ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಎ1 ಆರೋಪಿ..? – ದರ್ಶನ್ ನಿಂದಲೇ ಕೊಲೆಯಾದ್ನಾ ರೇಣುಕಾಸ್ವಾಮಿ? ಪೋಲಿಸರಿಗೆ ಸಿಕ್ಕ ಮಹತ್ವದ ಸಾಕ್ಷಿ ಏನದು..?
ನ್ಯೂಸ್ ಆ್ಯರೋ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ರೋಚಕ ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ A2 ಬದಲು A1 ಆರೋಪಿಯನ್ನಾಗಿಸಲು ಪೊಲೀಸರು ಚಾರ್ಜ್ಶೀಟ್ ನಲ್ಲಿ ಸಿದ್ಧತೆ ಮಾಡಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.
ಪ್ರಕರಣದ ಕೆಲ ತಾಂತ್ರಿಕ ಸಾಕ್ಷ್ಯಗಳ ಎಫ್ಎಸ್ಎಲ್ ವರದಿ ಪೊಲೀಸರ ಕೈ ಸೇರಿದ್ದು, ರೇಣುಕಾಸ್ವಾಮಿ ಕೊಲೆ ದಿನದಂದು ನಡೆದ ಭೀಕರ ಹತ್ಯೆಗೆ ಸಂಬಂಧಿಸಿ 4 ಮಹತ್ವದ ಪೋಟೋಗಳನ್ನು ಪೊಲೀಸರು ರಿಟ್ರೀವ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ರೇಣುಕಾಸ್ವಾಮಿಯನ್ನು ಥಳಿಸಿ ಕೊಲ್ಲುವ ಸಂದರ್ಭದಲ್ಲಿ ನನ್ನನ್ನು ಬಿಟ್ಟು ಬಿಡಿ ಎಂದು ರೇಣುಕಾಸ್ವಾಮಿ ದರ್ಶನ್ ಎದುರು ಮಂಡಿಯೂರಿದ್ದನಂತೆ. ಆ ಫೋಟೋಗಳು ರಿಟ್ರೀವ್ ಆಗಿವೆಯಂತೆ…!
ಹೀಗಾಗಿ ದರ್ಶನ್ ಮುಂದಾಳತ್ವದಲ್ಲೇ ಕೊಲೆ ಆಗಿರಬಹುದೆಂಬ ಆರೋಪವಿದ್ದು, ಪ್ರಕರಣದಲ್ಲಿ ದರ್ಶನ್ A1 ಆರೋಪಿ ಎಂದು ಪರಿಗಣಿಸಲು ಖಾಕಿ ಟೀಂ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ನಟ ದರ್ಶನ್ ಆಪ್ತೆ ಪವಿತ್ರಾಗೌಡಗೆ ಹತ್ಯೆಯಾದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದಿಂದ ಬೆಂಗಳೂರಿಗೆ ಸಂಚು ರೂಪಿಸಿ ಪಟ್ಟಣಗೆರೆ ಶೆಡ್ಗೆ ಕರೆತಂದು ಕೊಲ್ಲಲಾಗಿತ್ತು. ಈ ಕೇಸ್ನಲ್ಲಿ ಒಟ್ಟು 17 ಆರೋಪಿಗಳ ಪೈಕಿ ಪವಿತ್ರಾಗೌಡಳನ್ನು A1 ಆರೋಪಿಯನ್ನಾಗಿ ಮಾಡಲಾಗಿತ್ತು.
ಇದೀಗ ದರ್ಶನ್ ನನ್ನು A2 ಬದಲು A1 ಎಂದು ಪರಿಗಣಿಸುವುದರೊಂದಿಗೆ, ಇನ್ನು ಪವಿತ್ರಾಗೌಡ ಸೇರಿದಂತೆ ನಾಲ್ವರು ಆರೋಪಿಗಳ ಆರೋಪಿ ಸ್ಥಾನಗಳ ನಂಬರ್ ಸಹ ಚೇಂಜ್ ಆಗಲಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆಯಿಂದ ದರ್ಶನ್ಗೆ ಮತ್ತೆ ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Leave a Comment