ಗಳಿಕೆಯಲ್ಲಿ ಮೊದಲ ದಿನವೇ ದಾಖಲೆ ಬರೆದ ‘ಪಠಾಣ್‌: ಕಿಂಗ್‌ ಖಾನ್‌, ಸನ್ಮಾನ್‌, ಅಬ್ರಹಾಂ, ದೀಪಿಕಾ ಪಡೆದ ಸಂಭಾವನೆಯೆಷ್ಟು ಗೊತ್ತಾ?

ಗಳಿಕೆಯಲ್ಲಿ ಮೊದಲ ದಿನವೇ ದಾಖಲೆ ಬರೆದ ‘ಪಠಾಣ್‌: ಕಿಂಗ್‌ ಖಾನ್‌, ಸನ್ಮಾನ್‌, ಅಬ್ರಹಾಂ, ದೀಪಿಕಾ ಪಡೆದ ಸಂಭಾವನೆಯೆಷ್ಟು ಗೊತ್ತಾ?

ನ್ಯೂಸ್‌ಆ್ಯರೋ : ಶಾರುಕ್‌ ಖಾನ್‌ ಅಭಿನಯದ ಯಶ್‌ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾದ ‘ಪಠಾಣ್‌’ ಸಿನಿಮಾ ಇದೀಗ ಹಲವು ದಾಖಲೆಗಳನ್ನು ಬರೆಯುತ್ತಿದೆ. ಬಹಿಷ್ಕಾರದ ಕೂಗಿನ ಹೊರತಾಗಿಯೂ ಮೊದಲ ದಿನವೇ ಬರೋಬ್ಬರಿ 55 ಕೋಟಿ ಗಳಿಕೆ ಕಂಡು ಹೊಸ ದಾಖಲೆ ತನ್ನದಾಗಿಸಿಕೊಂಡಿದೆ.

ಪಠಾಣ್‌ ಸಿನಿಮಾ ನಿರ್ಮಾಣಕ್ಕೆ ಯಶ್‌ ರಾಜ್‌ ಫಿಲಂಸ್‌ ಬರೋಬ್ಬರಿ ₹ 250 ಕೋಟಿ ವೆಚ್ಚ ಮಾಡಿದೆ. ಹೀಗಿರುವಾಗ ಇದೇ ಚಿತ್ರದಲ್ಲಿ ನಟಿಸಿರುವ ಶಾರುಖ್‌ ಖಾನ್‌, ಸನ್ಮಾನ್‌, ದೀಪಿಕಾ ಪಡುಕೋಣೆ, ಜಾನ್‌ ಅಬ್ರಹಾಂ ಪಡೆದ ಸಂಭಾವನೆ ಎಷ್ಟಿರಬಹುದು? ಈ ಕುತೂಹಲ ಎಲ್ಲರಲ್ಲೂ ಇದೆ.

ಸೂಪರ್ ಸ್ಟಾರ್ ಶಾರುಕ್‌ ಖಾನ್‌ ನಾಲ್ಕು ವರ್ಷಗಳ ನಂತರ ಪೂರ್ಣ ಪ್ರಮಾಣದ ಪಾತ್ರದಲ್ಲಿ ಮತ್ತೆ ಹಿರಿತೆರೆಗೆ ಮರಳಿದ್ದಾರೆ. 2018 ರಲ್ಲಿ ಬಿಡುಗಡೆಯಾದ ಜೀರೋ ಅವರ ಕೊನೆಯ ಸಿನಿಮಾ. ಆ ಸಿನಿಮಾ ಹಾಕಿದ ಬಂಡವಾಳ ವಾಪಸ್ ಪಡೆಯುವಲ್ಲಿ ಸೋತಿತ್ತು. ಇದೀಗ ಬಂದ ‘ಪಠಾಣ್‌’ ಹೊಸ ಹವಾ ಸೃಷ್ಟಿಸುತ್ತಿದೆ. ಈ ಚಿತ್ರಕ್ಕಾಗಿ ಶಾರುಖ್‌ ಖಾನ್‌ ಬರೋಬ್ಬರಿ ₹ 100 ಕೋಟಿ ಸಂಭಾವನೆ ಪಡೆದಿದ್ದಾರೆ.

ಅದೇ ರೀತಿ ಪಠಾಣ್‌ ಚಿತ್ರದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಈ ಸಿನಿಮಾದಲ್ಲಿನ ಅತಿಥಿ ಪಾತ್ರಕ್ಕೆ ಅವರು ಯಾವುದೇ ಸಂಭಾವನೆ ಪಡೆದಿಲ್ಲ. ಚಿತ್ರದಲ್ಲಿ ಜಾನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅವರು ₹ 20 ಕೋಟಿ ಸಂಭಾವನೆ ಪಡೆದಿದ್ದಾರೆ.

ಬೇಷರಮ್‌ ರಂಗ್‌ ಹಾಡಿನಲ್ಲಿ ತಮ್ಮ ಮಾದಕತೆಯ ಮೂಲಕವೇ ಬೆರಗುಗೊಳಿಸಿದ್ದ ನಟಿ ದೀಪಿಕಾ ಪಡುಕೋಣೆ, ಈ ಸಿನಿಮಾದಲ್ಲಿನ ನಟನೆಗಾಗಿ ಬರೋಬ್ಬರಿ ₹ 15 ಕೋಟಿ ಸಂಭಾವನೆ ಪಡೆದಿದ್ದಾರೆ. ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಸದ್ಯ ಬಾಲಿವುಡ್‌ನಲ್ಲಿ ಹವಾ ಸೃಷ್ಟಿಸಿಕೊಂಡ ನಿರ್ದೇಶಕ. ಅವರು ಈ ಹಿಂದೆ ‘ಬ್ಯಾಂಗ್ ಬ್ಯಾಂಗ್’ ಮತ್ತು ‘ವಾರ್ ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ‘ಪಠಾಣ್‌’ ಚಿತ್ರ ನಿರ್ದೇಶಿಸಲು ₹ 6 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿಯಾಗಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *