ʼಯಾರದೋ ಹೆಣ ತಂದು ಹೂತು ನಮ್ಮದು ಎನ್ನುತ್ತಾರೆʼ: ವಕ್ಫ್ ಆಸ್ತಿ ವಿಚಾರವಾಗಿ ಪ್ರತಾಪ್ ಸಿಂಹ ವಾಗ್ದಾಳಿ
ನ್ಯೂಸ್ ಆ್ಯರೋ: ಉತ್ತರ ಕರ್ನಾಟಕದ ಜಿಲ್ಲೆಗಳ ರೈತರ ಪಿತ್ರಾರ್ಜಿತ ಆಸ್ತಿಗಳಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬಂದಿರುವ ಬಗ್ಗೆ ಬಿಜೆಪಿ ನಾಯಕ, ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮುಸ್ಲಿಮರು ವಕ್ಫ್ ಆಸ್ತಿ ಎನ್ನುತ್ತಾರಲ್ಲ, ಅದು ಅವರಿಗೆ ಯಾರಿಂದ ಬಂತು? ಅಕ್ಬರ್, ಔರಂಗಜೇಬ್, ಜಿನ್ನಾ ಅಥವಾ ಯಾರಾದರೂ ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿಯೇ ಇದು? ಪ್ರತ್ಯೇಕ ಆಸ್ತಿ ಮುಸ್ಲಿಮರಿಗೆ ಎಲ್ಲಿಂದ ಬಂತು? ಯಾರಿಂದ ಅವರಿಗೆ ಬಳುವಳಿ ಬಂದಿದ್ದು ಎಂದು ಪ್ರಶ್ನಿಸಿದರು.
ಮೈಸೂರಿನ ಹುಣಸೂರಿನಲ್ಲೂ ಗಣೇಶ ದೇವಾಲಯದ 17 ಎಕರೆ ನಮ್ಮದು ಎಂದು ವಕ್ಫ್ ಬೋರ್ಡ್ ಪಟ್ಟುಹಿಡಿದಿದೆ. ಯಾರದೋ ಹೆಣ ತಂದು ಹೂತು ನಮ್ಮದು ಎನ್ನುತ್ತಿದ್ದಾರೆ. ಚಿಕ್ಕಮಗಳೂರಿನಲ್ಲೂ ಇದೇ ಕಥೆ ಆಗಿದೆ. ಕಂಡವರ ಜಮೀನಿಗೆಲ್ಲಾ ಮುಲ್ಲಾಗಳು ನೋಟಿಸ್ ಕೊಡುತ್ತಾ, ‘ಇದು ನಮ್ಮದು’ ಎನ್ನುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯಗೆ ಮುಡಾ ಕಷ್ಟ ಎದುರಾದಾಗ ಚಾಮುಂಡಿ ತಾಯಿ, ಹಾಸನಾಂಬೆ ತಾಯಿ ನೆನಪಾಗಿದ್ದಾರೆ. ಸಿಎಂಗೆ ಕಷ್ಟ ಬಂದಾಗ ಅವರ ಸಹಾಯಕ್ಕೆ ಬರುವುದು ನಮ್ಮ ದೇವಾನುದೇವತೆಗಳೇ ಹೊರತು ಬೇರೆ ಧರ್ಮದವರಲ್ಲ. ಹೀಗಾಗಿ ಸಿಎಂ ಈಗ ಹಿಂದೂಗಳ ವಿರುದ್ಧ ನಿಲುವು ತೆಗೆದುಕೊಳ್ಳವುದಿಲ್ಲ ಎಂದುಕೊಂಡಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದರು. ಪ್ರಧಾನ ಮಂತ್ರಿಗಳು ವಕ್ಫ್ ಕಾಯ್ದೆ, ವಕ್ಫ್ ಬೋರ್ಡ್ ಅನ್ನೇ ರದ್ದು ಮಾಡಬೇಕು ಎಂದೂ ಅವರು ಆಗ್ರಹಿಸಿದರು.
Leave a Comment