ಸಕಲೇಶಪುರ-ಬಾಳ್ಳುಪೇಟೆ ರೈಲ್ವೆ ಹಳಿ ಮೇಲಿನ ಭೂಕುಸಿತದ ಮಣ್ಣು ತೆರವು – ನಾಳೆಯಿಂದ ರೈಲು ಸಂಚಾರ ಪುನರಾರಂಭ : ರೈಲುಗಳ ವಿವರ ಇಲ್ಲಿದೆ..

N6272341691724079537445c69bf696ac53e6f2a9c770c01e2a5c85388656a10b5af504540b9ca9f03b2963
Spread the love

ನ್ಯೂಸ್ ಆ್ಯರೋ : ಸಕಲೇಶಪುರ ಹಾಗೂ ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆಯೇ ಮಳೆಯಿಂದಾಗಿ ಭೂಕುಸಿತಗೊಂಡು ಕುಸಿದಿದ್ದ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ನಾಳೆಯಿಂದ ಈ ಮಾರ್ಗದಲ್ಲಿ ಕೆಲ ರೈಲುಗಳ ಸಂಚಾರ ಪುನರಾರಂಭವಾಗಲಿದೆ‌.

ರೈಲು ಸಂಚಾರದ ಬಗ್ಗೆ ನೈರುತ್ಯ ರೈಲ್ವೆಯಿಂದ ಮಾಹಿತಿ ನೀಡಲಾಗಿದ್ದು, ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತಕ್ಕೆ ಸಂಬಂಧಿಸಿದಂತೆ, ಪುನಃಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ.

ಸದ್ಯ ಹಳಿಯಲ್ಲಿನ ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಲಾಗಿದೆ ಮತ್ತು ಸಂಜೆ 4:45 ರವರೆಗೆ ಹಳಿಯ ಎಲ್ಲಾ ರೈಲು ಕಾರ್ಯಾಚರಣೆಗಳನ್ನು ಪೂರ್ತಿಗೊಳಿಸಲಾಗಿದೆ.

ನಾಳೆಯಿಂದ ಈ ಮಾರ್ಗದಲ್ಲಿ ಈ ಕೆಳಕಂಡ ರೈಲುಗಳ ಸಂಚಾರ ಪುನರಾರಂಭ

  • ರೈಲು ಸಂಖ್ಯೆ 16586 ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್
  • ರೈಲು ಸಂಖ್ಯೆ 16585 ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್
  • ರೈಲು ಸಂಖ್ಯೆ 16595 ಕೆಎಸ್‌ಆರ್ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್
  • ರೈಲು ಸಂಖ್ಯೆ 16596 ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್ಪ್ರೆಸ್
  • ರೈಲು ಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್
  • ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್ಪ್ರೆಸ್
  • ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ ಎಕ್ಸ್ಪ್ರೆಸ್
  • ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲು

Leave a Comment

Leave a Reply

Your email address will not be published. Required fields are marked *

error: Content is protected !!