ಮತ್ತೊಂದು ಬಿಗ್​ ರಿಲೀಫ್; ಗೃಹ, ವಾಹನ ಸಾಲ ಮಾಡೋರಿಗೆ ಗುಡ್​ನ್ಯೂಸ್

India's central bank seen cutting rates
Spread the love

ನ್ಯೂಸ್ ಆ್ಯರೋ: ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೊ ದರ (RBI Repo rate) ಕುರಿತು ದೊಡ್ಡ ಘೋಷಣೆ ಮಾಡಿದೆ. ಐದು ವರ್ಷಗಳ ಬಳಿಕ ಮೊದಲ ಬಾರಿಗೆ ರೆಪೊ ದರ 25 ಬೇಸಿಸ್ ಪಾಯಿಂಟ್ಸ್​ನಷ್ಟು ಕಡಿತ ಮಾಡಿದೆ.

ಸಾಮಾನ್ಯ ಜನರ ನಿರೀಕ್ಷೆಯಂತೆ ರೆಪೋ ದರ ಕಡಿತವಾಗಿದ್ದು, ಆ ಮೂಲಕ ರೆಪೋ ರೇಟ್ ಶೇಕಡಾ 6.25 ಕ್ಕೆ ಇಳಿಕೆ ಆಗಿದೆ. ಪ್ರಸ್ತುತ ಶೇಕಡಾ 6.5 ರಷ್ಟು ಆರ್‌ಬಿಐ ರೆಪೋ ದರ ಇತ್ತು. ಇದೀಗ ರೆಪೋ ರೇಟ್​ ಶೇಕಡಾ 6.25ಕ್ಕೆ ಇಳಿಕೆ ಆಗಿರೋದ್ರ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರ ಇಳಿಕೆ ಆಗಲಿದೆ.

ವಾಣಿಜ್ಯ ಬ್ಯಾಂಕುಗಳು ಎಲ್ಲಾ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲಿವೆ. ರೆಪೋ ದರ ಇಳಿಕೆಯಿಂದ ಆರ್‌ಬಿಐ, ವಾಣಿಜ್ಯ ಬ್ಯಾಂಕ್​ಗಳಿಗೆ ಸಾಲದ ಬಡ್ಡಿದರ ಕಡಿಮೆ ಆಗಲಿದೆ. ಇದರಿಂದ ಗ್ರಾಹಕರಿಗೆ ವಿವಿಧ ಬ್ಯಾಂಕ್​ಗಳು ನೀಡುವ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.

ರೆಪೋ ದರ ಇಳಿಕೆಯಾದರೆ, ಗ್ರಾಹಕರ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.

Leave a Comment

Leave a Reply

Your email address will not be published. Required fields are marked *