ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್​​; ಇನ್ಮುಂದೆ ಸಿಗಲಿದೆ ಫ್ರೀ ಡೇಟಾ

offer free mobile data
Spread the love

ನ್ಯೂಸ್ ಆ್ಯರೋ: ಮೊಬೈಲ್​​ ಬಳಕೆದಾರರಿಗೆ ಟೆಲಿಕಾಂ ಕಂಪನಿಗಳು ನೀಡೋ 1 ಜಿಬಿ, 2 ಜಿಬಿ ಡೇಟಾ ಸಾಕಾಗುವುದೇ ಇಲ್ಲ. ಕಾರಣ ರೀಲ್ಸ್​​ ನೋಡುತ್ತಾ ಕಾಲ ಕಳೆದರೆ ಡಾಟಾ ಖಾಲಿಯಾಗಿ ಹೋಗುತ್ತದೆ.

ಈಗಿನ ಕಾಲದಲ್ಲಿ ಎಲ್ಲರಿಗೂ ಇಂಟರ್​ನೆಟ್​ ಬೇಕೇ ಬೇಕು. ನಾವು ದುಡ್ಡು ಒಳ್ಳೆ ಪ್ಯಾಕ್​​ ರೀಚಾರ್ಜ್​​ ಮಾಡಿದ್ರೂ ದಿನಕ್ಕೆ ಗರಿಷ್ಠ 2GB ಡೇಟಾ ಸಿಗಬಹುದು. ಇದು ಯಾವುದೇ ಕಾರಣಕ್ಕೂ ಸಾಕಾಗುವುದಿಲ್ಲ. 2GB ಡೇಟಾಗಿಂತಲೂ ಹೆಚ್ಚು ಇಂಟರ್​​ನೆಟ್​ ಬೇಕಾಗುತ್ತದೆ. ಆದರೆ, ಎಷ್ಟು ಬಾರಿ ರೀಚಾರ್ಜ್​ ಮಾಡೋದು ಎಂದು ಎಲ್ಲರ ಯೋಚನೆ. ಇಂಥವರಿಗೆ ಟೆಲಿಕಾಂ ಕಂಪನಿಗಳು ಭರ್ಜರಿ ಆಫರ್​ ನೀಡಿವೆ.

ನೀವು ಇಂಟರ್​​ನೆಟ್​ ಬಳಸುತ್ತಾ ಕೆಲವೊಮ್ಮೆ ದಿಢೀರ್​​ ಡೇಟಾ ಖಾಲಿ ಆಗಬಹುದು. ಇದರ ​ಮರುದಿನ 1GB ಸಾಲ ಪಡೆಯುವ ಸೌಲಭ್ಯವನ್ನು ಈಗ ಟೆಲಿಕಾಂ ಕಂಪನಿಗಳು ಪರಿಚಯಿಸಿವೆ. ಯಾರಿಗಾದ್ರೂ ಇದ್ದಕ್ಕಿದ್ದಂತೆ ಇಂಟರ್​ನೆಟ್​ ಖಾಲಿಯಾದರೆ 1GB ಡೇಟಾ ಸಾಲವಾಗಿ ನೀಡುತ್ತವೆ. ನೀವು ಈ ಡೇಟಾ ಸಾಲ ಮರುಪಾವತಿಸಲು ಮತ್ತೆ ಸಿಮ್ ಕಾರ್ಡ್ ರೀಚಾರ್ಜ್ ಮಾಡಬೇಕಾಗುತ್ತದೆ.

ಏರ್‌ಟೆಲ್ ಬಳಕೆದಾರರು 5673# ಅನ್ನು ಡಯಲ್ ಮಾಡುವ ಮೂಲಕ 1GB ಪಡೆಯಬಹುದು. ಜಿಯೋ ಬಳಕೆದಾರರು ‘My Jio’ ಅಪ್ಲಿಕೇಶನ್‌ನಲ್ಲಿ ‘ತುರ್ತು ಡೇಟಾ’ ಆಯ್ಕೆ ಕ್ಲಿಕ್ ಮಾಡಿದ್ರೆ ಸಾಕು 1GB ಟಾಪ್ ಅಪ್ ಆಗುತ್ತೆ. VI ಬಳಕೆದಾರರು 121249 ಗೆ ಕರೆ ಮಾಡುವ ಮೂಲಕ ಡೇಟಾ ಸಾಲವನ್ನಾಗಿ ಪಡೆಯುವ ಸೌಲಭ್ಯ ಇದೆ. ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ಅನುಕೂಲಕರವಾಗೋ ನಿಟ್ಟಿನಲ್ಲಿ ಡೇಟಾ ಲೋನ್ ಸೌಲಭ್ಯ ಕಲ್ಪಿಸಿವೆ.

Leave a Comment

Leave a Reply

Your email address will not be published. Required fields are marked *

error: Content is protected !!