ವಿಮಾನ ನಿಲ್ದಾಣದ ರನ್​ ವೇನಲ್ಲಿ ಹೆಲಿಕಾಪ್ಟರ್ ಪತನ; ಮೂವರು ಕೋಸ್ಟ್ ಗಾರ್ಡ್ಸ್ ಸಾವು

SOLDIERS DIED
Spread the love

ನ್ಯೂಸ್ ಆ್ಯರೋ: ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪೋರಬಂದರ್ ವಿಮಾನ ನಿಲ್ದಾಣದ ರನ್ ವೇ ಮೇಲೆ ಭಾನುವಾರ ಪತನಗೊಂಡಿದೆ. ಇದರಲ್ಲಿ ಮೂವರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ಪ್ರಕಾರ, ಈ ಮೂವರು ಯೋಧರ ಪಾರ್ಥಿವ ಶರೀರಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಜಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮೂಲಗಳ ಪ್ರಕಾರ, ಫೊರೆನ್ಸಿಕ್ ಪೋಸ್ಟ್‌ ಮಾರ್ಟಂಗಾಗಿ ಮೂವರು ಕೋಸ್ಟ್ ಗಾರ್ಡ್ ಸೈನಿಕರ ಪಾರ್ಥಿವ ಶರೀರಗಳನ್ನು ಸಂಜೆ ಜಾಮ್‌ನಗರದ ಜಿಜಿ ಆಸ್ಪತ್ರೆಗೆ ತರಲಾಯಿತು. ಪೋರಬಂದರ್ ಕೋಸ್ಟ್ ಗಾರ್ಡ್ ಅಧಿಕಾರಿ ಮತ್ತು ಪೊಲೀಸರು ಸಂಪೂರ್ಣ ಪ್ರಕ್ರಿಯೆ ಮುಗಿಸಲಿದ್ದಾರೆ. ಫೋರೆನ್ಸಿಕ್ ಪೋಸ್ಟ್‌ಮಾರ್ಟಂ ನಂತರ ಯೋಧರ ಶವಗಳನ್ನು ಪೋರಬಂದರ್‌ಗೆ ಕೊಂಡೊಯ್ಯಲಾಗುವುದು. ಈ ಮೂವರು ಹುತಾತ್ಮರನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ಗೌರವಪೂರ್ವಕವಾಗಿ ದಹನ ಮಾಡುತ್ತಾರೆ. ಈ ಅವಘಡದಿಂದಾಗಿ ಕೋಸ್ಟ್ ಗಾರ್ಡ್ ಯೋಧರಲ್ಲಿ ಶೋಕ ಮಡುಗಟ್ಟಿದೆ.

ಹುತಾತ್ಮರಾದ ಭಾರತೀಯ ಕೋಸ್ಟ್ ಗಾರ್ಡ್ಸ್​​
ಕಮಾಂಡರ್ (ಜೆಜಿ) ಸೌರಭ್ (41 ವರ್ಷ)
ಉಪ ಕಮಾಂಡರ್ ಎಸ್. ಕೆ ಯಾದವ್ (33 ವರ್ಷ)
ನಾವಿಕ, ಮನೋಜ್ ಪ್ರಧಾನ್ (28)

ಪೋರಬಂದರ್ ಕೋಸ್ಟ್ ಗಾರ್ಡ್‌ನ ಹೆಲಿಕಾಪ್ಟರ್ ಅಂಕಲೇಶ್ವರದಲ್ಲಿ ಪತನಗೊಂಡಿದೆ. ಇದರಲ್ಲಿ ಮೃತಪಟ್ಟ ಯೋಧರ ಶರೀರವನ್ನ ಪೋರ ಬಂದರ್ ಭಾವಸಿಂಗ್‌ಜಿ ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ಆದರೆ, ಪೋರಬಂದರ್ ಸರ್ಕಾರಿ ಆಸ್ಪತ್ರೆಯಲ್ಲಿ ಫೋರೆನ್ಸಿಕ್ ಪೋಸ್ಟ್‌ಮಾರ್ಟಮ್ ಕಾರ್ಯವಿಧಾನವನ್ನು ಮಾಡಲು ಸಾಧ್ಯವಾಗದ ಕಾರಣ, ಮೂವರು ಯೋಧರ ಪಾರ್ಥಿವ ಶರೀರಗಳನ್ನು ಪೋರಬಂದರ್ ಭಾವಸಿಂಗ್‌ಜಿ ಆಸ್ಪತ್ರೆಯಿಂದ ಜಾಮ್‌ನಗರ ಜಿಜಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಪೋರಬಂದರ್ ಭಾವಸಿಂಗ್‌ಜಿ ಆಸ್ಪತ್ರೆಯ ಆರ್‌ಎಂಒ ಡಾ. ವಿಪುಲ್ ಮೋಧಾ ಮಾತನಾಡಿ, ‘ಪೋರಬಂದರ್ ಭಾವಸಿಂಗ್‌ಜಿ ಸರ್ಕಾರಿ ಆಸ್ಪತ್ರೆಯಲ್ಲಿ ಫೋರೆನ್ಸಿಕ್ ಪೋಸ್ಟ್‌ಮಾರ್ಟಮ್ ಸೌಲಭ್ಯದ ಕೊರತೆಯಿಂದಾಗಿ ಪೋರಬಂದರ್‌ನಲ್ಲಿ ಹೆಲಿಕಾಪ್ಟರ್ ಪತನದ ಪ್ರಕರಣದಲ್ಲಿ ಮೃತಪಟ್ಟ ಮೂವರು ಸೈನಿಕರ ಮೃತದೇಹಗಳನ್ನು ಜಾಮ್‌ನಗರಕ್ಕೆ ಕೊಂಡೊಯ್ಯಲಾಗಿದೆ. ಅಲ್ಲಿ ಪೋಸ್ಟ್‌ಮಾರ್ಟಮ್ ವಿಧಿವಿಜ್ಞಾನ ವಿಧಾನದಲ್ಲಿ ಮಾಡಲಾಗುತ್ತದೆ ಮತ್ತು ವಿಡಿಯೋಗ್ರಫಿ ಕೂಡ ಮಾಡಲಾಗುತ್ತದೆ. ವರದಿ ಬಂದ ನಂತರ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ’ ಎಂದು ಹೇಳಿದರು.

Leave a Comment

Leave a Reply

Your email address will not be published. Required fields are marked *

error: Content is protected !!