ಮಕ್ಕಳ ದಿನಾಚರಣೆಯಂದು ಮಕ್ಕಳ ಸಿನಿಮಾ ಘೋಷಿಸಿದ ಶಿವಣ್ಣ; “ಎ ಫಾರ್ ಆನಂದ್” ಫಸ್ಟ್ ಲುಕ್ ರಿಲೀಸ್
ನ್ಯೂಸ್ ಆ್ಯರೋ: ಇಂದು ದೇಶಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ವಿದೇಶದಲ್ಲಿರುವ ಭಾರತೀಯರು ತಮ್ಮ ತಮ್ಮ ಮನೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಿ ಶುಭ ಕೋರುತ್ತಿದ್ದಾರೆ. ಈ ವಿಶೇಷ ದಿನದಂದು ಸೆಂಚರಿ ಸ್ಟಾರ್ ಶಿವರಾಜ್‌ಕುಮಾರ್ ಹೊಸ ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದಾರೆ.
ಇಂದು ಮಕ್ಕಳ ದಿನಾಚರಣೆ. ಈ ಶುಭ ದಿನದಂದು ಶಿವಣ್ಣ ಮಕ್ಕಳ ಸಿನಿಮಾದಲ್ಲಿ ನಟಿಸುವ ಬಗ್ಗೆ ಗುಟ್ಟುರಟ್ಟು ಮಾಡಿದ್ದಾರೆ. ‘ಸುಂದರ ಕಾಂಡ’ದಲ್ಲಿ ಸಿನಿಮಾದಲ್ಲಿ ಟೀಚರ್ ಆಗಿ ಅಭಿನಯಿಸಿದ್ದ ಶಿವಣ್ಣ ಈಗ ಬಹಳ ವರ್ಷಗಳ ನಂತರ ಮತ್ತೆ ಶಿಕ್ಷಕರಾಗುತ್ತಿದ್ದಾರೆ. ವಿಶೇಷ ಅಂದರೆ ಇದು ನೈಜ ಘಟನೆಯಾಧಾರಿತ ಸಿನಿಮಾ. ಲಾಂಗ್ ಬಿಟ್ಟು ಶಿವಣ್ಣ ಈಗ ಪೆನ್ನು ಹಿಡಿಯುತ್ತಿದ್ದಾರೆ.
ಗುರುವಾಗುತ್ತಿರುವ ಶಿವಣ್ಣನಿಗೆ ಓಂಕಾರ ಹಾಕಲು ಘೋಸ್ಟ್ ಸೂತ್ರಧಾರ ಶ್ರೀನಿ ಸಜ್ಜಾಗಿದ್ದಾರೆ. ಶ್ರೀನಿ, ಬೇರೆ ರೀತಿಯ ಕಥೆಯೊಂದನ್ನು ತಯಾರಿಸಿಕೊಂಡು ಕನ್ನಡ ಸಿನಿಮಾಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಚಿತ್ರಕ್ಕೆ ಎ ಫಾರ್ ಆನಂದ್ ಎಂದು ಹೆಸರಿಡಲಾದೆ. ಜೊತೆಗೆ ಚಿತ್ರದ ಫಸ್ಟ್‌ಲುಕ್ ಕೂಡಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶ ಇರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಇಂದು ಬಿಡುಗಡೆ ಆಗಿರುವ ಫಸ್ಟ್‌ಲುಕ್‌ನಲ್ಲಿ ಮಕ್ಕಳ ಟ್ರೈನ್ ಮೇಲೆ ಶಿವಣ್ಣ ಬೆತ್ತ ಹಿಡಿದು ಏನೋ ತೋರಿಸುತ್ತಿದ್ದಾರೆ. ಅವರ ಹಿಂದೆ ಮಕ್ಕಳ ಗುಂಪು ಏನನ್ನೋ ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಶಿವಣ್ಣ ಪಕ್ಕದಲ್ಲಿ ಒಂದು ಮುದ್ದಾದ ನಾಯಿಯೂ ಇದೆ. ಈ ಸಿನಿಮಾಗೆ ಮೊದಲು ದೊಡ್ಡವರೆಲ್ಲಾ ಜಾಣರಲ್ಲ ಎಂದು ಹೆಸರಿಡಲಾಗಿತ್ತು.
ಆದರೆ ನಂತರ A ಫಾರ್ ಆನಂದ್ ಎಂದು ಬದಲಿಸಲಾಗಿದೆ. ದಿ ಲಿಟ್ಲ್ ಗರ್ಲ್ ಅಟ್ ದಿ ವಿಂಡೋ ಜಪಾನಿನ ಪ್ರಸಿದ್ಧ ಕಾದಂಬರಿಯನ್ನು ಆಧರಿಸಿ ತೊತ್ತೋಚಾನ್ ಎಂಬ ಸಿನಿಮಾ ಮಾಡಲಾಗಿದ್ದು, ಈ ಚಿತ್ರವನ್ನು ಶ್ರೀನಿವಾಸ್ ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಲಿದೆ.
Leave a Comment