ಹಿಂದೂ ದೇವಾಲಯಗಳಲ್ಲಿ ಮಹತ್ವದ ಬದಲಾವಣೆ; ದೇವಸ್ಥಾನಗಳಲ್ಲಿ ಪುರುಷರ ಮೇಲ್ವಸ್ತ್ರ ತೆಗೆಯುವ ಪದ್ದತಿ ರದ್ದತಿಗೆ ಕ್ರಮ
ನ್ಯೂಸ್ ಆ್ಯರೋ: ಪುರುಷ ಭಕ್ತರು ದೇವಸ್ಥಾನಗಳಿಗೆ ಪ್ರವೇಶಿಸುವ ಮುನ್ನ ತಮ್ಮ ಮೈಮೇಲಿನ ಬಟ್ಟೆ ತಗೆಯುವ ಪದ್ದತಿಯನ್ನು ರದ್ದು ಮಾಡಲು ದೇವಸ್ವಂ ಮಂಡಳಿ ಯೋಜಿಸುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಪ್ರಸಿದ್ಧ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ನೀಡಿದ ಹೇಳಿಕೆಯನ್ನು ಸಿಎಂ ಪಿಣರಾಯಿ ವಿಜಯನ್ ಅನುಮೋದಿಸಿದ್ದು, ದೇವಸ್ವಂ ಬೋರ್ಡ್ ಇದರ ಬಗ್ಗೆ ಕ್ರಮಕೈಗೊಳ್ಳಲಿದೆ ಎಂದಿದ್ದಾರೆ.
ಮಂಗಳವಾರ ಶಿವಗಿರಿ ತೀರ್ಥೋದ್ಭವ ಸಮಾವೇಶದಲ್ಲಿ ಮಾತನಾಡಿದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ದೇವಸ್ಥಾನದಲ್ಲಿ ಪುರುಷರು ತಮ್ಮ ಮೇಲಂಗಿಯನ್ನು ತೆಗೆಯುವುದು ಅನಿಷ್ಠ ಪದ್ದತಿ ಎಂದು ಕರೆದರು. ಅಲ್ಲದೆ ಈ ಪದ್ದತಿಯನ್ನು ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯನ್, “ದೇವಸ್ವಂ ಮಂಡಳಿಯ ಪ್ರತಿನಿಧಿಯೊಬ್ಬರು ಇಂದು ನನ್ನನ್ನು ಭೇಟಿ ಮಾಡಿದರು, ಅವರು ಆ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು. ನಾನು ಹೇಳಿದ್ದೇನೆ ಅದು ಒಳ್ಳೆಯದು … ತುಂಬಾ ಒಳ್ಳೆಯ ಸಲಹೆ. .” ಆದರೆ ಯಾವ ದೇವಸ್ವಂ ಮಂಡಳಿಯು ಈ ನಿರ್ಧಾರವನ್ನು ಜಾರಿಗೆ ತರಲಿದೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಿಲ್ಲ. ಕೇರಳವು ಐದು ಪ್ರಮುಖ ದೇವಸ್ವಂಗಳನ್ನು ಹೊಂದಿದೆ–ಗುರುವಾಯೂರ್, ತಿರುವಾಂಕೂರ್, ಮಲಬಾರ್, ಕೊಚ್ಚಿನ್ ಮತ್ತು ಕೂಡಲ್ಮಾಣಿಕ್ಯಂ–ಒಟ್ಟಾರೆಯಾಗಿ ಸುಮಾರು 3,000 ದೇವಾಲಯಗಳನ್ನು ನಿರ್ವಹಿಸುತ್ತಿದೆ.
Leave a Comment