ಧರ್ಮಗ್ರಂಥಕ್ಕೆ ಬೆಂಕಿ ಇಟ್ಟಿದ್ದ ಇರಾಕ್ ನಿರಾಶ್ರಿತ; ಸ್ವೀಡನ್ನಲ್ಲಿ ಗುಂಡಿಕ್ಕಿ ಹತ್ಯೆ
![norway Salwan Momika](https://news-arrow.com/wp-content/uploads/cwv-webp-images/2025/01/New-Project-1-2.png.webp)
ನ್ಯೂಸ್ ಆ್ಯರೋ: ಹಲವು ಭಾರಿ ಮುಸ್ಲಿಂ ಧರ್ಮಗ್ರಂಥ ಕುರಾನ್ಗೆ ಬೆಂಕಿ ಇಟ್ಟ ಇರಾಕ್ ನಿರಾಶ್ರಿತ ಸಲ್ವಾನ್ ಮೊಮಿಕಾನನ್ನು ಸ್ವೀಡನ್ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇರಾಕ್ ನಿರಾಶ್ರಿತನಾಗಿದ್ದ ಈತ 2023ರಲ್ಲಿ ಸ್ವೀಡನ್ನಲ್ಲಿ ಮುಸ್ಲಿಂ ಧರ್ಮಗ್ರಂಥವಾದ ಕುರಾನ್ನ ಪ್ರತಿಗೆ ಬೆಂಕಿ ಇಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದ. ಈತನ ಕೃತ್ಯವನ್ನು ಖಂಡಿಸಿ ವಿಶ್ವದೆಲ್ಲೆಡೆ ಮುಸ್ಲಿಂ ರಾಷ್ಟ್ರಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದವು. ಆದರೆ ಈಗ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಹಲವಾರು ಪ್ರತಿಭಟನೆಗಳಲ್ಲಿ ಕುರಾನ್ ಧರ್ಮಗ್ರಂಥವನ್ನು ಸುಟ್ಟುಹಾಕಿದ ಸಲ್ವಾನ್ ಮೊಮಿಕಾ ಜನಾಂಗೀಯ ದ್ವೇಷವನ್ನು ಪ್ರಚೋದಿಸಿದ ಆರೋಪ ಹೊತ್ತಿದ್ದ. ಈ ಪ್ರಕರಣಗಳಲ್ಲಿ ಈ ಪ್ರಕರಣದಲ್ಲಿ ಈತ ತಪ್ಪಿತಸ್ಥನೇ ಅಲ್ಲವೇ ಎಂಬುದನ್ನು ಎಂದು ಸ್ಟಾಕ್ಹೋಮ್ ನ್ಯಾಯಾಲಯ ತೀರ್ಪು ನೀಡಬೇಕಿತ್ತು.
ಆದರೆ ಪ್ರತಿವಾದಿಗಳಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಹೇಳಿ ಕೋರ್ಟ್ ತೀರ್ಪನ್ನು ಮುಂದೂಡಿತ್ತು. ಇದೇ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದು ಸಲ್ವಾನ್ ಮೊಮಿಕಾ ಹತ್ಯೆಯಾಗಿದೆ. ಸ್ಟಾಕ್ಹೋಮ್ ಬಳಿಯ ಸೊಡೆರ್ಟಾಲ್ಜೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ಗುಂಡಿನ ದಾಳಿಗೆ ಬಲಿಯಾದವನನ್ನು ನಂತರದಲ್ಲಿ ಸಲ್ವಾನ್ ಮೊಮಿಕಾ ಎಂದು ಗುರುತಿಸಲಾಯ್ತು ಎಂದು ಸ್ವೀಡಿಷ್ ಸುದ್ದಿ ಸಂಸ್ಥೆ SVT ವರದಿ ಮಾಡಿದೆ.
38 ವರ್ಷದ ಸಲ್ವಾನ್ ಮೊಮಿಕಾ ಇರಾಕ್ ಮೂಲದ ನಿರಾಶ್ರಿತನಾಗಿದ್ದು, ಸ್ವೀಡನ್ನಲ್ಲಿ ಹಲವಾರು ಬಾರಿ ಇಸ್ಲಾಂನ ಪವಿತ್ರ ಗ್ರಂಥವನ್ನು ಸುಟ್ಟುಹಾಕಿ ಅಪವಿತ್ರಗೊಳಿಸಿದ ಆರೋಪವಿದೆ. ಧರ್ಮಗ್ರಂಥವನ್ನು ಸುಟ್ಟ ದೃಶ್ಯ ಸೆರೆಯಾದ ವೀಡಿಯೊಗಳು ಹಲವಾರು ಮುಸ್ಲಿಂ ರಾಷ್ಟ್ರಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ನಂತರ ಜನಾಂಗೀಯ ಸಮುದಾಯಗಳ ವಿರುದ್ಧ ಪ್ರಚೋದನೆ ಮಾಡಿದ ಆರೋಪದ ಮೇಲೆ ಸ್ವೀಡಿಷ್ ಅಧಿಕಾರಿಗಳಿಂದ ಸಲ್ವಾನ್ ಮೊಮಿಕಾ ತನಿಖೆಗೆ ಒಳಗಾಗಿದ್ದ.
Leave a Comment