ಈ ರಾಶಿಗೆ ಇಂದು ಅಧಿಕ ಖರ್ಚು; ಸ್ನೇಹಿತರು, ಬಂಧುಗಳಿಂದ ಮೋಸ ಇರಲಿ ಎಚ್ಚರ

this sign
Spread the love

ಮೇಷ ರಾಶಿ:

ಮೇಷ ರಾಶಿಯವರಿಗೆ ಉತ್ತಮವಾದ ಭೋಜನ ತಿಂಡಿ-ತಿನಿಸುಗಳನ್ನು ಸವಿಯುವ ಯೋಗವಿದೆ. ಮೇಲಾಧಿಕಾರಿಗಳು, ಹಿರಿಯರು ನಿಮ್ಮನ್ನು ಹೊಗಳುತ್ತಾರೆ. ಮನಸ್ಸಿನಲ್ಲಿ ಯಾವುದೇ ರೀತಿಯ ಪೂರ್ವಾಗ್ರಹವನ್ನು ಇಟ್ಟುಕೊಳ್ಳಬೇಡಿ. ಇಂದು ಪ್ರಯಾಣ ಲಾಭದಾಯಕವಾಗಿದೆ.ಬಂಧುಗಳಿಂದ ಮೋಸ ಸಾದ್ಯತೆ. ಅನಗತ್ಯ ವಿಷಯಗಳಿಗೆ ಗಮನ ಕೊಡದಿರುವುದು ಒಳಿತು. ಕೆಲವು ಸವಾಲುಗಳನ್ನು ಎದುರಿಸಬೇಕಾದ ದಿನವಾಗಬಹುದು. ಇಷ್ಟ ದೇವತಾ ಪ್ರಾರ್ಥನೆ ಮಾಡಿ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಸಹೋದ್ಯೋಗಿಗಳು ಹಾಗೂ ಸ್ನೇಹಿತರೊಂದಿಗೆ ಜಗಳವಾಗಬಹುದು. ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥವಾಗಬಹುದು, ಅಧಿಕ ಖರ್ಚು ಆಗಾಬಹುದು. ಜಾಗ್ರತೆವಹಿಸಿ. ನಿಮ್ಮ ಸ್ವಭಾವ ಮನೆಯವರಿಗೆ ಆತಂಕ ತರಬಹುದು. ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶುಭವಿದೆ. ನಿಮ್ಮ ಕೆಲಸಗಳಲ್ಲಿ ಮಗ್ನರಾಗಬೇಕು. ಸಣ್ಣ ಪುಟ್ಟ ಮೈಗ್ರೇನ್, ತಲೆನೋವು ನಿಮಗೆ ಹಿಂಸೆ ಕೊಡಬಹುದು. ಪ್ರಯಾಣ ಮಾಡದಿರುವುದು ಒಳ್ಳೆಯದು, ನಿಮ್ಮ ಕಾರ್ಯದಲ್ಲಿ ಮಗ್ನರಾಗಿ. ಗಣಪತಿಯನ್ನು ಪ್ರಾರ್ಥನೆ ಮಾಡಿ.

ಮಿಥುನ ರಾಶಿ:

ವೃಷಭ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕೆಲವು ಕೆಲಸಗಳಾಗುವ ಸೂಚನೆಗಳಿವೆ. ವ್ಯಾಪಾರ, ವ್ಯವಹಾರ ಸಮಸ್ಯೆಗಳು ದೂರವಾಗಬಹುದು. ಮನೆಯಲ್ಲಿ, ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿ ಕಾಣಬಹುದು. ಮಧ್ಯಾಹ್ನದ ಒಳಗೆ ಆದಷ್ಟು ನಿಮ್ಮೆಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳಿತು. ನಿಮ್ಮ ಸ್ನಾಯು ಅಥವಾ ನರಗಳಲ್ಲಿ ತೊಂದರೆ ಕಾಣಬಹುದು. ವಿದ್ಯುತ್ ಉಪಕರಣ ಮಾರಾಟ ಮಾಡುವವರಿಗೆ ಲಾಭ ಕಾಣಬಹುದು. ಮೃತ್ಯುಂಜಯನನ್ನು ಪ್ರಾರ್ಥಿಸಿ.

ಕಟಕ ರಾಶಿ:

ವೃಷಭ ರಾಶಿಯವರಿಗೆ ವೃತ್ತಿ ಜೀವನದ ದೃಷ್ಟಿಯಿಂದ ತುಂಬಾ ಜಾಗರೂಕರರಾಗಿರಬೇಕು. ಕಲೆ ಮತ್ತು ಸಂಗೀತ ಕ್ಷೇತ್ರದವರಿಗೆ ಗೌರವ, ಪುರಸ್ಕಾರಗಳು ಸಿಗಬಹುದು. ಹೊಸ ಆದಾಯದ ಮೂಲಗಳು ಸಿಗುವ ಸಾಧ್ಯತೆಯಿದೆ. ಇಂದು ವೃತ್ತಿಯನ್ನು ಬಿಟ್ಟು ಬೇರೆ ವ್ಯವಹಾರದಲ್ಲಿ ಆದಾಯಗಳಿಸಬಹುದು. ಸಹೋದರರಿಗೆ ಅಪಘಾತವಾಗುವ ಸಾಧ್ಯತೆಗಳಿವೆ ಎಚ್ಚರಿಕೆಯಿಂದಿರಲು ಹೇಳಿ. ದುರ್ಗಾರಾಧನೆಯನ್ನು ಮಾಡಿ.

ತುಲಾ ರಾಶಿ:

ತುಲಾ ರಾಶಿಯವರಿಗೆ ಭಾವನೆಗಳ ಆಧಾರದ ಮೇಲೆ ಕಾರ್ಯಕ್ಷೇತ್ರಗಳಲ್ಲಿ ಯಾವುದೇ ತೀರ್ಮಾನ ಬೇಡ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಧಾರ್ಮಿಕ ಭಾವನೆಯು ನಿಮ್ಮ ದೊಡ್ಡ ಕಾರ್ಯಗಳಿಗೆ ಸಹಕಾರಿಯಾಗಬಹುದು. ಭೂಮಿ, ಆಸ್ತಿಗೆ ಸಂಬಂಧಿಸಿದ ಮಾತುಕತೆ ನಡೆಯಬಹುದು. ಒಡಹುಟ್ಟಿದವರೊಂದಿಗೆ ನಿಮ್ಮ ಬಾಂಧವ್ಯ ಚೆನ್ನಾಗಿರತ್ತೆ ಅದನ್ನ ಹಾಗೆ ಉಳಿಸಿಕೊಳ್ಳಿ. ನೆರೆಹೊರೆಯವರ ಜೊತೆ ಮಾನಸಿಕ ಸಮಾಧಾನ ಇರುವುದಿಲ್ಲ, ಜಗಳ ಬೇಡ. ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಸಮರ್ಪಿಸಿ.

ಮೀನ ರಾಶಿ:

ಮೀನರಾಶಿಯವರಿಗೆ ನಿಮ್ಮ ಸ್ವಾಭಿಮಾನದ ಬಗ್ಗೆ ಗೌರವವಿರಲಿ ಆದರೆ ಸ್ವಾಭಿಮಾನ ಅಹಂಕಾರವಾಗಬಹುದು. ಬೇರೆಯವರ ಸಲಹೆ ತೆಗೆದುಕೊಳ್ಳಿ ಆದರೆ ತೀರ್ಮಾನ ನಿಮ್ಮದಾಗಿರಬೇಕು. ಬೇರೆಯವರ ಪೂರ್ಣ ಅವಲಂಬನೆಯಿಂದ ನಿಮಗೆ ಹಿನ್ನಡೆಯಾಗಬಹುದು. ಸ್ನೇಹಿತರಿಂದ ಅಸಮಾಧನವಾಗಬಹುದು. ಸರ್ಕಾರದ ಕೆಲಸಗಳು ನಿಮ್ಮ ಸಂತೋಷವನ್ನುಂಟು ಮಾಡಬಹುದು. ತಾಯಿಯವರ ಆರೋಗ್ಯದಲ್ಲಿ ಏರುಪೇರಾಗಬಹುದು ಜಾಗ್ರತೆವಹಿಸಿ ಆರ್ಥಿಕ ಸಹಾಯದ ಅಗತ್ಯ ನಿಮಗೆ ಕಾಣುತ್ತದೆ. ಶ್ರೀನಿವಾಸನನ್ನು ಪ್ರಾರ್ಥಿಸಿ

Leave a Comment

Leave a Reply

Your email address will not be published. Required fields are marked *

error: Content is protected !!