ರೇಣುಕಾಸ್ವಾಮಿ ಎದೆಯ ಎಲುಬು ಮುರಿದು ಶ್ವಾಸಕೋಶಕ್ಕೆ ಚುಚ್ಚಿತ್ತು..!! – ನಟ ದರ್ಶನ್ ಗ್ಯಾಂಗ್ ನ ಅಮಾನವೀಯ ಕೃತ್ಯ FSL ವರದಿಯಲ್ಲಿ ಬಹಿರಂಗ..!!

Spread the love

ನ್ಯೂಸ್ ಆ್ಯರೋ : ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆಯ ಬಳಿಕ ನಟ ದರ್ಶನ್ ಜೈಲು ಶಿಕ್ಷೆಗೆ ಗುರಿಯಾಗಿ ಸದ್ಯ ಜೈಲಿನಲ್ಲಿದ್ದು, ರೇಣುಕಾಸ್ವಾಮಿಯ ಪೋಸ್ಟ್​ ಮಾರ್ಟಂ ಪರೀಕ್ಷೆಯ ಸ್ಯಾಂಪಲ್ಸ್​ ಎಫ್​ಎಸ್​​ಎಲ್​ ವರದಿಯಲ್ಲಿ ಹೊರಬಿದ್ದಿದೆ. ರೇಣುಕಾಸ್ವಾಮಿಯ ಎದೆಯ ಎಲುಬು ಮುರಿದು, ಶ್ವಾಸಕೋಶಕ್ಕೆ ಮೂಳೆ ಚುಚ್ಚಿದ್ದು ಇದರಿಂದಲೇ ಕೊಲೆಯಾಗಿರೋದು ವರದಿಯಲ್ಲಿ ಬೆಳಕಿಗೆ ಬಂದಿದೆ.

ರೇಣುಕಾಸ್ವಾಮಿಯ ಮೊಣಕಾಲು ಮೂಳೆ ಮುರಿದು, ಬಲಗಣ್ಣಿಗೂ ಗಾಯವಾಗಿದೆ. ಮಾರಣಾಂತಿಕವಾಗಿ ಹಲ್ಲೆ ಮಾಡುವಾಗ ರೇಣುಕಾಸ್ವಾಮಿಯನ್ನು ಟೆಂಪೋಗೆ ಬಲವಾಗಿ ಹೊಡೆದಿರೋದು ಸಹ ರಿವೀಲ್ ಆಗಿದ್ದು, ಒಂದಲ್ಲ ಎರಡಲ್ಲ ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ.

ನಟ ದರ್ಶನ್ ಅಲ್ಲದೆ ಇತರ ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ಇದರಲ್ಲಿ ದರ್ಶನ್, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ರವಿಶಂಕರ್, ನಂದೀಶ್ ಹಾಗೂ ದೀಪಕ್ ಸೇರಿ ಆರಕ್ಕೂ ಹೆಚ್ಚು ಜನರ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ.

ಇಷ್ಟೇ ಅಲ್ಲದೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ್ದ ಹಗ್ಗ ರಿಪೀಸ್ ಕಟ್ಟಿಗೆ, ಶವ ಸಾಗಿಸಿದ ಕಾರಿನಲ್ಲೂ ರಕ್ತದ ಕಲೆಗಳು ಪತ್ತೆಯಾಗಿವೆ. ಈಗಾಗಲೇ ದರ್ಶನ‌್ ಬಟ್ಟೆ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಈಗ ಮತ್ತಷ್ಟು ಕಡೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿರುವುದು ಕೇಸ್​​ನಲ್ಲಿ ಆರೋಪಿಗಳ ವಿರುದ್ಧ ಹೆಚ್ಚಿನ ಸಾಕ್ಷಿ ಸಿಕ್ಕಂತಾಗಿದೆ.

ಸದ್ಯ ದೊರಕಿರುವ ಎಫ್​ಎಸ್​ಎಲ್ ವರದಿ ತುಂಬಾ ಮುಖ್ಯ ಸಾಕ್ಷಿಯಾಗಲಿದೆ. ನಟ ದರ್ಶನ್​ಗೆ ದೊಡ್ಡ ಸವಾಲಾಗಲಿದೆ. ಆದರೆ ಒಂದು ವೇಳೆ ದರ್ಶನ್ ಜೀನ್ಸ್ ಮತ್ತ ಟೀ ಶರ್ಟ್ ಪೊಲೀಸರಿಗೆ ಸಿಗದೇ ಹೋಗಿದ್ದರೆ ದೊಡ್ಡ ಸಾಕ್ಷ್ಯವೊಂದು ಮಿಸ್ ಆದಂತೆ ಆಗುತ್ತಿತ್ತು. ದರ್ಶನ್ ವಿರುದ್ಧ ಸ್ಟ್ರಾಂಗ್ ಎವಿಡೆನ್ಸ್ ಸಿಗುತ್ತಿರಲಿಲ್ಲ.

ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡಿದ್ದ ದರ್ಶನ್ ನ ನೀಲಿ ಬಣ್ಣ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ರೌಂಡ್ ನೆಕ್ ಶರ್ಟ್​ನಲ್ಲಿ ರಕ್ತದ ಕಲೆ ಕಂಡು ಬಂದಿದೆ. ಪೊಲೀಸರು ಇದನ್ನು ವಶಕ್ಕೆ ಪಡೆದು ಎಫ್​ಎಸ್​ಎಲ್ ಪರೀಕ್ಷೆಗೆ ಕಳುಹಿಸಿದ್ದರು. ಎಫ್ ಎಸ್ ಎಲ್ ಪರಿಶೀಲನೆಯಲ್ಲಿ ದರ್ಶನ್ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವುಗಳು ರೇಣುಕಾಸ್ವಾಮಿಯ ದೇಹದ ರಕ್ತ ಎಂಬುದು ಎಫ್ ಎಸ್ ಎಲ್ ವರದಿಯಲ್ಲಿ ಧೃಡ ಪಟ್ಟಿದೆ.

Leave a Comment

Leave a Reply

Your email address will not be published. Required fields are marked *