ʼಕರ್ನಾಟಕ ಚಿತ್ರಣ ಬದಲಿಸಿದ ನಾಯಕʼ; ಎಸ್ಎಂ ಕೃಷ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ನ್ಯೂಸ್ ಆ್ಯರೋ: ಕರ್ನಾಟಕ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ವಿಧಿಶವರಾಗಿದ್ದಾರೆ. 92ನೇ ವಯಸ್ಸಿನಲ್ಲಿ ತಮ್ಮ ಸ್ವಗೃಹದಲ್ಲಿ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ. ಎಸ್ಎಂ ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಕರ್ನಾಟಕದ ಮೂಲಭೂತ ಸೌಕರ್ಯದಲ್ಲಿ ತಂದ ಬದಲಾವಣೆ ರಾಜ್ಯದ ಚಿತ್ರವಣನ್ನೇ ಬದಲಿಸಿತು ಎಂದು ಮೋದಿ ಹೇಳಿದ್ದಾರೆ. ಮೋದಿ ಜೊತೆಗಿನ ಕೆಲ ಅಪೂರ್ವ ಕ್ಷಣಗಳನ್ನು ಮೋದಿ ನೆನೆಪಿಸಿಕೊಂಡಿದ್ದಾರೆ.
ಎಸ್ಎಂ ಕೃಷ್ಣ ನಿಧನ ಅತೀವ ದುಃಖ ತಂದಿದೆ. ಕಳೆದ ಕೆಲ ವರ್ಷಗಳಲ್ಲಿ ಎಸ್ಎಂ ಕೃಷ್ಣ ಅವರ ಜೊತೆ ಮಾತನಾಡುವ, ಭೇಟಿ ಮಾಡುವ ಅವಕಾಶ ನನ್ನ ಪಾಲಿಗೆ ಒದಗಿ ಬಂದಿತ್ತು. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿ ಬಳಗ್ಗೆ ನನ್ನ ಸಂತಾಪ. ಎಸ್ಎಂ ಕೃಷ್ಣ ಅಪ್ರತಿಮ ನಾಯಕನಾಗಿದ್ದರು. ಸಮಾಜ ಎಲ್ಲಾ ವರ್ಗದ ಜನರಿಂದ ಮೆಚ್ಚುಗೆಗೆ ಹಾಗೂ ಗೌರವಕ್ಕೆ ಪಾತ್ರರಾಗಿದ್ದ ನಾಯಕ. ಸಮಾಜ ಪ್ರತಿಯೊಬ್ಬರ ಜೀವನ ಸುಧಾರಣೆಗೆ ದಣಿವರಿಯದೇ ಶ್ರಮಿಸಿದ ನಾಯಕ ಎಸ್ಎಂ ಕೃಷ್ಣ. ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ ಮೂಲಭೂತ ಸೌಕರ್ಯದಲ್ಲಿ ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ್ದರು. ವಿಶೇಷ ಅಂದರೆ ಎಸ್ಎಂ ಕೃಷ್ಣ ಓದುಗ ಹಾಗೂ ಚಿಂತರಾಗಿದ್ದರು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಎರಡು ಟ್ವೀಟ್ ಮಾಡಿರುವ ಮೋದಿ ಎಸ್ಎಂ ಕೃಷ್ಣ ಅವರನ್ನು ಭೇಟ ಮಾಡಿದ ಅಪೂರ್ವ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಎಸ್ಎಂ ಕೃಷ್ಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Leave a Comment