ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾಯಕಾರಿ ಸೇತುವೆಗಳ ಕುಸಿತ ಭೀತಿ‌ – ತಾಂತ್ರಿಕ ಸಮಿತಿಯಿಂದ ಸೇತುವೆಗಳ ಪರಿಶೀಲನೆ

IMG 20240819 WA0077
Spread the love

ನ್ಯೂಸ್ ಆ್ಯರೋ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಾರಕ್ಕೆ ಅಪಾಯ ಇರುವ ಸೇತುವೆಗಳ ಪರಿಶೀಲನೆಗೆ ತಾಂತ್ರಿಕ ತಜ್ಞರ ಸಮಿತಿ ಸೋಮವಾರ ಜಿಲ್ಲೆಗೆ ಆಗಮಿಸಿ ಪರಿಶೀಲಿಸಿತು.

ಪೊಳಲಿ, ಉಳಾಯಿಬೆಟ್ಟು ಮತ್ತು ಬಳ್ಕುಂಜೆಗೆ ಭೇಟಿ ನೀಡಿದ ತಾಂತ್ರಿಕ ತಜ್ಞ ತಂಡ ಅಲ್ಲಿನ ಸೇತುವೆಗಳನ್ನು ಖುದ್ದು ವೀಕ್ಷಿಸಿತು. ದೋಣಿಯಲ್ಲಿ ತೆರಳಿ ಸೇತುವೆಯ ಅಡಿಭಾಗಕ್ಕೂ ಭೇಟಿ ನೀಡಿ ವೀಕ್ಷಣೆ ನಡೆಸಿತು. ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಸ್ಥಳೀಯರೊಂದಿಗೂ ಮಾಹಿತಿ ಪಡೆಯಿತು.

ನಿವೃತ್ತ ಮುಖ್ಯ ಇಂಜಿನಿಯರ್ ಮತ್ತು ಸೇತುವೆ ತಜ್ಞ ಜೈಗೋಪಾಲ್, ಯೋಜನೆ ಮತ್ತು ರಸ್ತೆ ಆಸ್ತಿ ವ್ಯವಹಾರ ನಿರ್ವಹಣಾ ಕೇಂದ್ರ ಬೆಂಗಳೂರು ಇದರ ಹಿರಿಯ ಅಧಿಕಾರಿ ಮಹೇಂದ್ರ ಸಮಿತಿಯಲ್ಲಿದ್ದರು.

Img 20240819 Wa00804590819209415656218
Img 20240819 Wa00794758475269091572359
Img 20240819 Wa00787619473588179754328 1
Img 20240819 Wa00758214428268965444499
Img 20240819 Wa00763852312604833100066

ಮಂಗಳೂರು ವಿಭಾಗ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರ ಅಮರನಾಥ ಜೈನ್, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು ಆರ್.ಬಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment

Leave a Reply

Your email address will not be published. Required fields are marked *

error: Content is protected !!