ಲೋಕಸಭೆ ಚುನಾವಣೆಯಲ್ಲಿ ಮೆಟಾ, ಗೂಗಲ್ ನಿಂದ‌ I.N.D.I.A ಮೈತ್ರಿಗೆ ಸೋಲಾಗುವ ಭೀತಿ – ತಟಸ್ಥವಾಗಿ ಕಾರ್ಯ ನಿರ್ವಹಿಸುವಂತೆ ಕೋರಿ ಪತ್ರ ಬರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಲೋಕಸಭೆ ಚುನಾವಣೆಯಲ್ಲಿ ಮೆಟಾ, ಗೂಗಲ್ ನಿಂದ‌ I.N.D.I.A ಮೈತ್ರಿಗೆ ಸೋಲಾಗುವ ಭೀತಿ – ತಟಸ್ಥವಾಗಿ ಕಾರ್ಯ ನಿರ್ವಹಿಸುವಂತೆ ಕೋರಿ ಪತ್ರ ಬರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ನ್ಯೂಸ್ ಆ್ಯರೋ : ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಫೇಸ್‌ ಬುಕ್‌, ಯೂಟ್ಯೂಬ್‌, ವಾಟ್ಸಪ್ “ತಟಸ್ಥ”ವಾಗಿ ಕಾರ್ಯ ನಿರ್ವಹಿಸಬೇಕು ಎಂದು ವಿರೋಧ ಪಕ್ಷಗಳ ಒಕ್ಕೂಟ ಆಗ್ರಹಿಸಿದೆ. ಈ ಬಗ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಫೇಸ್ ಬುಕ್ ಹಾಗೂ ಗೂಗಲ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಪತ್ರ ಬರೆದಿದ್ದಾರೆ.

ವೇದಿಕೆಗಳನ್ನು “ಸಾಮಾಜಿಕ ಅಶಾಂತಿಯನ್ನು ಉಂಟುಮಾಡಲು ಬಳಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದೆ. ಕೋಮು ದ್ವೇಷವನ್ನು ಪ್ರಚೋದಿಸುವ ಆರೋಪದಲ್ಲಿ ಫೇಸ್‌ಬುಕ್, ವಾಟ್ಸಾಪ್ ಮತ್ತು ಯೂಟ್ಯೂಬ್‌ನ ಪಾತ್ರದ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ, ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಮೆಟಾ ಮತ್ತು ಗೂಗಲ್‌ನ ಸಿಇಒಗಳಾದ ಮಾರ್ಕ್ ಜುಕರ್‌ಬರ್ಗ್ ಮತ್ತು ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದೆ.

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹಾಗೂ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಟ್ವಿಟರ್ (ಎಕ್ಸ್) ನಲ್ಲಿ ಪೋಸ್ಟ್ ಮಾಡುವ ಮೂಲಕ ಪತ್ರ ಹಂಚಿಕೊಂಡಿರುವ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭಾ ಚುನಾವಣೆ ಸಮೀಪದಲ್ಲೇ ಇದ್ದು, ಮತದಾನದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳು ಯಾವುದೇ ರೀತಿಯಲ್ಲಿ ಕೋಮುಪ್ರಚೋದನೆಗೆ ಸಾಕ್ಷಿಯಾಗದೆ ತಟಸ್ಥತೆಯನ್ನು ಕಾಯ್ದುಕೊಳ್ಳುವಂತೆ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಡೆಗೆ ಫೇಸ್ ಬುಕ್, ವಾಟ್ಸಾಪ್ ಹಾಗೂ ಯೌಟ್ಯೂಬ್ ನ ಪಕ್ಷಪಾತದ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ವರದಿ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಇಂಡಿಯಾ ಒಕ್ಕೂಟದ ಪರವಾಗಿ ಮಲ್ಲಿಕಾರ್ಜುನ್ ಖರ್ಗೆ ಎರಡು ಪುಟಗಳ ಪತ್ರ ಬರೆದಿದ್ದಾರೆ.

ಈ ಪತ್ರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಡಿಎಂಕೆ ಸಂಸದ ಡಿ. ರಾಜಾ, ಸಿಪಿಐ (ಎಂ) ಮುಖಂಡ ಸೀತಾರಾಮ್ ಯೆಚೂರಿ, ಕಾಶ್ಮೀರದ ಮೆಹಬೂಬಾ ಮುಫ್ತಿ ಸೇರಿದಂತೆ ಇಂಡಿಯಾ ಬ್ಲಾಕ್‌ನ 14 ನಾಯಕರು ಪತ್ರಕ್ಕೆ ಸಹಿ ಹಾಕಿದ್ದಾರೆ.

Related post

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಮೂವರ ಬಂಧನ – ಸುಳ್ಯ ಮೂಲದ ಒಬ್ಬ, ಸೋಮವಾರಪೇಟೆಯ ಇಬ್ಬರು ‌ಎನ್ಐಎ ಬಲೆಗೆ..!!

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಮೂವರ ಬಂಧನ…

ನ್ಯೂಸ್ ಆ್ಯರೋ : ಬೆಳ್ಳಾರೆಯ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ ಮೂವರು ಆರೋಪಿಗಳನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆಮಹಲ್‌…
ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು – ಈ ಬಾರಿ ದೂರು ನೀಡಿದ್ದು ಯಾರು ಗೊತ್ತಾ?

ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು – ಈ…

ನ್ಯೂಸ್ ಆ್ಯರೋ : ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ಪ್ರಜ್ವಲ್ ವಿರುದ್ಧ ಸಾಲು ಸಾಲು ಅತ್ಯಾಚಾರ ಕೇಸ್ ಗಳು ದಾಖಲಾಗುತ್ತಿದ್ದು, ಇದೀಗ…
ಇಂದಿನಿಂದ ಚಾರ್‌ಧಾಮ್ ಯಾತ್ರೆ ಆರಂಭ: ಬುಕ್ಕಿಂಗ್ ತುಂಬಾ ಸುಲಭ

ಇಂದಿನಿಂದ ಚಾರ್‌ಧಾಮ್ ಯಾತ್ರೆ ಆರಂಭ: ಬುಕ್ಕಿಂಗ್ ತುಂಬಾ ಸುಲಭ

ನ್ಯೂಸ್ ಆ್ಯರೋ : ಬದರಿನಾಥ್ ಧಾಮ್, ಯಮುನೋತ್ರಿ ಧಾಮ್‌, ಕೇದಾರನಾಥ ಧಾಮ್ ಮತ್ತು ಗಂಗೋತ್ರಿ ಧಾಮ್ ಕ್ಷೇತ್ರಗಳನ್ನು ಸಂದರ್ಶಿಸುವುದನ್ನು ಚಾರ್ ಧಾಮ್ ಯಾತ್ರಾ ಎಂದು ಕರೆಯುತ್ತಾರೆ. ಇಂತಹ ಪವಿತ್ರವಾದ…

Leave a Reply

Your email address will not be published. Required fields are marked *