ದೈತ್ಯ ಹೆಬ್ಬಾವಿನ ಜೊತೆ ಸರಸ; ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಯುವಕ, ವಿಡಿಯೋ ವೈರಲ್
ನ್ಯೂಸ್ ಆ್ಯರೋ: ಹಾವುಗಳೆಂದರೆ ಯಾರಿಗೆ ತಾನೇ ಭಯವಿರಲ್ಲ ಹೇಳಿ. ಅದರಲ್ಲೂ ಹೆಬ್ಬಾವು, ಕಾಳಿಂಗ ಸರ್ಪದಂತಹ ದೈತ್ಯ ಹಾವುಗಳನ್ನು ಕಂಡರೆ ಸಾಕು ಜನ ಮಾರು ದೂರ ಓಡಿ ಹೋಗ್ತಾರೆ. ಮಾತ್ರವಲ್ಲ ಹಾವಿನ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದವರ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಲ್ಲೊಂದು ಇದೇ ರೀತಿಯ ಘಟನೆ ನಡೆದಿದ್ದು, ಯುವಕನೊಬ್ಬ ದೈತ್ಯ ಹೆಬ್ಬಾವನ್ನು ಬರಿಗೈಲಿ ಹಿಡಿದು, ವಿಡಿಯೋ ಮಾಡುವ ಸಲುವಾಗಿ ಆ ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ವಿಡಿಯೋ, ರೀಲ್ಸ್ ಸಲುವಾಗಿ ಹಾವುಗಳ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದವರ ವಿಡಿಯೋಗಳು ಆಗೊಮ್ಮೆ ಈಗೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್ ಆಗಿದೆ. ಯುವಕನೊಬ್ಬ ರೀಲ್ಸ್ ಮಾಡುವ ಸಲುವಾಗಿ ದೈತ್ಯ ಹೆಬ್ಬಾವನ್ನು ಕೈಯಲ್ಲಿ ಹಿಡಿದು ಅದಕ್ಕೆ ಮುತ್ತಿಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ.
ಪೂನಂ ಶರ್ಮಾ (Poonam_1992) ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬಹುಶಃ ರೀಲ್ಸ್ ಮಾಡುವ ಹವ್ಯಾಸ ದುಬಾರಿಯಾಗಬಹುದು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಬರಿಗೈಲಿ ದೈತ್ಯ ಹೆಬ್ಬಾವನ್ನು ಹಿಡಿದಿರುವ ದೃಶ್ಯವನ್ನು ಕಾಣಬಹುದು.
ಹೀಗೆ ಹಾವಿಗೆ ಆತ ಹಾವಿಗೆ ಮುತ್ತಿಡಲು ಹೋದಾಗ ಹಾವು ಒಮ್ಮೆಲೆ ಎಗರಿ ಯುವಕನ ಮುಖಕ್ಕೆ ಕಚ್ಚಿದೆ. ಈ ಹಾವಿನ ದಾಳಿಯಿಂದ ಬಿಡಿಸಿಕೊಳ್ಳಲು ಆತ ಹರ ಸಾಹಸವನ್ನೇ ಪಟ್ಟಿದ್ದಾನೆ. ಹೆಬ್ಬಾವು ವಿಷವಲ್ಲ ಆದ್ರೆ ಈ ದೃಶ್ಯ ನಿಜಕ್ಕೂ ಭಯಾನಕವಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗ್ತಿದೆ.
Leave a Comment