ಭಾರತದಲ್ಲಿ ಹೊಸ ನಿಯಮ; ಮಕ್ಕಳ ಸೋಶಿಯಲ್ ಮೀಡಿಯಾ ಖಾತೆಗೆ ಪೋಷಕರ ಅನುಮತಿ ಬೇಕು

Social
Spread the love

ನ್ಯೂಸ್ ಆ್ಯರೋ: ಸೋಶಿಯಲ್ ಮೀಡಿಯಾ ಬಳಕೆ ಮಕ್ಕಳ ಭವಿಷ್ಯ ಹಾಳುಮಾಡುತ್ತದೆ. ಮಾನಸಿಕವಾಗಿ ಸಮಸ್ಯೆಗೆ ಕಾರಣವಾಗುತ್ತಿದೆ ಸೇರಿದಂತೆ ಹಲವು ಆರೋಪಗಳಿವೆ. ಇದಕ್ಕೆ ಪೂರಕವಾಗಿ ಹಲವು ಘಟನೆಗಳು ನಡೆದಿದೆ. ಸೋಶಿಯಲ್ ಮೀಡಿಯಾ ಹೊಸ ಪೀಳಿಗೆಯ ಸಂಭ್ರಮದ ಬದುಕು ಕಸಿದುಕೊಂಡಿದೆ ಅನ್ನೋ ಮಾತು ಎಲ್ಲಾ ಪೋಷಕರು, ತಜ್ಞರು ಒತ್ತಿ ಒತ್ತಿ ಹೇಳಿದ್ದಾರೆ. ಇದೀಗ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತದಲ್ಲಿ ಡೇಟಾ ಪ್ರೊಟೆಕ್ಷನ್ ಕಾಯ್ದೆ ಜಾರಿಗೆ ತರುತ್ತಿದೆ. ಈ ಕಾಯ್ದೆ ಪ್ರಕಾರ, ಮಕ್ಕಳು ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯವಾಗಿದೆ.

ಡೇಟಾ ಪ್ರೊಟೆಕ್ಷನ್ ಕಾಯ್ದೆ ಕರಡು ಪ್ರತಿ ಸಿದ್ದಗೊಂಡಿದೆ. ಇದರಲ್ಲಿ ಮಕ್ಕಳ ಸೋಶಿಯಲ್ ಮೀಡಿಯಾ ಬಳಕೆ ನಿಯಂತ್ರಿಸಲು ಮಹತ್ವದ ಕಾನೂನು ತರಲು ಉಲ್ಲೇಖಿಸಲಾಗಿದೆ. ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆ 2023ನ್ನು ಸಂಸತ್ತು ಅನುಮೋದನೆ ನೀಡಿದೆ. ಇದೇ ಕಾಯ್ದೆಗೆ ಕೆಲ ಪ್ರಮುಖ ಡಿಜಿಟಲ್ ಪ್ರೊಟೆಕ್ಷನ್ ಸೇರಿಸಲಾಗಿದೆ. ಶೀಘ್ರದಲ್ಲೇ ಈ ಕರಡು ಪ್ರತಿಯನ್ನು ಸರ್ಕಾರ ಅಧಿಸೂಚನೆ ಹೊರಡಿಸಲಿದೆ. ಸಾರ್ವಜನಿಕರ ಈ ಕುರಿತು ಅಭಿಪ್ರಾಯ ತಿಳಿಸಲು ಫೆಬ್ರವರಿ 18 ಕೊನೆಯ ದಿನವಾಗಿದೆ. ಬಳಿಕ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುತ್ತದೆ. ಸ್ವೀಕಾರಾರ್ಹ ಸಲಹೆಗಳಿದ್ದರೆ ಕೊನೆಯ ಹಂತದ ಪರಿಷ್ಕರಣೆ ಬಳಿಕ ಮಸೂದೆ ಮಂಡನೆಯಾಗಲಿದೆ.

ಹೊಸ ಕಾಯ್ದೆಯಲ್ಲಿ ಮಕ್ಕಳ ಸೋಶಿಯಲ್ ಮೀಡಿಯಾ ಬಳಕೆ ಹಾಗೂ ನಿಯಂತ್ರಣಕ್ಕೆ ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಪ್ರಾಪ್ತ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಖಾತೆ ತೆರೆಯಲು, ನಿರ್ವಹಣೆ ಮಾಡಲು, ಬಳಕೆ ಮಾಡಲು ಪೋಷಕರ ಅನುಮತಿ ಕಡ್ಡಾಯವಾಗಿದೆ. ಪೋಷಕರ ಅನುಮತಿ ಪಡೆದು ಸೋಶಿಯಲ್ ಮೀಡಿಯಾ ಖಾತೆ ತೆರೆಯಬಹುದು, ಬಳಕೆ ಮಾಡಬಹುದು. ಆದರೆ ಸೋಶಿಯಲ್ ಮೀಡಿಯಾ ಬಳಕೆ, ಪ್ರೇರಣೆ ಪಡೆದು ನಿಯಮ ಉಲ್ಲಂಘಿಸಿದರೆ, ಪ್ರಚೋದನೆ ನೀಡಿದರೆ, ಇತರ ಕಾನೂನು ಸಮಸ್ಯೆಗಳಿಗೆ ಕಾರಣವಾದರೆ ಪೋಷಕರಿಗೂ ಸಮಸ್ಯೆ ಎದುರಾಗಲಿದೆ. ಹೀಗಾಗಿ ಪೋಷಕರು ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ.

ಪೋಷಕರ ಅನುಮತಿ ಇಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಖಾತೆ ತೆರೆದರೂ ಮಕ್ಕಳಿಗೆ ಹಾಗೂ ಪೋಷಕರಿ ಸಂಕಷ್ಟ ಎದುರಾಗಲಿದೆ. ಸೈಬರ್ ದಳ ಈ ಕುರಿತು ಹದ್ದಿನ ಕಣ್ಣಿಡಲಿದೆ. ಯಾರೇ ಅಪ್ರಾಪ್ತರ ಸೋಶಿಯಲ್ ಮೀಡಿಯಾ ಖಾತೆ ಅದಕ್ಕೆ ಅನುಮತಿ ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ. ಹಲವು ವರ್ಷಗಳ ಸೋಶಿಯಲ್ ಮೀಡಿಯಾದಲ್ಲಿ ಖಾತೆ ತೆರೆಯದಂತೆ ನಿರ್ಬಂಧ ಸೇರಿದಂತೆ ಹಲವು ರೀತಿಯಲ್ಲಿ ಶಿಕ್ಷೆ ನೀಡಲಾಗುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!