ಜಲದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು ಪವಾಡ; ಇದ್ದಕ್ಕಿದ್ದಂತೆ ನದಿಯಲ್ಲಿ ಪತ್ತೆಯಾಯ್ತು ಶಿವಲಿಂಗ !

Shivalinga found
Spread the love

ನ್ಯೂಸ್ ಆ್ಯರೋ: ಬಂಟ್ವಾಳ ತಾ| ಕರೋಪಾಡಿ ಗ್ರಾಮದ ಆನೆಕಲ್ಲು ಪಡ್ಪು ಎಂಬಲ್ಲಿನ ಜಲದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಪವಾಡವೊಂದು ನಡೆದಿದೆ. ಇದ್ದಕ್ಕಿದ್ದಂತೆ ದೇವಸ್ಥಾನದ ನದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ.

Shivalinga 1

ಪಡ್ಪು ತೋಟದಲ್ಲಿ ದಶಕಗಳ ಹಿಂದೆ ದೇವಸ್ಥಾನದ ಕುರುಹು ಪತ್ತೆಯಾದ ಸಂದರ್ಭದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಜಲದುರ್ಗೆಯ ಜೊತೆಗೆ ಶಿವನ ಸಾನಿಧ್ಯವು ಇದೆ ಎಂಬುದು ಕಾಣಿಸಿತ್ತು …ಜಲದುರ್ಗೆ ಶಿವನಿಗಾಗಿ ತಪಸ್ಸು ಮಾಡಿದ ಸ್ಥಳವಿದು .ಶಿವಲಿಂಗ ಸಿಗುವ ಮೂಲಕ ದೇವಿಯ ತಪಸ್ಸು ಸಾಕಾರಗೊಂಡಿದೆ.

WhatsApp Image 2024 11 11 At 3.23.58 PM

ಕೇರಳ ಕರ್ನಾಟಕ ಗಡಿ ಪ್ರದೇಶವಾಗಿರುವ ಆನೆಕಲ್ಲು ಪಡ್ಪುವಿನ ಜಲದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಮೂಲದ ಕರೂರು ಪಂಚಮದೇವಿ ಕಲಿಪಾಳ್ಯಮ್ ಶ್ರೀ ನಂದೀಶ್ವರ ಜ್ಞಾನಪೀಠಂನ ಸ್ವಾಮಿ ಸಿದ್ದ ಗುರೂಜಿಯವರು ಆಗಮಿಸಿದ್ದರು..ಅಲ್ಲಿ ನಡೆದ ಪ್ರಶ್ನಾ ಚಿಂತನೆಯ ಸಂದರ್ಭ ಹೊಳೆಯಲ್ಲಿ ಶಿವಲಿಂಗ ಇರುವ ಬಗ್ಗೆ ಕಂಡುಬಂದಿದ್ದು .ನಂತರ ಸಿದ್ದ ಗುರೂಜಿ ಅವರ ಮಾರ್ಗದರ್ಶನದಂತೆ ಸಂಜೆಯ ಹೊತ್ತು ಹೊಳೆಗೆ ತೆರಳಿದಾಗ ಶಿವಲಿಂಗ ಪತ್ತೆಯಾಗಿದೆ .

WhatsApp Image 2024 11 11 At 3.24.01 PM

ಈ ಸಂದರ್ಭ ಜಲದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ
ಒ. ಶಾಮ್ ಭಟ್ , ಹಿರಿಯ ವಕೀಲರು ಮೈಸೂರು ಇವರು ಮಾತನಾಡಿ ಜೋಗಿ ಸಮುದಾಯಕ್ಕೆ ಸೇರಿದವರು ಈ ಭಾಗದಲ್ಲಿ ಹೆಚ್ಚಾಗಿ ವಾಸವಾಗಿದ್ದರು , ನಾಥಫಂಥದ ಮೂಲ ಪುರುಷ ಮಚ್ಚೇಂದ್ರನಾಥ ಆರಾಧಿಸಿಕೊಂಡು ಬಂದ. ಲಿಂಗವಾಗಿದ್ದು , ಸಿದ್ದರು ಹಾಗೂ ನಾಥಪಂಥದವರು ಅರ್ಚನೆ ಮಾಡುತ್ತಿದ್ದರು .ಕರೋಪಾಡಿ ಅಸುಪಾಸಿನಲ್ಲಿ ಬಹಳಷ್ಟು ಸಾನಿಧ್ಯಗಳಿದೆ.ಇದರ ಹಿಂದೆ ಅಗಸ್ತ್ಯರ ಮಹಾ ಸಂಕಲ್ಪವಿದೆ.ಅಗಸ್ತ್ಯ ರ ಜೊತೆಗೆ ದೊಡ್ಡ ಋಷಿಗಳ ಸಮೂಹ ಇಲ್ಲಿಗೆ ಆಗಮಿಸಿದೆ ಎಂಬುದು ನಾಡಿಶೋದನೆಯಲ್ಲಿ ಕಂಡುಬಂದಿದೆ ಎಂದು ಹೇಳಿದರು.

WhatsApp Image 2024 11 11 At 3.24.02 PM

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಮಹೇಂದ್ರ ಭಟ್, ಜ್ಞಾನ ಪೀಠಂ ಕಾರ್ಯನಿರ್ವಾಹಕ ಧರ್ಮದರ್ಶಿನಿ ನಂದಿನಿ ಕೃಷ್ಣ ಕುಮಾರ್, ಟ್ರಸ್ಟಿ ಶಿವರಾಮನ್, ವೆಂಕಟ್, ಶ್ರೀ ಶ್ರೀ ಶ್ರೀ ಮಹಾಬಲ ಸ್ವಾಮೀಜಿ ಶ್ರೀ ಕ್ಷೇತ್ರ ಕಣಿಯೂರು , ಮಾತಾ ಅಮ್ರತನಾಂದಮಯೀ ಆಶ್ರಮದ ಎ.ಪಿ‌.ಲಲಿತಾ, ದೇವಾಸ್ಥಾನದ ಸಂಚಾಲಕರು
ಶ್ರೀ. ಯುತ. ಸುರೇಶ್ ಮಾಸ್ಟರ್,ಪುಷ್ಪರಾಜ್,ರಾಮಣ್ಣ ಪಾಳಿಗೆ , ಜಲದುರ್ಗ ಭಕ್ತ ವೃಂದ, ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.

Leave a Comment

Leave a Reply

Your email address will not be published. Required fields are marked *

error: Content is protected !!