ಬೆಳ್ತಂಗಡಿ : ಅಕ್ರಮ ಗಣಿಗಾರಿಕೆ ಆರೋಪಿಯ ಪರ ಪ್ರತಿಭಟನೆ – ಶಾಸಕ ಹರೀಶ್ ಪೂಂಜಾ ಸಹಿತ 65 ಮಂದಿಗೆ ಕೋರ್ಟ್ ಸಮನ್ಸ್ ಜಾರಿ
ನ್ಯೂಸ್ ಆ್ಯರೋ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಪರ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆತ್ತ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಸೇರಿದಂತೆ 65 ಮಂದಿ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಈಗಾಗಲೇ ದಾಖಲಾಗಿರುವ ಪ್ರಥಮ ಕೇಸ್‌ನಲ್ಲಿ 28 ಮಂದಿ ಮತ್ತು 2ನೇ ಕೇಸ್‌ನಲ್ಲಿ 37 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಜುಲೈ 10ರಂದು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ.
ಮೇ 18ರ ಪ್ರತಿಭಟನೆಗೆ ಸಂಬಂಧಿಸಿದಂತೆ ಹರೀಶ್ ಪೂಂಜ, ರಾಜೇಶ್ ಎಂ.ಕೆ., ಜಗದೀಶ ಕನ್ನಾಜೆ, ಚಂದ್ರಹಾಸ ದಾಸ್, ಪ್ರಕಾಶ್ ಆಚಾರಿ, ಸಂದೀಪ್ ರೈ, ನಿತೇಶ್ ಶೆಟ್ಟಿ, ಪವನ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಪ್ರದೀಪ್ ಶೆಟ್ಟಿ ಬರಾಯ, ರಂಜಿತ್ ಶೆಟ್ಟಿ, ರಿಜೇಶ್ ಮಂದಾರಗಿರಿ, ಅವಿನಾಶ್ ಮಂದಾರಗಿರಿ, ಚಂದನ್ ಕಾಮತ್, ಸಂತೋಷ್ ಕುಮಾರ್ ಜೈನ್, ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ ರಾವ್, ರಾಜ್ ಪ್ರಕಾಶ್ ಶೆಟ್ಟಿ, ಗಣೇಶ್ ಲಾೖಲ, ವಾಸು ಪಡ್ತಾಡಿ, ವಿಠಲ ಆಚಾರ್ಯ, ಗಣೇಶ್ ಕೆ.ಕೊಡಪತ್ತಾಯ, ವಿಕಾಸ್ ಶೆಟ್ಟಿ, ರವಿನಂದನ್ ಉಪ್ಪಿನಂಗಡಿ, ಸುಖೇಶ್, ನವೀನ್ ಕುಲಾಲ್, ಪದ್ಮನಾಭ ಶೆಟ್ಟಿ ಮತ್ತು ಶಂಕರ ಸಪಲ್ಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅದೇ ರೀತಿ ಮೇ 20ರಂದು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ಹರೀಶ್ ಪೂಂಜ ಗರ್ಡಾಡಿ, ಜಯಾನಂದ ಗೌಡ, ರಾಜೇಶ್ ಎಂ.ಕೆ., ನವೀನ್ ನೆರಿಯ, ಚಂದ್ರಹಾಸ ಕಾವು, ಜಗದೀಶ್ ಲಾೖಲ, ಗಿರೀಶ್ ಡೊಂಗ್ರೆ, ಉಮೇಶ್ ಕುಲಾಲ್, ಯಶವಂತ ಗೌಡ, ದಿನೇಶ್ ಪೂಜಾರಿ, ಶಶಿಧರ್ ಕಲ್ಮಂಜ, ಗಣೇಶ್ ಕೆ.ಪುದುವೆಟ್ಟು, ರವಿನಂದನ್ ನಟ್ಟಿಬೈಲು, ರಂಜಿತ್ ಶೆಟ್ಟಿ, ಅವಿನಾಶ್, ರಿಜೇಶ್, ಸುಧೀರ್, ಶಂಕರ ಸಪಲ್ಯ, ಸುಖೇಶ್, ಪದ್ಮನಾಭ ಶೆಟ್ಟಿ, ನವೀನ್ ಕುಲಾಲ್, ವಿಕಾಸ್ ಶೆಟ್ಟಿ, ಸಂತೋಷ್ ಕುಮಾರ್ ಜಿ., ಚಂದನ್ ಕಾಮತ್, ಪ್ರದೀಪ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ರಾಜ್ ಪ್ರಕಾಶ್ ಶೆಟ್ಟಿ, ವಿಠಲ ಆಚಾರ್ಯ, ಶ್ರೀನಿವಾಸ ರಾವ್, ಗಣೇಶ್ ಲಾೖಲ, ರಂಜಿತ್ ಶೆಟ್ಟಿ, ರತನ್ ಶೆಟ್ಟಿ, ಪ್ರಕಾಶ್ ಆಚಾರಿ, ನಿತೇಶ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಸಂದೀಪ್ ರೈ, ಪವನ್ ಶೆಟ್ಟಿ, ಶ್ರೀರಾಜ್ ಶೆಟ್ಟಿ ಮತ್ತು ಭರತ್ ಶೆಟ್ಟಿ ಎಂಬವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಮಾಡಿದ್ದ ಆರೋಪಿಯ ಬಂಧನ ಖಂಡಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದ್ದಲ್ಲದೆ, ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ ಹಾಗೂ ಪ್ರತಿಭಟನೆ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ದಾಖಲಾಗಿದ್ದ ಎರಡು ಎಫ್ಐಆರ್‌ಗಳನ್ನು ಪ್ರಶ್ನಿಸಿ ಶಾಸಕ ಹರೀಶ್ ಪೂಂಜ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠ, ವ್ಯಕ್ತಿಯನ್ನು ಬಂಧಿಸಿದಾಗ ನ್ಯಾಯಾಲಯದ ಮೂಲಕ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸುವುದು ಬಿಟ್ಟು ಜನಪ್ರತಿನಿಧಿಯೆಂಬ ಕಾರಣಕ್ಕೆ ಠಾಣೆ ಮುಂದೆ ಹೋಗಿ ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ಶಾಸಕರ ನಡೆಯನ್ನು ಕಟುವಾಗಿ ಟೀಕಿಸಿದ್ದು, ಭಾರೀ ಸುದ್ದಿಯಾಗಿತ್ತು.
Leave a Comment