ನಾಳೆ ಇಡೀ ಪ್ರಪಂಚದಲ್ಲೇ ಇಂಟರ್‌ನೆಟ್‌ ಇರೋದಿಲ್ವಾ?; ನಿಜವಾಗುತ್ತಾ ಸಿಂಪ್ಸನ್ಸ್ ಭವಿಷ್ಯ ?

no-internet
Spread the love

ನ್ಯೂಸ್ ಆ್ಯರೋ: ನಾಳೆ ಅಂದ್ರೆ ಜನವರಿ 16ರಂದು ಇಡೀ ಪ್ರಪಂಚದಲ್ಲಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳ್ಳುತ್ತಾ? ಯಾಕೆ ಈ ಪ್ರಶ್ನೆ ಅಂದ್ರೆ ಸಿಂಪ್ಸನ್ಸ್ ಕಾರ್ಟೂನ್‌‌ ಇದರ ಬಗ್ಗೆ ಭವಿಷ್ಯ ನುಡಿದಿದೆ. “ದೈತ್ಯ ಶಾರ್ಕ್‌ ಸಮುದ್ರದ ಮಧ್ಯದಲ್ಲಿ ಇಂಟರ್‌ನೆಟ್‌ ತಂತಿಯನ್ನು ಕತ್ತರಿಸುತ್ತೆ” ಅಂತ ಹೇಳಲಾಗಿದೆ. ಇದನ್ನು ಎಲ್ಲರೂ ನಂಬಿಕೊಂಡಿದ್ದಾರೆ. ಯಾಕಂದ್ರೆ ಈ ಸಿಂಪ್ಸನ್ಸ್ ಕಾರ್ಟೂನ್‌ನಲ್ಲಿ ತೋರಿಸಿದ್ದೆಲ್ಲವೂ ನಿಜವಾಗಿದೆ.

ಈ ಭಯಾನಕ ಮುನ್ಸೂಚನೆಯಿಂದ ಆನ್‌ಲೈನ್ ವಹಿವಾಟು, ಕ್ರೆಡಿಟ್ ಕಾರ್ಡ್, ಸೂಪರ್‌ಮಾರ್ಕೆಟ್ ಮಾರಾಟ ಎಲ್ಲವೂ ನಿಂತುಹೋಗುತ್ತಂತೆ. ಎಲ್ಲೆಡೆ ಅವ್ಯವಸ್ಥೆ ಇರುತ್ತದೆ. ಜನರು ಹೊರಹೋಗಿ ಜನರನ್ನು ಭೇಟಿಯಾಗುವಂತೆ, ಜನರು ಮೊದಲಿನಂತೆಯೇ ಬದುಕಲು ಪ್ರಾರಂಭಿಸುತ್ತಾರೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂತರ್ಜಾಲದ ಮೊದಲ ಯುಗದಂತೆ ಇರುತ್ತದೆ ಎಂದು ಈ ಕಾರ್ಟೂನ್‌ನಲ್ಲಿ ತೋರಿಸಿದೆ.

ಇತ್ತ ನೋಡುವುದಾದರೇ ಡೊನಾಲ್ಡ್‌ ಟ್ರಂಪ್‌ ಜನವರಿ 20ರಂದು ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ನಾಳೆ ಕಾರ್ಟೂನ್‌ನಲ್ಲಿ ಅಧ್ಯಕ್ಷರು ಪ್ರಮಾಣವಚನ ಸ್ವೀಕರಿಸುವಾಗ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳ್ಳಲಿದೆ ಅಂತ ತೋರಿಸಲಾಗಿದೆ. ಹೀಗಾಗಿ ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಇದೇ ಕಾರ್ಟೂನ್‌ನಲ್ಲಿ ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿನ ಬಗ್ಗೆ ತೋರಿಸಿತ್ತು. ಅದರಂತೆ ಕೂಡ ನಿಜವಾಗಿಯೂ ನಡೆದಿದೆ.

ಈ ಭವಿಷ್ಯದ ಕುರಿತು ಮತ್ತೊಂದು ವಿಚಾರವೆಂದರೇ, 2015ರಲ್ಲಿಯೂ ಡೊನಾಲ್ಡ್ ಟ್ರಂಪ್ ತಮ್ಮ ಕಾರ್ಟೂನ್ ಮೂಲಕ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಸಿಂಪ್ಸನ್ಸ್ ಭವಿಷ್ಯ ನುಡಿದಿದ್ದರು, ಅದು ನಿಜವೆಂದು ಸಾಬೀತಾಯಿತು. ಮಾತ್ರವಲ್ಲದೆ ಕೊರೋನಾ ಬಗ್ಗೆಯೂ ಇದೇ ಸಿಂಪ್ಸನ್ಸ್‌ ಕಾರ್ಟೂನ್ ಭವಿಷ್ಯ ನುಡಿದಿತ್ತು. ಹಾಗಾಗಿ ಈ ಬಾರಿ ಸಿಂಪ್ಸನ್ಸ್ ಭವಿಷ್ಯ ನಿಜವಾಗುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.

Leave a Comment

Leave a Reply

Your email address will not be published. Required fields are marked *