ಅದನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ. ಸದ್ಯ ವಿಜಯ್ ಹಮ್ಮಿಕೊಂಡಿರೋ ರ‍್ಯಾಲಿ ಉಳಿದ ಪಕ್ಷಗಳಲ್ಲಿ ಭಯ ಮೂಡಿಸಿದೆ. 2026ರಲ್ಲಿ ವಿಜಯ್ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.
Leave a Comment