Mangalore : ನಿವೃತ್ತ ಪೊಲೀಸ್ ಅಧಿಕಾರಿ ಎಂ.ಎನ್. ರಾವ್ ನಿಧನ
ನ್ಯೂಸ್ ಆ್ಯರೋ : ನಿವೃತ್ತ ಪೊಲೀಸ್ ಅಧಿಕಾರಿ ಎಂ.ಎನ್. ರಾವ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ 6 ತಿಂಗಳ ಹಿಂದೆಯಷ್ಟೆ ಎಂ.ಎನ್. ರಾವ್ ನಿವೃತ್ತಿ ಹೊಂದಿದ್ದರು.
ಎಂ.ಎನ್. ರಾವ್ ಅವರು ಮಂಗಳೂರು ನಗರ ಸೇರಿದಂತೆ ಆನೇಕ ಕಡೆ ಕರ್ತವ್ಯವನ್ನು ಮಾಡಿದ್ದು, ಜನಪರ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.
ನಿವೃತ್ತಿಯ ಬಳಿಕವು ಇಲಾಖೆಯ ನಿಯಮದಂತೆ ಪೊಲೀಸ್ ವಸತಿ ಗೃಹದಲ್ಲೇ ವಾಸ್ತವ್ಯ ಹೊಂದಿದ್ದ ಅವರು ಸಂಪ್ಯ ಉದಯಗಿರಿಯಲ್ಲಿ ಮನೆ ಖರೀದಿಸಿ ಅದರ ನವೀಕರಣ ಕೆಲಸ ಕಾರ್ಯ ನಡೆಸುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಭಾನುವಾರ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಮೃತರ ಪತ್ನಿ ಕಾಸರಗೋಡಿನಲ್ಲಿ ಶಿಕ್ಷಕಿಯಾಗಿದ್ದು, ಪುತ್ರಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿದ್ದಾರೆ. ಪುತ್ರ ಪಿಯುಸಿ ಕಲಿಯುತ್ತಿದ್ದಾರೆ.
Leave a Comment