Sturgeon Moon : ನಾಳೆ ಖಗೋಳದಲ್ಲಿ ಸೂಪರ್ ಮೂನ್ ಮತ್ತು ಬ್ಲೂ ಮೂನ್ ಸಂಗಮ – ಅಪರೂಪದ ಘಟನೆ ನಡೆಯೋದು ಯಾವಾಗ? ವೀಕ್ಷಣೆ ಹೇಗೆ?
ನ್ಯೂಸ್ ಆ್ಯರೋ : ಖಗೋಳದಲ್ಲಿ ಆಗಾಗ ಕೌತುಕಗಳು ನಡೆಯುತ್ತಲೇ ಇರುತ್ತವೆ. ಅವುಗಳ ಪೈಕಿ ಸೂಪರ್ ಮೂನ್ ಸಾಮಾನ್ಯವಾಗಿ ವರ್ಷದಲ್ಲಿ 3-4 ಬಾರಿ ಮಾತ್ರ ಸಂಭವಿಸುತ್ತವೆ. ನಾಳೆ ಸೂಪರ್ಮೂನ್ ಹಾಗೂ ಬ್ಲೂ ಮೂನ್ ಒಂದಾಗುವ ಅಪರೂಪದ ಘಟನೆ ನಡೆಯಲಿದೆ.
ಇಂತಹ ಅಪರೂಪದ ಖಗೋಳ ವಿಸ್ಮಯ ಎಲ್ಲ ಬಾರಿಯೂ ಆಗುವುದಿಲ್ಲ. ಆದರೆ ಕೆಲವೊಮ್ಮೆ ಮಾತ್ರ ಇದು ಸಂಭವಿಸುತ್ತದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.
ನಾಳೆ ಆಗಸ್ಟ್ 19ರಂದು ಕಾಣುವ ಹುಣ್ಣಿಮೆಗೆ ರಕ್ಷಾ ಬಂಧನ ಮತ್ತು ನೂಲು ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ಆದರೆ ಇದನ್ನು ಸಾಂಪ್ರದಾಯಿಕವಾಗಿ ಸ್ಟರ್ಜನ್ ಮೂನ್ ಎಂದು ಕರೆಯಲಾಗುತ್ತದೆ.
ಈ ಸೂಪರ್ಮೂನ್, ಬ್ಲೂ ಮೂನ್ ಅನ್ನು ಸ್ಟರ್ಜನ್ ಮೂನ್ ಎಂದೂ ಕರೆಯಲಾಗುತ್ತಿದೆ. ಈ ವರ್ಷ ಸತತ ನಾಲ್ಕು ಸೂಪರ್ಮೂನ್ಗಳಲ್ಲಿ ಇದು ಮೊದಲನೆಯದಾಗಿದೆ. ಮುಂದಿನವುಗಳು ಸೆಪ್ಟೆಂಬರ್ 18, ಅಕ್ಟೋಬರ್ 17 ಮತ್ತು ನವೆಂಬರ್ 15 ಎಂದು ನಿಗದಿಪಡಿಸಲಾಗಿದೆ.
ಆಗಸ್ಟ್ 19ರಂದು ರಾತ್ರಿ 2.26ರ ವೇಳೆಗೆ ಚಂದ್ರ ಸರಿಸುಮಾರು 30 ಪ್ರತಿಶತದಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಾನೆ. ಆದರೆ ನೀವು ಇರುವ ಸ್ಥಳ ಮತ್ತು ಸಮಯ ವಲಯದ ಪ್ರಕಾರ ಸಮಯ ಬದಲಾಗುತ್ತದೆ.
ಇನ್ನು ಸ್ಟರ್ಜನ್ ಮೂನ್ ಅನ್ನು ಉತ್ತರ ಅಮೇರಿಕಾ, ಏಷ್ಯಾ, ಆಸ್ಟ್ರೇಲಿಯಾ, ಭಾರತ, ಯುರೋಪ್ ಮತ್ತು ಆಫ್ರಿಕಾದಲ್ಲಿ ವೀಕ್ಷಿಸಬಹುದಾಗಿದೆ.
Leave a Comment