Renukaswamy Case : ಕೊಲೆಯಲ್ಲಿ ದರ್ಶನ್ ಸಹಿತ ಎಲ್ಲಾ 17 ಆರೋಪಿಗಳ ಪಾತ್ರ ಬಹಿರಂಗ – ಪೋಲಿಸರ ಕೈಸೇರಿದ FSL ವರದಿಯಲ್ಲಿ ಏನೇನಿದೆ? ಇಲ್ಲಿದೆ ಡೀಟೈಲ್ಸ್…

Spread the love

ನ್ಯೂಸ್ ಆ್ಯರೋ : ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳ ಪೊಲೀಸರು ಬಂಧಿಸಿದ್ದು ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ತಾಂತ್ರಿಕ ಸಾಕ್ಷ್ಯಗಳು, ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿ ಇಂದು ಪೊಲೀಸರಿಗೆ ಸಲ್ಲಿಕೆಯಾಗಿವೆ.

ಈ ಕೃತ್ಯದಲ್ಲಿ ಎಲ್ಲ ಆರೋಪಿಗಳ ಪಾತ್ರ ಏನೇನು? ಕೊಲೆ ದಿನ ಯಾರು ಏನೆಲ್ಲ ಮಾಡಿದ್ದಾರೆ?ಎಂಬುದರ ಪಿನ್ ಟು ಪಿನ್ ಕಂಪ್ಲೀಟ್ ಮಾಹಿತಿಯನ್ನು ಈ FSL ವರದಿಯಲ್ಲಿ ತಿಳಿಸಲಾಗಿದೆ.


ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಎ1 ಆರೋಪಿ ನಟಿ ಪವಿತ್ರಾ ಗೌಡ ಪಾತ್ರ ಇಲ್ಲ. ಹೆದರಿಸಲು ಹೇಳಿದ್ದೆ ಆದರೆ ಕರೆದುಕೊಂಡು ಬಂದವರೇ ಕೊಲೆ ಮಾಡಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಹಣ ಕೊಟ್ಟು ಕೇಸ್ ದಾರಿ ತಪ್ಪಿಸಲು ಪ್ರಯತ್ನಿಸಲಾಗಿತ್ತು. ಇದೀಗ ಪೊಲೀಸರಿಗೆ ಸಿಕ್ಕ ಸಾಕ್ಷ್ಯಾಧಾರಗಳು ಯಾರೆಲ್ಲ ಯಾವ್ಯಾವ ಹಂತದಲ್ಲಿ ಈ ಕೊಲೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಬಿಚ್ಚಿಟ್ಟಿವೆ. FSL ವರದಿಯಲ್ಲಿ ಅಂಶಗಳು ಇಲ್ಲಿವೆ.

ಎ1 ಆರೋಪಿ ಪವಿತ್ರಾ ಗೌಡ: ರೇಣುಕಾಸ್ವಾಮಿ ಹತ್ಯೆಗೆ ಮೂಲ ಕಾರಣ ಪವಿತ್ರಾ ಗೌಡ. ಕೊಲೆ ವೇಳೆ ಈಕೆ ಸ್ಥಳದಲ್ಲಿದ್ದಳು. ಕೃತ್ಯ ನಡೆದ ಸ್ಥಳದಲ್ಲಿ ನೆಟ್‌ವರ್ಕ್ ಸಾಕ್ಷ್ಯ,ಸಿಸಿ ಟಿವಿ ದೃಶ್ಯದ ಸಾಕ್ಷ್ಯಾಧಾರಗಳು ಸಿಕ್ಕಿವೆ. ಈಕೆ ಮೃತನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಇದೆಲ್ಲವು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.
ಎ2 ಆರೋಪಿ ನಟ ದರ್ಶನ್: ನಟ ದರ್ಶನ್ ರೇಣುಕಾಸ್ವಾಮಿ ಕಿಡ್ನಾಪ್ ಮಾಡಿಸಿ, ಕೊಲೆಯವರೆಗೆ ಇವರದ್ದು ಕೈವಾಡ ಇದೆ ಎಂದು ತಿಳಿದು ಬಂದಿದೆ. ಕೊಲೆ ಬಳಿಕ ಹಣ ನೀಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ. ಶೆಡ್ ಇರುವ ಸ್ಥಳಕ್ಕೆ ದರ್ಶನ್ ಬಂದು ಹೋಗಿದ್ದಕ್ಕೆ ಸಿಸಿಟಿವಿ ಸಾಕ್ಷ್ಯಗಳು ಲಭಿಸಿವೆ. ದರ್ಶನ್ ಬಟ್ಟೆ ಮತ್ತು ಶೂ ಮೇಲೆ ರಕ್ತ ಕಲೆಗಳು ಪತ್ತೆಯಾಗಿವೆ. ಕೊಲೆಯಲ್ಲಿ ನಟ ಭಾಗಿಯಾದ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ.

ಎ3 ಆರೋಪಿ ಪವನ್: ಈ ಪವನ್ ಪವಿತ್ರಾ ಗೌಡ ಹಾಗೂ ಚಿತ್ರದುರ್ಗದ ರಾಘವೇಂದ್ರ ಜೊತೆಗಿದ್ದ. ಫೇಕ್ ಇನ್ಸ್ಟಾಗ್ರಾಮ್ ಖಾತೆ ಮೂಲಕ ರೇಣುಕಾಸ್ವಾಮಿ ಜೊತೆ ಚಾಟಿಂಗ್ ಮಾಡಿ, ರಘುಗೆ ಕಿಡ್ನಾಪ್ ಮಾಡಲು ಈತ ಸೂಚಿದ್ದ ಎಂಬುದು ಗೊತ್ತಾಗಿದೆ. ಕಿಡ್ನಾಪ್ ಪ್ಲಾನ್ ಮಾಡಿದ ಪವನ್ ಶೆಡ್‌ಗೆ ತೆರಳಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಸಹ ಮಾಡಿದ್ದಾನೆ. ಈತನ ಬಟ್ಟೆ ಮೇಲೂ ರಕ್ತದ ಮಾದರಿ ಸಿಕ್ಕಿವೆ. ಕಿಡ್ನಾಪ್ ಸೂತ್ರಧಾರಿ ಈ ಪವನ್ ಮನೆಯಲ್ಲಿ ಒಂದಷ್ಟು ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಎ4 ಆರೋಪಿ ರಾಘವೇಂದ್ರ: ಪವನ್ ಸೂಚನೆ ಮೇರೆಗೆ ಚಿತ್ರದುರ್ಗ ದರ್ಶನ್ ಫ್ಯಾನ್ ರಾಘವೇಂದ್ರ ಚಿತ್ರದುರ್ಗದಲ್ಲಿ ಕಾದು ನಿಂತು ರೇಣುಕಾಸ್ವಾಮಿ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕೊಲೆ ನಡೆದ ಸ್ಥಳ ಶೆಡ್ ನಲ್ಲಿ ಈತ ಇದ್ದದ್ದು ಪತ್ತೆಯಾಗಿದೆ. ರೇಣುಕಾಸ್ವಾಮಿಯ ಹತ್ಯೆ ಬಳಿಕ ಆತನ ಚಿನ್ನಾಭರಣವನ್ನು ತನ್ನ ಪತ್ನಿಗೆ ನೀಡಿದ್ದ. ಆತನ ಮನೆಯಲ್ಲಿದ್ದ ಹಣ ಜಪ್ತಿ ಮಾಡಲಾಯಿತು.
ಎ5 ಆರೋಪಿ ನಂದೀಶ್: ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ನಂದೀಶ್, ರೇಣುಕಾಸ್ವಾಮಿ ಶವವನ್ನು ಹೊತ್ತು ವಿಲೇವಾರಿ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾನೆ. ಇದೆಲ್ಲ ದೃಶ್ಯಗಳು ಸೆರೆಯಾಗಿವೆ. ಇದೆಲ್ಲ FSL ವರದಿಯಲ್ಲಿ ಬಯಲಾಗಿವೆ.


ಎ6 ಆರೋಪಿ ಜಗದೀಶ್: ಈ ಜಗ್ಗಾ ಮೃತನನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಕೊಂಡು ಬಂದವರಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಬೆಂಗಳೂರಿಗೆ ಬಂದ ಮೇಲೆ ಹಲ್ಲೆ ಮಾಡಿದ್ದ. ನಂತರ ಪರಾರಿಯಾಗಿದ್ದ. ಇವನ ಪಾತ್ರ ಎಲ್ಲವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಎ7 ಆರೋಪಿ ಅನುಕುಮಾರ್: ಈ ಅನು ರೇಣುಕಾಸ್ವಾಮಿಯನ್ನು ಕರೆತಂದು ಬಿಟ್ಟಿದ್ದ. ಕೊಲೆಯಾದ ಬಳಿಕ ಈತ ಪರಾರಿಯಾಗಿದ್ದ. ನಂತರ ಈತನ ಬಗ್ಗೆ ಮೊಬೈಲ್, ಸಿಸಿಟಿ ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿ ಪತ್ತೆ ಮಾಡಿದ್ದಾರೆ.


ಎ8 ಆರೋಪಿ ರವಿ ಶಂಕರ್: ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಾರಿನಲ್ಲಿ ಕರೆತಂದದ್ದು ಇದೇ ಕಾರು ಚಾಲಕ ರವಿಶಂಕರ್. ನಂತರ ಆರೋಪಿಗಳನ್ನು ಕಾರಿನಲ್ಲಿ ಕರೆದೊಯ್ದಿದ್ದ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಸಹ ಪತ್ತೆ ಆಗಿದ್ದವು. ನಂತರ ಕಾರು ಜಪ್ತಿ ಮಾಡಲಾಯಿತು. ಬಳಿಕ ರೇಣುಕಸ್ವಾಮಿಯ ತಲೆಕೂದಲೇ ಇದೇ ಕಾರಿನಲ್ಲಿ ಸಿಕ್ಕಿದ್ದವು.
ಎ9 ಆರೋಪಿ ಧನರಾಜ್: ಈ ರಾಜು ಆರ್‌ಆರ್ ನಗರದ ನಿವಾಸಿ. ಮೃತನ ಮೇಲೆ ಹಲ್ಲೆ ಮಾಡುವಾಗ ಸ್ಥಳದಲ್ಲಿದ್ದುಕೊಂಡು ತಾನು ಹಲ್ಲೆ ಮಾಡಿದ್ದ. ರೇಣುಕಾಸ್ವಾಮಿಗೆ ಶಾಕ್ ಕೊಡಲು ಈತನಿಂದ ಎಲೆಕ್ಟ್ರಿಕ್ ಮೆಗ್ಗರ್ ಮಷಿನ್ ತರಿಸಿಕೊಳ್ಳಲಾಗಿತ್ತು. ಅಲ್ಲದೇ ಈತನೇ ಶಾಕ್ ಸಹ ಕೊಟ್ಟಿದ್ದ. ಅದಕ್ಕೆಲ್ಲ ಸಾಕ್ಷಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಎ10 ಆರೋಪಿ ವಿನಯ್: ಈತ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ. ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಲಾಠಿಯಿಂದ ಹಲ್ಲೆ ಮಾಡಿದ್ದ. ಮನ ಬಂದಂತೆ ಹೊಡೆದಿದ್ದ ಈತ ಮೊದಲಿನಿಂದಲೂ ನಟ ದರ್ಶನ್ ಜೊತೆಗೆ ಇದ್ದ. ಲಾಠಿಯಲ್ಲಿ ಮೃತನ ರಕ್ತದ ಮಾದರಿ ಇತ್ತು. ಜೊತೆಗೆ ವಿನಯ್ ಬಟ್ಟೆಯಲ್ಲಿ ರಕ್ತದ ಮಾದರಿ ಸಿಕ್ಕಿತ್ತು.
ಎ11 ಮತ್ತು 12 ಆರೋಪಿಗಳು ನಾಗರಾಜ್: ನಾಗನ ಜೊತೆಗೆ ಲಕ್ಷ್ಮಣ್ ಸೇರಿ ಇವರಿಬ್ಬರು ಕೊಲೆಯಾದ ಬಳಿಕ ಮೃತದೇವ ಸಾಗಿಲು ಪ್ಲಾನ್ ಮಾಡಿದವರಲ್ಲಿ ಇವರು ಪ್ರಮುಖರು. ನಾಗರಾಜು ನಟ ದರ್ಶನ್ ಅನಧಿಕೃತ ಮ್ಯಾನೇಜರ್. ಕುಡಿತ ಪಾರ್ಟಿಯ ನಿರ್ವಹಣೆ ಈತ ಮಾಡುತ್ತಿದ್ದ. ಕೊಲೆ ವೇಳೆ ರೇಣುಕಾಸ್ವಾಮಿಗೆ ಒದ್ದಿದ್ದ. ಕೊಲೆ ಬಳಿಕ ಹಣ ಕೊಟ್ಟು ಶರಣಾಗುವಂತೆ ನಾಗರಾಜ್ ಪ್ಲಾನ್ ಮಾಡಿದ್ದ. ಕೊಲೆ ಆರಂಭದಿಂದಲೇ ಈತ ನಟ ದರ್ಶನ್ ಜೊತೆಗಿದ್ದ.


ಎ 12 ಆರೋಪಿ ಲಕ್ಷ್ಮಣ್: ಕೊಲೆ ವೇಳೆ ಸ್ಥಳದಲ್ಲಿದ್ದ ಲಕ್ಷ್ಮಣ್ ಕೊಲೆಯಾದ ಬಳಿಕ ಮೃತ ದೇಹ ಎಸೆಯಲು ಸಹಾಯವಾಗಿದ್ದ. ಹತ್ಯೆ ಎಲ್ಲ ಬೆಳವಣಿಗೆಯಲ್ಲೂ ಈತನ ಹೆಸರು ಕೇಳಿ ಬಂದಿದೆ. ನಟ ದರ್ಶನ್ ಕಾರು ಚಾಲಕನಾಗಿದ್ದ ಲಕ್ಷ್ಮಣ್ ಪ್ರಕರಣದಿಂದ ದರ್ಶನ್ ಪಾರಾಗುವಂತೆ ಪ್ಲಾನ್ ಮಾಡಿದ್ದಾನೆ ಎಂದು ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಎ13 ಆರೋಪಿ ದೀಪಕ್: ದರ್ಶನ್ ಆಪ್ತನಾಗಿದ್ದ ದೀಪಕ್ ಸಹ ರೇಣುಕಾಸ್ವಾಮಿ ಥಳಿಸಿದ್ದ. ನಂತರ ದರ್ಶನ್ ಪ್ರದೂಶ್ ಹೇಳಿದಂತೆ ಹಣದ ವ್ಯವಸ್ಥೆ ಮಾಡಿ, ಪೊಲೀಸರಿಗೆ ಶರಣಾಗಲು ಹುಡುಗರನ್ನು ವ್ಯವಸ್ಥೆ ಮಾಡಿದ್ದ. ಅಲ್ಲದೇ ಶೆಡ್ ವ್ಯವಸ್ಥೆ ಮಾಡಿ ಕೊಟ್ಟಿರುವುದು ಸಾಬೀತಾಗಿದೆ.


ಎ14 ಆರೋಪಿ ಪ್ರದೂಶ್: ಇಂಜಿನಿಯರ್ ಆಗಿರುವ ಈ ಪ್ರದೂಶ್ ಹಲ್ಲೆ ಮಾಡಿದ್ದನಲ್ಲದೇ, ಹತ್ಯೆ ಬಳಿಕ ದರ್ಶನ್ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದನಲ್ಲದೇ, ವ್ಯವಹಾರದ ಸುಳ್ಳು ಹೇಳಿ ಹಣ ತೆಗೆದುಕೊಂಡು ಬಂದು ಶರಣಾಗುವ ಆರೋಪಿಗಳಿಗೆ ನೀಡಿದ್ದು ಸಾಬೀತಾಗಿದೆ. ಕೊಲೆಗೆ ಸಹಾಯ ಮಾಡುವ ಜೊತೆಗೆ ಕಾರಿನ ವ್ಯವಸ್ಥೆ ಮಾಡಿ, ಶರಣಾಗುವ ವ್ಯಕ್ತಿಗಳಿಗೆ ಹಣ ನೀಡಿ ಧೈರ್ಯ ನೀಡುವಲ್ಲಿ ಪ್ರದೂಶ್ ಪ್ರಮುಖ ಪಾತ್ರ ನಿರ್ವಹಿಸಿದ್ದಾನೆ ಎಂಬುದು ಎಫ್‌ಎಸ್‌ಎಲ್ ವರದಿಯಿಂದ ತಿಳಿದು ಬಂದಿದೆ.
ಎ15 ಆರೋಪಿ ಕಾರ್ತಿಕ್: ಪಟ್ಟಣಗೆರೆಯ ಶೆಡ್‌ನಲ್ಲಿ ಕೆಲಸ ಮಾಡಿಕೊಂಡು ಇದ್ದ ವ್ಯಕ್ತಿ. ಹಣ ಪಡೆದು ಶವ ಸಾಗಿಸಿದ ಕಾರ್ತಿಕ ಬಂಧನ ವೇಳೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.


ಎ16 ಆರೋಪಿ ಕೇಶವಮೂರ್ತಿ: ರೇಣುಕಾಸ್ವಾಮಿ ಕೊಲೆ ಬಳಿಕ ರೂ.05 ಲಕ್ಷ ಹಣ ಪಡೆದು ಕಾರಿನಲ್ಲಿ ಮೃತದೇಹ ಸಾಗಿಸಿದ್ದ. ಬಳಿಕ ಪೊಲೀಸರಿಗೆ ಶರಣಾಗಿದ್ದ. ಈತನ ಮನೆಯಲ್ಲಿ ಹಣ ಸಿಕ್ಕಿದ್ದಕ್ಕೆ ಸಾಕ್ಷಿಗಳು ಸಿಕ್ಕಿವೆ
ಎ17 ಆರೋಪಿ ನಿಖಿಲ್: ರೇಣುಕಾಸ್ವಾಮಿ ಕೊಲೆ ಬಳಿಕ ರೂ.05 ಲಕ್ಷ ಹಣ ಪಡೆದು ಕಾರಿನಲ್ಲಿ ಮೃತದೇಹ ಸಾಗಿಸಿದ್ದ. ಬಳಿಕ ಪೊಲೀಸರಿಗೆ ಶರಣಾಗಿದ್ದ. ಶವ ಸಾಗಿಸುವಲ್ಲಿ ಈತ ಪ್ರಮುಖ ಪಾತ್ರ ನಿರ್ವಹಿಸಿದ್ದ ಎಂಬ ಸಾಕ್ಷಿಗಳು ಎಫ್‌ಎಸ್‌ಎಲ್ ವರದಿಯಿಂದ ಸಾಬೀತಾಗಿದೆ.

ಇಷ್ಟೇ ಅಲ್ಲದೇ ಘಟನೆಯನ್ನು ಕಣ್ಣಾರೆ ಕಂಡವರು ಸೇರಿದಂತೆ ನಟ ಚಿಕ್ಕಣ್ಣ ಕೂಡ ಸೆಕ್ಷನ್‌ 164 ಹೇಳಿಕೆ ದಾಖಲಿಸಿದ್ದು, ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿರಲಿದೆ.

Leave a Comment

Leave a Reply

Your email address will not be published. Required fields are marked *