ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಂಡ ರಿಷಭ್ ಶೆಟ್ಟಿ: ಕಾಂತಾರ ಸಿನಿಮಾಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಂಡ ರಿಷಭ್ ಶೆಟ್ಟಿ: ಕಾಂತಾರ ಸಿನಿಮಾಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?

ನ್ಯೂಸ್‌ಆ್ಯರೋ : ಹೊಂಬಾಳೆ ಫಿಲಂಸ್‌ ಸಂಸ್ಥೆಯ ಬ್ಯಾನರ್‌ನಡಿ ನಿರ್ಮಾಣವಾದ ರಿಷಭ್‌ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಭಾರೀ ಯಶಸ್ಸು ಗಳಿಸಿತ್ತು. ಕಲೆಕ್ಷನ್‌ ವಿಚಾರದಲ್ಲಿ ಹಲವು ದಾಖಲೆಗಳನ್ನು ಧೂಳೆಬ್ಬಿಸಿತ್ತು. ಕೇವಲ ₹ 16 ಕೋಟಿಯ ಚಿತ್ರ ಬರೋಬ್ಬರಿ ₹ 450 ಕೋಟಿಗಳು ಅಧಿಕ ಆದಾಯ ತಂದುಕೊಟ್ಟಿತ್ತು.

ಸಿನಿಮಾ ಸೂಪರ್‌ಹಿಟ್‌ ಆದಾಗ ಆ ಚಿತ್ರದ ಕುರಿತು ಜನರಿಗೆ ಕುತೂಹಲ ಹೆಚ್ಚಾಗುವುದು ಸಹಜ. ಅದರಲ್ಲೂ ಕಲಾವಿದರ ಸಂಭಾವನೆಯ ಬಗ್ಗೆ ಬಹುತೇಕ ಮಂದಿಗೆ ಇನ್ನಿಲ್ಲದ ಆಸಕ್ತಿ. ಸಿನಿಮಾದ ಕಲಾವಿದರಿಗೆ ಡಬಲ್‌ ಸಂಭಾವಣೆ ಕೊಟ್ಟಿದ್ದಾರೆ ಎಂಬ ಗುಸುಗುಸು ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಈ ಮಧ್ಯೆ ಚಿತ್ರದ ನಿರ್ದೇಶಕ ಮತ್ತು ನಾಯಕನಟನಾಗಿರುವ ರಿಷಭ್ ಶೆಟ್ಟಿ ಅವರಿಗೆ ಎಷ್ಟು ಸಂಭಾವಣೆ ಕೊಟ್ಟಿರಬಹುದು ಎಂಬ ಕುತೂಹಲ ಸಿನಿರಸಿಕರಲ್ಲಿ ಮನೆಮಾಡಿದೆ.

ಕಡಿಮೆ ಬಜೆಟ್ನಲ್ಲಿ ದೊಡ್ಡ ಕಲೆಕ್ಷನ್ ಮಾಡಿರೋ ಕಾಂತಾರ ಸಿನಿಮಾ ಕನ್ನಡದ ಹೆಮ್ಮೆಯೂ ಹೌದು. ಇಷ್ಟು ಲಾಭ ಮಾಡಿದ್ಮೇಲೆ ಕಲಾವಿದರಿಗೆ, ತಂತ್ರಜ್ಞರಿಗೆ ಹೆಚ್ಚುವರಿ ಸಂಭಾವಣೆ ಕೊಟ್ಟಿದ್ದಾರಂತೆ. ಈ ವಿಚಾರವನ್ನು ಕಾಂತಾರದ ರಾಂಪಾ ಪಾತ್ರಧಾರಿ ಪ್ರಕಾಶ್ ತುಮಿನಾಡು ಮಾಧ್ಯಮಕ್ಕೆ ತಿಳಿಸಿದ್ದರು. ಈ ಮಧ್ಯೆ ಕಾಂತಾರ ಸಿನಿಮಾಕ್ಕೆ ರಿಷಭ್‌ ಶೆಟ್ಟಿ ಪಡೆದ ಸಂಭಾವಣೆಯ ಪಕ್ಕಾ ಮಾಹಿತಿಯೊಂದು ಲಭ್ಯವಾಗಿದೆ.

ರಿಷಭ್‌ ಶೆಟ್ಟಿ ಅವರು ಕಾಂತಾರ ಸಿನಿಮಾಕ್ಕೆ ಹೊಂಬಾಳೆ ಫಿಲಂಸ್ ಜೊತೆ ಕೈ ಜೋಡಿಸಿದಾಗ ತೆಗೆದುಕೊಂಡ ಸಂಭಾವನೆ ಅಂದಾಜು 3 ಕೋಟಿ. ನಟನೆ ಮತ್ತು ನಿರ್ದೇಶನ ಎರಡೂ ಸೇರಿ ಮೂರು ಕೋಟಿ ಪಡೆದುಕೊಂಡಿದ್ದರು. ಕಾಂತಾರ ಪ್ಯಾನ್ ಇಂಡಿಯಾ ಸಕ್ಸಸ್ ಕಂಡ ಬಳಿಕ ಶೆಟ್ರಿಗೆ ಜೇಬಿಗೆ ಭಾರಿ ಮೊತ್ತವನ್ನೇ ಹಾಕಿದ್ದಾರಂತೆ ಹೊಂಬಾಳೆ ಫಿಲಂಸ್. ಹೆಚ್ಚುವರಿ ಸಂಭಾವನೆ ಮಾತ್ರವಲ್ಲ, ದುಬೈ ಟೂರ್ನ ಖರ್ಚು ಪೂರ್ತಿ ಕಾಂತಾರ ನಿರ್ಮಾಪಕರದ್ದೇ ಬಂಡವಾಳ. ಕಾಂತಾರ ಸಕ್ಸಸ್ ನಂತರ ರಿಷಬ್ ಶೆಟ್ಟಿ ಕೈಗೆ ಹೆಚ್ಚುವರಿ ಸಿಕ್ಕಿದ್ದೆಷ್ಟು ಕೋಟಿ ಅಂತ ನೋಡಿದ್ರೆ ತಮ್ಮ ಸಿನಿಮಾದ ಬಜೆಟ್ಗಿಂತ ಜಾಸ್ತಿ ಅಂತೆ.

ದುಬೈ ಟೂರ್ ಮುಗಿಸಿ ಬಂದಿರುವ ರಿಷಬ್ ಶೆಟ್ಟಿ ಈಗ ಕಾಂತಾರ ಪ್ರೀಕ್ವೆಲ್ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಾಡುಬೆಟ್ಟ ಶಿವನ ತಂದೆಯ ಪಾತ್ರದ ಮೇಲೆ ಕಥೆ ಮಾಡೋಕೆ ನಿರ್ಧರಿಸಿದ್ದು, ಇನ್ನೆರಡು ತಿಂಗಳಲ್ಲಿ ಸ್ಕ್ರಿಪ್ಟ್ ಪೂರ್ತಿ ಮಾಡಲಿದ್ದಾರೆ. ಇನ್ನು ವಿಜಯ್ ಕಿರಗಂದೂರ್ ಹೇಳಿರುವ ಪ್ರಕಾರ ಜೂನ್ ತಿಂಗಳಿಂದ ಕಾಂತಾರ 2 ಶೂಟಿಂಗ್ ಶುರುವಾಗಲಿದ್ದು, ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ತೆರೆಗೆ ತರೋ ಪ್ಲಾನ್ ಇದೆಯಂತೆ. ಇನ್ನು ಕಾಂತಾರ ಚಿತ್ರವನ್ನ ಬರೀ 16 ಕೋಟಿಯಲ್ಲಿ ನಿರ್ಮಿಸಿ ಪ್ಯಾನ್ ಇಂಡಿಯಾ ಸಂಚಲನ ಸೃಷ್ಟಿಸಿದ್ದ ಹೊಂಬಾಳೆ ಅವರು ಈ ಸಲ ಪಾರ್ಟ್ 2ಗೆ ಇನ್ನಷ್ಟು ಬಜೆಟ್ ಹೆಚ್ಚಿಸಿದ್ದಾರೆ. ಹೌದು, ಪ್ರೀಕ್ವೆಲ್ ಚಿತ್ರ ಚೆನ್ನಾಗಿ ಬರಬೇಕು ಅನ್ನೋ ಉದ್ದೇಶ ಹೊಂದಿರುವ ಹೊಂಬಾಳೆ ಸಂಸ್ಥೆ, ಬಜೆಟ್ 25 ಕೋಟಿ ಆದ್ರು ಪರವಾಗಿಲ್ಲ ಎಂದು ಉದಾರತೆ ತೋರಿದೆಯಂತೆ.

ಕಾಂತಾರ ದೊಡ್ಡ ಹಿಟ್ ಸಿಕ್ಕ ಬಳಿಕ ಪಾರ್ಟ್ 2 ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿದೆ. ಹಾಗಾಗಿ, ಎರಡನೇ ಭಾಗವನ್ನ ಪ್ಯಾನ್ ಇಂಡಿಯಾ ಲೆವಲ್ನಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಬೇಕಿದೆ. ಕಾಂತಾರ ಸಕ್ಸಸ್ನಿಂದ ರಿಷಬ್ ಶೆಟ್ಟಿ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗಿದೆ.. ಈ ಸಲ ಸಂಭಾವನೆನೂ ಹೆಚ್ಚಾಗಲಿದೆ. ಇನ್ನು ಚಿತ್ರದ ಬಜೆಟ್ ಕೂಡ ಡಬಲ್‌ ಆಗುವ ನಿರೀಕ್ಷೆಯಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *