ಭಾರತೀಯ ಉದ್ಯಮಿ ಕೋಟ್ಯಾಧಿಪತಿ ಶಶಿ ರೂಯಿಯಾ ಇನ್ನಿಲ್ಲ; ʼಎಸ್ಸಾರ್ʼ ಸಮೂಹ ಸಂಸ್ಥೆ ಕಟ್ಟಿದ್ದು ಹೇಗೆ
ನ್ಯೂಸ್ ಆ್ಯರೋ: ಭಾರತದ ಖ್ಯಾತ ಉದ್ಯಮಿ ಎಸ್ಸಾರ್ ಗ್ರೂಪ್‌ನ ಸಹ ಸಂಸ್ಥಾಪಕರಾದ ಶಶಿ ರೂಯಿಯಾ ಅವರು ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಶಶಿಕಾಂತ್ ರೂಯಿಯಾಅವರ ನಿಧನಕ್ಕೆ ಇಸ್ಸಾರ್ ಸಂಸ್ಥೆ ಬೇಸರ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿ ಅವರ ನಿಧನ ಬಗ್ಗೆ ಮಾಹಿತಿ ನೀಡಿದೆ. ರೂಯಾ ಮತ್ತು ಎಸ್ಸಾರ್ ಕುಟುಂಬದ ಮುಖ್ಯಸ್ಥರಾದ ಶ್ರೀ ಶಶಿಕಾಂತ್ ರೂಯಿಯಾ ಅವರ ನಿಧನದ ಬಗ್ಗೆ ನಾವು ತೀವ್ರ ದುಃಖದಿಂದ ತಿಳಿಸುತ್ತೇವೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
‘ಸಮುದಾಯದ ಏಳಿಗೆ ಮತ್ತು ಲೋಕೋಪಕಾರಕ್ಕೆ ಅಚಲವಾದ ಬದ್ಧತೆಯೊಂದಿಗೆ, ಅವರು ತಮ್ಮ ಪ್ರಭಾವವನ್ನು ಬಿಟ್ಟು ನಿರಂತರವಾಗಿ ಲಕ್ಷಾಂತರ ಜೀವಗಳನ್ನು ಮುಟ್ಟಿದರು. ಅವರ ನಮ್ರತೆ ಮತ್ತು ಅವರು ಭೇಟಿಯಾದ ಎಲ್ಲರೊಂದಿಗೆ ಸಂಪರ್ಕ ಸಾಧಿಸುವ ಅವರ ಸಾಮರ್ಥ್ಯವು ಅವರನ್ನು ನಿಜವಾದ ಅಸಾಧಾರಣ ನಾಯಕನನ್ನಾಗಿ ಮಾಡಿತು. ಅಪ್ರತಿಮ ಕೈಗಾರಿಕೋದ್ಯಮಿ, ಎಸ್ಸಾರ್ ಗ್ರೂಪ್‌ನ ಅಧ್ಯಕ್ಷರಾದ ಶ್ರೀ ಶಶಿಕಾಂತ್ ರುಯಿಯಾ ಅವರು ಭಾರತದ ಕಾರ್ಪೊರೇಟ್ ಭೂದೃಶ್ಯವನ್ನು ಮರು ರೂಪಾಂತರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.
ಅವರು ಎಸ್ಸಾರ್ ಗ್ರೂಪ್‌ನ ಅಡಿಪಾಯವನ್ನು ಹಾಕಿದರು ಮತ್ತು ಅದನ್ನು ಜಾಗತಿಕ ಮಟ್ಟದಲ್ಲಿ ಸಂಘಟಿಸಿದರು. ಶ್ರೀ. ಶಶಿಕಾಂತ್ ರೂಯಿಯಾ ಅವರ ಅಸಾಧಾರಣ ಪರಂಪರೆಯು ನಮಗೆಲ್ಲರಿಗೂ ಮಾರ್ಗದರ್ಶಕ ಹಾಗೂ ಬೆಳಕಾಗಿ ಉಳಿಯುತ್ತದೆ, ನಾವು ಅವರ ದೃಷ್ಟಿಕೋನವನ್ನು ಗೌರವಿಸುತ್ತೇವೆ ಮತ್ತು ಮೌಲ್ಯಗಳನ್ನು ಎತ್ತಿಹಿಡಿಯುವುದನ್ನು ಮುಂದುವರಿಸುತ್ತೇವೆ’ ರೂಯಿಯಾ ಹಾಗೂ ಎಸ್ಸಾರ್ ಗ್ರೂಪ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ.
1969ರಲ್ಲಿ ನಿರ್ಮಾಣ ಗುತ್ತಿಗೆಯೊಂದಿಗೆ ಉದ್ಯಮ ಆರಂಭಿಸಿದ ರುಯಾ ಸಹೋದರರು, ಶಕ್ತಿ, ಇಂಧನ, ಸ್ಟೀಲ್, ಟೆಲಿಕಾಂ ಸೇರಿದಂತೆ ಈ ರೂಯಿಯಾ ಗ್ರೂಪ್ ಹಲವು ಕ್ಷೇತ್ರಗಳ ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು. ಹಣಕಾಸಿನ ಸವಾಲುಗಳ ನಡುವೆಯೂ ರೂಯಿಯಾ ಅವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಉದ್ಯಮ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಜೊತೆಗೆ ದ ಎಲ್ಡರ್ಸ್ ಹೆಸರಿನ ಇಲೈಟ್ ಗ್ರೂಪ್‌ನ್ನು ಸೇರುತ್ತಾರೆ. (ಇಲೈಟ್ ಗ್ರೂಪ್ ಎಂದರೆ ಸಮಾಜದಲ್ಲಿ ಅಸಮಾನ್ಯ ಪ್ರಮಾಣದ ಸಂಪತ್ತು, ಅಧಿಕಾರ ಅಥವಾ ಕೌಶಲ್ಯ ಹೊಂದಿರುವ ಗಣ್ಯರ ಒಂದು ಸಣ್ಣ ಗುಂಪು.)
ಶಶಿ ರೂಯಿಯಾ ಅವರು ತಮ್ಮ ಸೋದರ ರವಿ ರುಯಿಯಾ ಅವರೊಂದಿಗೆ ಸೇರಿಕೊಂಡು 1969ರಲ್ಲಿ ಎಸ್ಸಾರ್ ಗ್ರೂಪನ್ನು ಸ್ಥಾಪಿಸಿದರು. ಆರಂದಲ್ಲಿ ನಿರ್ಮಾಣ ಸಂಸ್ಥೆಯಾಗಿದ್ದ ಇದು ಮದ್ರಾಸ್ ಪೋರ್ಟ್ ಟ್ರಸ್ಟ್‌ನಿಂದ ಬಂದರಿನಲ್ಲಿ 2.5 ಕೋಟಿ ಮೊತ್ತದ ಜೆಟ್ಟಿ ನಿರ್ಮಾಣ ಮಾಡುವ ಯೋಜನೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯ್ತು.
ಆರಂಭದಲ್ಲಿ ಇಂಜಿನಿಯರಿಂಗ್ ಹಾಗೂ ನಿರ್ಮಾಣ ಕಾರ್ಯಗಳಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಎಸ್ಸಾರ್, ಬ್ರಿಡ್ಜ್, ಡ್ಯಾಂ, ಪವರ್ ಪ್ಲಾಂಟ್ ಸೇರಿದಂತೆ ಹಲವು ಪ್ರಮುಖ ಮೂಲ ಸೌಕರ್ಯ ಯೋಜನೆಗಳನ್ನು ನಿರ್ಮಾಣ ಮಾಡಿದೆ. ಹಾಗೆಯೇ 1980ರಲ್ಲಿ ಇದು ಹಲವಾರು ತೈಲ ಹಾಗೂ ಅನಿಲಕ್ಕೆ ಸಂಬಂಧಿಸಿದ ಆಸ್ತಿಗಳನ್ನು ವಶಕ್ಕೆ ಪಡೆಯುವುದರೊಂದಿಗೆ ಇಂಧನ ವಲಯಕ್ಕೂ ಕಾಲಿರಿಸಿದೆ. ಹಾಗೆಯೇ 1990ರಲ್ಲಿ ಅದು ತನ್ನ ಬಾಹುಗಳನ್ನು ಸ್ಟೀಲ್ ಹಾಗೂ ಟೆಲೆ ಕಮ್ಯುನಿಕೇಷನ್ ಕ್ಷೇತ್ರಗಳಿಗೂ ವಿಸ್ತರಿಸಿತ್ತು.
Leave a Comment