ದೀಪಾವಳಿ ಹಬ್ಬದಂದು ಪೆಟ್ರೋಲ್ ಬಾಂಬ್ ಸ್ಫೋಟ; ವಿದ್ಯಾರ್ಥಿ ವಿರುದ್ಧ ಕೇಸ್ ದಾಖಲು
ನ್ಯೂಸ್ ಆ್ಯರೋ: ಹಾಸನದ ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿಯೊಬ್ಬ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿದ್ದಾನೆ ಎಂಬ ಆರೋಪದ ಮೇಲೆ ಗುರುವಾರ (ನ.14) ದಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆಯರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ವಿಭಾಗದಲ್ಲಿ ಪದವಿ ಓದುತ್ತಿರುವ ಕಿರಣ್.ಎಚ್ ಎಂದು ಗುರುತಿಸಲಾಗಿದೆ.
ದೀಪಾವಳಿ ಹಬ್ಬದ ರಾತ್ರಿ ವೇಳೆ ತನ್ನ ಬೈಕ್ನಿಂದ ಪೇಟ್ರೋಲ್ ತಗೆದು, ಪ್ಲಾಸ್ಟಿಕ್ ಕವರ್ಗೆ ತುಂಬಿಸಿ ಅದಕ್ಕೆ ಬೆಂಕಿ ಹಚ್ಚಿದ್ದಾನೆ. ಇದು ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರ ಗಮನ ಸೆಳೆದಿದೆ. ಇದು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಮತ್ತು ಪರೋಕ್ಷವಾಗಿ ಪ್ರಚೋದಿಸಿದ ಇಬ್ಬರ ವಿರುದ್ಧ ಸಾರ್ವಜನಿಕ ತೊಂದರೆ ಮತ್ತು ಅಪಾಯವನ್ನು ಉಲ್ಲೇಖಿಸಿ ಕೇಸ್ ಹಾಕಲಾಗಿದೆ ಎಂದು ಹಾಸನ ಎಸ್ಪಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.(ಎಚ್ಪಿಸಿಎಲ್)ನ ಪೆಟ್ರೋಲ್ ಮತ್ತು ಡಿಸೇಲ್ ಲೋಡಿಂಗ್-ಆನ್ ಲೋಡಿಂಗ್ ಟರ್ಮಿನಲ್ ಮೇಡಿಕಲ್ ಕಾಲೇಜಿನ ಅರ್ಧ ಕೀಲೊಮೀಟರ್ ವ್ಯಾಪ್ತಿಯಲ್ಲಿದೆ. ಇದು ನಿರ್ಬಂಧಿತ ಪ್ರದೇಶ ಎಂದು ಸರ್ಕಾರ ಘೋಷಿಸಿದೆ.
Leave a Comment