ಸ್ವಿಗ್ಗಿ ಇನ್ಸ್ಟಾಮಾರ್ಟ್ ನಲ್ಲಿ ಹೆಚ್ಚು ಮಾರಾಟವಾಗ್ತಿದೆ ಈ ವಸ್ತು; ಇನ್‌ಸ್ಟಾಮಾರ್ಟ್ ಸಿಇಒ ಕೊಟ್ರು ಮಹತ್ವದ ಮಾಹಿತಿ

swiggy instamart
Spread the love

ನ್ಯೂಸ್ ಆ್ಯರೋ: ಭಾರತದ ಪ್ರಮುಖ ಆಹಾರ ವಿತರಣಾ ವೇದಿಕೆಗಳಲ್ಲಿ ಒಂದಾದ ಸ್ವಿಗ್ಗಿಯ ಕಿರಾಣಿ ವಿತರಣಾ ಸೇವೆಯನ್ನು ಸ್ವಿಗ್ಗಿ ಇನ್ಸ್ಟಾಮಾರ್ಟ್ ಮೂಲಕ ಗ್ರಾಹಕರು ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಮನೆಗೆ ಅಗತ್ಯವಿರುವ ವಸ್ತುಗಳನ್ನು ತರಲು ಜನರಿಗೆ ಮಾರ್ಕೆಟ್ ಗೆ ಹೋಗ್ಬೇಕಾಗಿಲ್ಲ.

ಹತ್ತೇ ಹತ್ತು ನಿಮಿಷದಲ್ಲಿ ಮನೆಗೆ ಬಯಸಿದ ವಸ್ತುಗಳು ಬರುವ ಕಾರಣ ಜನರು, ಮೊಬೈಲ್ ಅಪ್ಲಿಕೇಷನ್ ಬಳಕೆಯನ್ನು ಹೆಚ್ಚಾಗಿ ಮಾಡ್ತಿದ್ದಾರೆ. ಇದ್ರಲ್ಲಿ ಸ್ವಿಗ್ಗಿ ಇನ್ಸ್ಟಾಮಾರ್ಟ್ ಕೂಡ ಸೇರಿದೆ. ಗ್ರಾಹಕರು ಈ ಅಪ್ಲಿಕೇಷನ್ ಮೂಲಕ, ಹಾಲು, ಮೊಸರು, ತರಕಾರಿ ಸೇರಿದಂತೆ ಎಲ್ಲ ಕಿರಾಣಿ ವಸ್ತುಗಳನ್ನು ಆರ್ಡರ್ ಮಾಡ್ತಾರೆ.

ಇಂಥ ಅಪ್ಲಿಕೇಷನ್ ನಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ವಸ್ತುಗಳು ಅಂದ್ರೆ ನಿತ್ಯ ಬಳಸುವ ಹಾಲು, ಮೊಸರು ಅಂತ ನಾವು ಭಾವಿಸ್ತೇವೆ. ಆದ್ರೆ ನಮ್ಮ ನಂಬಿಕೆ ಸುಳ್ಳು. ಕಾಲಕ್ಕೆ ತಕ್ಕಂತೆ ಸ್ವಿಗ್ಗಿ ಇನ್ಸ್ಟಾಮಾರ್ಟ್ ನಲ್ಲಿ ವಸ್ತುಗಳ ಬೇಡಿಕೆ ಬದಲಾದ್ರೂ ಸದ್ಯ ಯಾವ ವಸ್ತುವಿಗೆ ಹೆಚ್ಚು ಡಿಮ್ಯಾಂಡ್ ಇದೆ ಎಂಬುದನ್ನು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಸಿಇಒ ಶ್ರೀಹರ್ಷ ಮಾಜೆಟಿ ಹೇಳಿದ್ದಾರೆ. ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿದ್ದ ಅವರು, ಸದ್ಯ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನಲ್ಲಿ ಯಾವ ವಸ್ತು ಹೆಚ್ಚು ಸೇಲ್ ಆಗ್ತಿದೆ ಎಂಬುದನ್ನು ತಿಳಿಸಿದ್ದಾರೆ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಸಿಇಒ ಶ್ರೀಹರ್ಷ ಮಾಜೆಟಿ ಪ್ರಕಾರ, ಸ್ವಿಗ್ಗಿ ಇನ್‌ಸ್ಟಾಮಾರ್ಟ್ನಲ್ಲಿ ಸದ್ಯ ಬೆಡ್ ಶೀಟ್ ಗೆ ಬೇಡಿಕೆ ಇದೆ. ನಿಮಗೆ ಅಚ್ಚರಿ ಆಗ್ಬಹುದು. ಹತ್ತು ನಿಮಿಷಕ್ಕೆ ಡೆಲಿವರಿಯಾಗುವ ವಸ್ತುಗಳಲ್ಲಿ ಜನರು ಬೆಡ್ ಶೀಟ್ (Bed Sheet) ಕೂಡ ಸೇರಿಸಿದ್ದಾರೆ. ಹಿಂದೆ ಜನರು ಬ್ಯಾಟರಿಯನ್ನು ಹೆಚ್ಚು ಖರೀದಿ ಮಾಡಿದ್ರು. ಈಗ ಬೆಡ್‌ಶೀಟ್‌ ಸರ್ಚ್ ಮಾಡ್ತಿದ್ದಾರೆ. ಜನರ ಅಗತ್ಯಕ್ಕೆ ತಕ್ಕಂತೆ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಹೋಗುತ್ತೇವೆ ಎಂದು ಶ್ರೀಹರ್ಷ ಹೇಳಿದ್ದಾರೆ.

ಜನರಿಗೆ 10 ನಿಮಿಷದಲ್ಲಿ ಬೆಡ್‌ಶೀಟ್ ಬೇಕು. ಆದರೆ ಅವರಿಗೆ ಏಕೆ ಬೇಕು ಎಂದು ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಗ್ರಾಹಕರಿಗೆ ಬೆಡ್‌ಶೀಟ್ ಅಗತ್ಯವಿರುತ್ತದೆ. ಅದು ಹತ್ತು ನಿಮಿಷಗಳಲ್ಲಿ ಸಿಗುತ್ತೆ ಎಂದಾದ್ರೆ ಮಾತ್ರ ಅವರು ಆರ್ಡರ್ ಮಾಡ್ತಾರೆ ಎಂದು ಶ್ರೀಹರ್ಷ ತಿಳಿಸಿದ್ದಾರೆ. ಫ್ಲಾಟ್ಫಾರ್ಮ್ ಗೆ ಬರ್ತಿದ್ದಂತೆ ಅವರು ಬೆಡ್ ಶೀಟ್ ಜೊತೆ ಇನ್ನೊಂದಿಷ್ಟು ವಸ್ತುಗಳನ್ನು ಆರ್ಡರ್ ಮಾಡ್ತಾರೆ.

ಹತ್ತು ನಿಮಿಷದಲ್ಲಿ ಇಡೀ ವಿಶ್ವವನ್ನು ತಲುಪಲು ಸಾಧ್ಯವಿಲ್ಲ. ಭಾರತದಲ್ಲಿ ಇನ್ಸ್ಟಂಟ್ ಕಾಮರ್ಸ್ ಮಾರ್ಕೆಟ್ ಮೌಲ್ಯ 5.5 ಬಿಲಿಯನ್ ಡಾಲರ್ ಗಿಂತ ಹೆಚ್ಚಿದೆ. ಯುದ್ಧದ ಸಮಯದಲ್ಲಿ ಸ್ವಿಗ್ಗಿ ಜನ್ಮವಾಗಿದೆ ಎಂದು ಶ್ರೀಹರ್ಷ ಹೇಳಿದ್ದಾರೆ. ಎರಡು ವರ್ಷಗಳಿಂದ ನಾವು ಶಾಂತವಾದ ಕ್ಷಣ ನೆನಪಿಲ್ಲ. ನಮಗೆ ಬೇರೆ ಪ್ರಪಂಚ ಗೊತ್ತಿಲ್ಲ ಎಂದು ಶ್ರೀಹರ್ಷ ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!