ಆಥಿಯಾ ಶೆಟ್ಟಿಯನ್ನು ವರಿಸಿದ ಕೆ.ಎಲ್‌.ರಾಹುಲ್‌ಗೆ ಉಡುಗೊರೆಗಳ ಸುರಿಮಳೆ: ಕಿಂಗ್‌ ಕೊಹ್ಲಿ, ಸಲ್ಮಾನ್‌ ಖಾನ್‌ನಿಂದ ಐಷಾರಾಮಿ ಕಾರು, ಧೋನಿಯಿಂದ ದುಬಾರಿ ಬೈಕ್‌ ಗಿಫ್ಟ್‌

ಆಥಿಯಾ ಶೆಟ್ಟಿಯನ್ನು ವರಿಸಿದ ಕೆ.ಎಲ್‌.ರಾಹುಲ್‌ಗೆ ಉಡುಗೊರೆಗಳ ಸುರಿಮಳೆ: ಕಿಂಗ್‌ ಕೊಹ್ಲಿ, ಸಲ್ಮಾನ್‌ ಖಾನ್‌ನಿಂದ ಐಷಾರಾಮಿ ಕಾರು, ಧೋನಿಯಿಂದ ದುಬಾರಿ ಬೈಕ್‌ ಗಿಫ್ಟ್‌

ನ್ಯೂಸ್‌ಆ್ಯರೋ : ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಅವರ ಮಗಳು ಆಥಿಯಾ ಶೆಟ್ಟಿಯನ್ನು ವರಿಸಿರುವ ಭಾರತದ ಕ್ರಿಕೆಟಿಗ ಕೆ.ಎಲ್. ರಾಹುಲ್‌ಗೆ ಖ್ಯಾತ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಬಿಎಂಡಬ್ಲ್ಯು ಕಾರು, ಎಂ.ಎಸ್. ಧೋನಿ ದುಬಾರಿ ಬೈಕ್ ಅನ್ನು ಮದುವೆಗೆ ಉಡುಗೊರೆಯಾಗಿ ನೀಡಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗ, ಮಂಗಳೂರು ಮೂಲದ ಕೆ.ಎಲ್. ರಾಹುಲ್ ಅವರು ತನ್ನ ಗೆಳತಿ, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರನ್ನು ಜನವರಿ 23 ಮುಂಬೈನ ಖಂಡಾಲಾದಲ್ಲಿ ವಿವಾಹವಾಗಿದ್ದರು. ಈ ಸಮಯದಲ್ಲಿ ಟೀಂ ಇಂಡಿಯಾ ಆಟಗಾರರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ನಿರತರಾಗಿದ್ದರು. ಹಾಗಾಗಿ, ರಾಹುಲ್ ಮದುವೆಗೆ ಯಾರೂ ಹೋಗಿಲ್ಲ. ಆದರೆ, ಅವರು ತಮ್ಮ ಶುಭಾಶಯಗಳನ್ನು, ದುಬಾರಿ ಉಡುಗೊರೆಗಳ ರೂಪದಲ್ಲಿ ಕಳುಹಿಸುತ್ತಿದ್ದಾರೆ.

ಟೀಂ ಇಂಡಿಯಾದ ಚೇಸಿಂಗ್ ಮಾಸ್ಟರ್ ಖ್ಯಾತಿಯ ವಿರಾಟ್ ಕೊಹ್ಲಿ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಅವರು ಕೆ.ಎಲ್‌. ರಾಹುಲ್‌ಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ 2.17 ಕೋಟಿ ಮೌಲ್ಯದ ಬಿಎಂಡಬ್ಲ್ಯು ಕಾರನ್ನು ರಾಹುಲ್ ಗೆ ಉಡುಗೊರೆಯಾಗಿ ನೀಡಿದ್ದಾರೆ. ಎಂಎಸ್ ಧೋನಿ ಕ ₹ 80 ಲಕ್ಷ ಮೌಲ್ಯದ ಕವಾಸಕಿ ನಿಂಜಾ ಬೈಕ್ ಅನ್ನು ನವಜೋಡಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಸಹ ಕ್ರಿಕೆಟಿಗರಿಂದ ಮಾತ್ರವಲ್ಲದೆ ಅಥಿಯಾ ತಂದೆ, ಬಾಲಿವುಡ್ ನಟ ಕರಾವಳಿ ಮೂಲದ ಸುನೀಲ್ ಶೆಟ್ಟಿ ಅವರಿಂದಲೂ ರಾಹುಲ್ ಅತ್ಯಂತ ದುಬಾರಿ ಉಡುಗೊರೆ ಪಡೆದಿದ್ದಾರೆ. ಮಗಳು ಮತ್ತು ಅಳಿಯನಿಗೆ ಮುಂಬೈನಲ್ಲಿ ₹ 50 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ನೀಡಿದ್ದಾರೆ. ಇದಲ್ಲದೆ ಈ ನವ ದಂಪತಿ ಸಲ್ಮಾನ್ ಖಾನ್ ಅವರಿಂದ ಆಡಿ ಕಾರು ಮತ್ತು ಜಾಕಿ ಶ್ರಾಫ್ ಅವರಿಂದ ದುಬಾರಿ ವಾಚ್‌ಗಳನ್ನು ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ರಾಹುಲ್ ದಂಪತಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆರತಕ್ಷತೆ ಏರ್ಪಡಿಸಲಿದ್ದಾರೆ.

ರಾಹುಲ್ ಮತ್ತು ಆಥಿಯಾ ಶೆಟ್ಟಿ ಹಲವಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಆರಂಭದಲ್ಲಿ ತಮ್ಮ ಸಂಬಂಧವನ್ನು ಗೌಪ್ಯವಾಗಿಟ್ಟಿದ್ದರೂ, ಕಳೆದ ವರ್ಷದಿಂದ ಅವರು ಸಾರ್ವಜನಿಕವಾಗಿ ಹೊರಗಡೆ ತಿರುಗಾಡುತ್ತಿದ್ದರು. ಕಳೆದ ಸೋಮವಾರ ಈ ಜೋಡಿ ಸತಿ-ಪತಿಗಳಾಗುವ ಮೂಲಕ ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಕ್ರಿಕೆಟ್‌ನಲ್ಲಿ ರಾಹುಲ್‌ ಸಾಧನೆ:

ಕಣ್ಣೂರು ಲೋಕೇಶ್ ರಾಹುಲ್ (ಕೆ.ಎಲ್‌.ರಾಹುಲ್‌) ಸದ್ಯ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕರಾಗಿದ್ದಾರೆ. ಬಲಗೈ ಬ್ಯಾಟ್ಸಮನ್ ರಾಹುಲ್ ವಿಕೆಟ್ ಕೀಪರ್ ಕೂಡ ಹೌದು. ಈವರೆಗೆ 50 ಏಕದಿನ ಪಂದ್ಯಗಳನ್ನು ಆಡಿರುವ ರಾಹುಲ್‌ 49 ಇನ್ನಿಂಗ್ಸ್ ಗಳಿಂದ 44.5 ಸರಾಸರಿಯಲ್ಲಿ 1,870 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕಗಳು ಹಾಗೂ 13 ಅರ್ಧ ಶತಕಗಳು ಸೇರಿವೆ. 112 ಇವರ ಏಕದಿನ ಕ್ರಿಕೆಟ್ ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.

ಅವರು 45 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 34.3 ಸರಾಸರಿಯಲ್ಲಿ 2,604 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಹಾಗೂ 12 ಅರ್ಧ ಶತಕಗಳು ಇವೆ. 199 ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಟೀಂ ಇಂಡಿಯಾ ಪರ 72 ಟಿ20 ಪಂದ್ಯಗಳಲ್ಲಿ 37.8 ಸರಾಸರಿಯಲ್ಲಿ 2,265 ರನ್ ಬಾರಿಸಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *