ಇಂಟರ್ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು – ಹೇಗೆ ಅಂತೀರಾ? ಈ ವರದಿ ನೋಡಿ..

ಇಂಟರ್ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು – ಹೇಗೆ ಅಂತೀರಾ? ಈ ವರದಿ ನೋಡಿ..

ನ್ಯೂಸ್ ಆ್ಯರೋ‌ : ಆಧುನಿಕ ತಂತ್ರಜ್ಞಾನ ಜೀವನವನ್ನು ಹೇಗೆ ಸರಳಗೊಳಿಸುತ್ತದೆ ಎನ್ನುವುದಕ್ಕೆ ಗೂಗಲ್ ಮ್ಯಾಪ್ ಉತ್ತಮ ಉದಾರಣೆ. ಹಿಂದೆಲ್ಲ ಅಪರಿಚಿತ ಊರಿಗೆ ಹೊಗುವುದೆಂದರೆ ಅದೇ ದೊಡ್ಡ ಸಾಹಸದ ಕೆಲವಾಗಿತ್ತು. ಅವರಿವರಲ್ಲಿ ದಾರಿ ವಿಚಾರಿಸಿಕೊಳ್ಳಬೇಕಿತ್ತು. ಆದರೆ ಈಗ ಹಾಗಲ್ಲ. ಮ್ಯಾಪ್ ನಲ್ಲಿ ಊರ ಹೆಸರು ಹಾಕಿದರೆ ಅದುವೇ ದಾರಿ ತೋರಿಸುತ್ತದೆ.

ಆಫ್ ಲೈನಿನಲ್ಲೂ ಬಳಸಬಹುದು

ಇನ್ನೊಂದು ಮುಖ್ಯ ವಿಚಾರ ಎಂದರೆ ಆಫ್ ಲೈನ್ ನಲ್ಲೂ ಮ್ಯಾಪ್ ಬಳಸಬಹುದಾಗಿದೆ. ಡೇಟಾ ಖಾಲಿಯಾಗಿದ್ದರೆ ಅಥವಾ ನೆಟ್ ವರ್ಕ್ ಇಲ್ಲದ ಪ್ರದೇಶಕ್ಕೆ ಹೋಗುತ್ತಿದ್ದರೆ ಚಿಂತಿಸಬೇಕಿಲ್ಲ. ಯಾಕೆಂದರೆ ಆಫ್ ಲೈನ್ ನಲ್ಲೂ ಗೂಗಲ್ ಮ್ಯಾಪ್ ಕಾರ್ಯ ನಿರ್ವಹಿಸುತ್ತದೆ.

ಒಮ್ಮೆ ನೀವು ಮ್ಯಾಪ್ ಡೌನ್ ಲೋಡ್ ಮಾಡಿದ ನಂತರ ಇಂಟರ್ ನೆಟ್ ಇಲ್ಲದೆ ಗಮ್ಯವನ್ನು ಸರ್ಚ್ ಮಾಡಬಹುದು. ಅದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.

ಗೂಗಲ್ ಮ್ಯಾಪ್ ಓಪನ್ ಮಾಡಿ. ನೀವು ತಲುಪಲಿರುವ ಸ್ಥಳವನ್ನು ಹುಡುಕಾಡಿ. ಆಗ ಪರದೆಯ ಕೆಳಭಾಗದಲ್ಲಿ ಡೈರಕ್ಷನ್ ಆಯ್ಕೆ ಕಾಣ ಸಿಗುತ್ತದೆ. ಅದನ್ನು ಟ್ಯಾಪ್ ಮಾಡಿ. ಬಳಿಕ ನೀವು ಯಾವ ರೀತಿ ಪ್ರಯಾಣ ಬೆಳೆಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ. ನಂತರ ಬಿಳಿ ಬಾರ್ ಅನ್ನು ಟ್ಯಾಪ್ ಮಾಡಿ. ಇದು ಸ್ಕ್ರೀನ್ ನ ಕೆಳ ಭಾಗದಲ್ಲಿದೆ. ಅದರಲ್ಲಿ ಸೇವ್ ಆಫ್ ಲೈನ್ ಟ್ಯಾಪ್ ಮಾಡಿ.

ಇನ್ನು ಗೂಗಲ್ ಮ್ಯಾಪ್ ಬಳಕೆದಾರರು ತಮ್ಮ ಮನೆಯ ನಿಖರ ವಿಳಾಸವನ್ನು ಉಳಿಸಿಕೊಳ್ಳುವ ಜೊತೆಗೆ ಇತರರೊಂದಿಗೆ ಹಂಚಿಕೊಳ್ಳಬಹುದು. ತಮ್ಮ ಮನೆಯ ವಿಳಾಸಗಳನ್ನು ಸೇವ್ ಮಾಡುವಾಗ ಮತ್ತು ಶೇರ್ ಮಾಡುವಾಗ ಪ್ಲಸ್ ಕೋಡ್ ಗಳನ್ನು ಬಳಸಬಹುದಾಗಿದೆ. ಈ ಪ್ಲಸ್ ಕೋಡ್ ಗಳನ್ನು ಮನೆಯ ವಿಳಾಸಕ್ಕೆ ಸೆಟ್ ಮಾಡಬಹುದಾಗಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *