ಭಾರತೀಯ ರೈಲ್ವೆಯಿಂದ ಸ್ವರೈಲ್‌ ಆ್ಯಪ್‌; ರೈಲಿನ ಎಲ್ಲಾ ಸೌಲಭ್ಯಗಳಿಗೂ ಒಂದೇ ಕಡೆ ಲಭ್ಯ

SwaRail SuperApp
Spread the love

ನ್ಯೂಸ್ ಆ್ಯರೋ: ಒಂದೇ ಡಿಜಿಟಲ್‌ ಪ್ಲಾರ್ಟ್‌ಫಾರ್ಮ್‌ನಲ್ಲಿ ಹತ್ತಾರು ಸೇವೆಗಳನ್ನು ನೀಡುವ ದಿಸೆಯಲ್ಲಿ ಭಾರತೀಯ ರೈಲ್ವೆ ಹೊಸ ಹೆಜ್ಜೆ ಇರಿಸಿದೆ. ರೈಲು ಟಿಕೆಟ್‌ ಬುಕ್‌ ಮಾಡುವುದರಿಂದ ಹಿಡಿದು ಊಟ – ತಿಂಡಿ ಆರ್ಡರ್‌ ಮಾಡುವವರೆಗೆ ಹಲವು ಸೇವೆಗಳನ್ನು ಒದಗಿಸುವ ‘ಸ್ವರೈಲ್‌’ ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದೆ. ಶೀಘ್ರವೇ ಈ ಆ್ಯಪ್‌ ಎಲ್ಲರಿಗೂ ಲಭ್ಯವಾಗಲಿದೆ.

ರೈಲ್ವೆಯ ಹಲವು ಸೌಲಭ್ಯ ಪಡೆಯಲು ಈಗ ವಿವಿಧ ಆ್ಯಪ್‌ಗಳನ್ನು ಬಳಸಬೇಕು. ರಿಸರ್ವ್‌ ಟಿಕೆಟ್‌ಗಳಿಗೆ ಐಆರ್‌ಸಿಟಿಸಿ, ಅನ್‌ರಿಸರ್ವ್‌ ಟಿಕೆಟ್‌ಗಳಿಗೆ ಯುಟಿಎಸ್‌ ಸೇರಿ ಒಂದೊಂದು ಸೌಲಭ್ಯಕ್ಕೆ ಬೇರೊಂದು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಇದನ್ನು ತಪ್ಪಿಸಿ, ಒಂದೇ ಆ್ಯಪ್‌ನಲ್ಲಿ ಎಲ್ಲ ಸೌಲಭ್ಯ ಪಡೆಯಲು ಅಭಿವೃದ್ಧಿಪಡಿಸಿರುವುದೇ ಸ್ವರೈಲ್‌ ಆ್ಯಪ್‌ ಆಗಿದೆ. ಸದ್ಯ ಇದನ್ನು ಪ್ರಯೋಗಕ್ಕಾಗಿ ಬೀಟಾ ವರ್ಷನ್‌ ಬಿಡುಗಡೆ ಮಾಡಲಾಗಿದ್ದು, ಸೀಮಿತ ಜನರಿಗೆ ಮಾತ್ರ ಇದು ಲಭ್ಯವಾಗಿದೆ. ಶೀಘ್ರದಲ್ಲೇ ಇದನ್ನು ಎಲ್ಲರಿಗೂ ಲಭ್ಯವಾಗುವಂತೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ನೋಂದಣಿ ಹೇಗೆ?

ಆಂಡ್ರಾಯ್ಡ್‌, ಐಒಎಸ್‌ನಲ್ಲಿಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು.
ಯುಟಿಎಸ್‌ ಲಾಗ್‌ಇನ್‌ ಅಥವಾ ಹೊಸ ಸದಸ್ಯರಾಗಿ ನೋಂದಣಿ ಸಾಧ್ಯ.
ಲಾಗ್‌ಇನ್‌ಗೆ ಬೇಕಾದ ಮಾಹಿತಿ ಒದಗಿಸಿ, ಎಂಪಿನ್‌ ಸೆಟ್‌ ಮಾಡುವುದು.
ಹೋಮ್‌ ಪೇಜ್‌ ಓಪನ್‌ ಆಗಿ, ಸೇವೆಗಳ ಮಾಹಿತಿ ದೊರೆಯುತ್ತದೆ.

ಒಂದೇ ಆ್ಯಪ್‌ನಲ್ಲಿ ಏನೆಲ್ಲ ಸೌಲಭ್ಯಗಳು?

ರಿಸರ್ವ್‌ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು.
ಅನ್‌ ರಿಸರ್ವ್‌ ಟಿಕೆಟ್‌ಗಳನ್ನೂ ಬುಕ್‌ ಮಾಡಬಹುದು.
ಪ್ಲಾರ್ಟ್‌ ಫಾರ್ಮ್‌ ಟಿಕೆಟ್‌ ಬುಕ್ಕಿಂಗ್‌.
ಪಾರ್ಸೆಲ್‌ ಮಾಡಿದ ವಸ್ತುಗಳ ಪರಿಶೀಲನೆ.
ರೈಲುಗಳು, ಪಿಎನ್‌ಆರ್‌ ಪರಿಶೀಲನೆ.
ಊಟ, ತಿಂಡಿ, ಪಾನೀಯ ಆರ್ಡರ್‌.
ಸೇವೆ ವ್ಯತ್ಯಯ ಸೇರಿ ಯಾವುದೇ ದೂರು ದಾಖಲಿಸುವುದು.

ಇನ್ನು ವಾರಕ್ಕೆ ಮೂರು ಬಾರಿ ಸಂಚರಿಸುವ ಹಜ್ರತ್‌ ನಿಝಾಮುದ್ದೀನ್‌ ತಿರುವನಂತಪುರಂ ಸೆಂಟ್ರಲ್‌ ರಾಜಧಾನಿ ಎಕ್ಸ್‌ಪ್ರೆಸ್‌ ಹಾಗೂ ಹಝ್ರತ್‌ ನಿಜಾಮುದ್ದೀನ್‌ ಮಡಗಾಂವ್‌ ವಾರಕ್ಕೆರಡು ಬಾರಿ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹೆಚ್ಚುವರಿಯಾಗಿ ಎರಡು ಬೋಗಿ ಅಳವಡಿಸಲಾಗಿದೆ. ಇನ್ನು ರೈಲುಗಳ ಆಗಮನ, ನಿರ್ಗಮನ, ನಿಲುಗಡೆ ತಾಣಗಳ ಮಾಹಿತಿಗಾಗಿ ಎನ್‌ಟಿಇಎಸ್‌ ಆ್ಯಪ್‌ ಡೌನ್‌ ಲೋಡ್‌ ಮಾಡಿ ಪಡೆದುಕೊಳ್ಳಬಹುದು.

Leave a Comment

Leave a Reply

Your email address will not be published. Required fields are marked *