ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ: ಪೂಜೆಯ ವಿಧಿ-ವಿಧಾನ ಇಲ್ಲಿದೆ
ಶಾರದೀಯ ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯ ಆರಾಧನೆಯನ್ನು ಮಾಡಲಾಗುತ್ತದೆ. ಚಂದ್ರಘಂಟಾ ದೇವಿಯು ದುರ್ಗಾ ದೇವಿಯ ಮೂರನೇ ರೂಪವಾಗಿದ್ದಾಳೆ. ಚಂದ್ರಘಂಟಾ ಎನ್ನುವ ಪದ ವಿಶೇಷ ಅರ್ಥವನ್ನು ಹೊಂದಿದ್ದು, ಚಂದ್ರ ಎಂದರೆ ಚಂದ್ರ ಮತ್ತು ಘಂಟಾ ಎಂದರೆ ಗಂಟೆಯಂತೆ. ಈ ತಾಯಿಯ ಹಣೆಯ ಮೇಲೆ ಚಂದ್ರನು ಬೆಳಗುವುದರಿಂದ ಆಕೆಗೆ ಚಂದ್ರಘಂಟಾ ಎನ್ನುವ ಹೆಸರು ಬಂದಿದೆ. ದೇವಿಯ ಈ ರೂಪವು ಭಕ್ತರಲ್ಲಿ ಧೈರ್ಯ ಮತ್ತು ಶೌರ್ಯವನ್ನು ತುಂಬುತ್ತದೆ.
ಚಂದ್ರಘಂಟಾ ದೇವಿಯು ತಾಯಿ ಪಾರ್ವತಿಯ ಉಗ್ರ ರೂಪವಾಗಿದ್ದಾಳೆ, ಆದರೆ ಆಕೆಯ ಮನಸ್ಸು ಮಗುವಿಗಿಂತಲೂ ಮೃದುವಾಗಿದೆ. ಭಕ್ತರ ದುಃಖ ದೂರ ಮಾಡಲು ತಾಯಿ ಕೈಯಲ್ಲಿ ತ್ರಿಶೂಲ, ಖಡ್ಗ, ಗದೆ ಹಿಡಿದಿದ್ದಾಳೆ. ಚಂದ್ರಘಂಟಾ ದೇವಿಯನ್ನು ಪೂಜಿಸುವುದರಿಂದ ಮತ್ತು ಮಂತ್ರಗಳನ್ನು ಪಠಿಸುವುದರಿಂದ ಭಕ್ತರು ಎಲ್ಲಾ ತೊಂದರೆಗಳಿಂದ ಮುಕ್ತರಾಗುತ್ತಾರೆ.
ಈ ದಿನ ಪೂಜೆ ಮಾಡುವ ಸಮಯ ಹೀಗಿದೆ:
ಈ ದಿನ ತೃತೀಯಾ ತಿಥಿ, ವಿಷ್ಕಂಭ, ರವಿ, ಸರ್ವಾರ್ಥ ಸಿದ್ಧಿ ಯೋಗ ಸಹ ಈ ದಿನ ರೂಪುಗೊಳ್ಳಲಿದೆ. ಈ ದಿನ ಪೂಜೆ ಮಾಡುವ ಸಮಯ ಹೀಗಿದೆ. 09.13 am – 10.41 am.
ಪೂಜೆಯ ಮಹತ್ವ:
ಚಂದ್ರಘಂಟಾ ಮಾತೆಯ ಆಶೀರ್ವಾದದಿಂದ ವೈವಾಹಿಕ ಜೀವನವು ಸಂತೋಷದಿಂದ ತುಂಬಿರುತ್ತದೆ ಮತ್ತು ಸಮಸ್ಯೆಗಳು ದೂರವಾಗುತ್ತವೆ. ಯಾವುದೇ ಕಾರಣದಿಂದ ಮದುವೆ ವಿಳಂಬವಾಗುತ್ತಿರುವವರು ಚಂದ್ರಘಂಟ ಮಾತೆಯನ್ನು ಪೂಜಿಸಬೇಕು. ಶೀಘ್ರದಲ್ಲೇ ಮದುವೆಯ ಪ್ರಸ್ತಾಪ ಬರುತ್ತದೆ ಹಾಗೂ ಸಂಬಂಧ ಒಪ್ಪಿಗೆಯಾಗುತ್ತದೆ. ಮಾ ಚಂದ್ರಘಂಟನ ಕೃಪೆಯಿಂದ ಪಾಪಗಳು ನಾಶವಾಗುತ್ತವೆ. ಧೈರ್ಯ ಮತ್ತು ಹೆಚ್ಚಾಗಬಹುದು. ಶತ್ರುಗಳನ್ನು ಸೋಲಿಸಲು ಸಾಧ್ಯವಾಗುತ್ತದೆ. ಗೌರವ, ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲು ಮಾ ಚಂದ್ರಘಂಟನನ್ನು ಆರಾಧಿಸಿ. ಈ ದೇವಿಯು ಮೋಕ್ಷವನ್ನೂ ನೀಡುತ್ತಾಳೆ ಎನ್ನುವ ನಂಬಿಕೆ ಇದೆ.
ಮಂತ್ರಗಳು:
ಬೀಜ ಮಂತ್ರ: ಐಂ ಶ್ರೀಂ ಶಕ್ತಾಯೈ ನಮಃ
ಪೂಜಾ ಮಂತ್ರ: ಓಂ ದೇವಿ ಚಂದ್ರಘಂಟಾ ನಮಃ
ಸ್ತುತಿ ಮಂತ್ರ: ಯಾ ದೇವಿ ಸರ್ವಭೂತೇಷು ಮಾಂ ಚಂದ್ರಘಂಟಾ ರೂಪೇಣ ಸಂಸ್ಥಿತಾ. ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯೈ ನಮೋ ನಮಃ॥
ಹೇಗೆ ಪೂಜಿಸಬೇಕು:
ಬೆಳಗ್ಗೆ ಸ್ನಾನದ ನಂತರ ಮಾ ಚಂದ್ರಘಂಟ ದೇವಿಯನ್ನ ಪೂಜಿಸಿ. ಚಂದ್ರಘಂಟ ದೇವಿಯ ಮೂರ್ತಿಯನ್ನು ತಂದು ಇಡಬೇಕು. ನಂತರ ಮಣ್ಣಿನಿಂದ ಮಾಡಿದ ಪ್ಯಾನ್ ಅನ್ನು ವಿಗ್ರಹದ ಪಕ್ಕದಲ್ಲಿ ಇಡಬೇಕು. ನಂತರ, ಬಾಣಲೆಯ ಮೇಲೆ ಅಕ್ಕಿಯ ಜೊತೆಗೆ ನೀರನ್ನು ಹಾಕಬೇಕು. ನಿಮಗೆ ಮೂರ್ತಿ ಇಡುವ ಅಭ್ಯಾಸವಿಲ್ಲ ಎಂದರೆ ನೀವು ಬರೀ ಕಲಶವನ್ನ ಸಹ ಸ್ಥಾಪನೆ ಮಾಡಬಹುದು. ಕಲಶ ಸ್ಥಾಪಿಸಿ ನೀವು ಪೂಜೆ ಮಾಡಿದರೆ ಸಹ ಒಳ್ಳೆಯದಾಗುತ್ತದೆ. ಮೊದಲು ದೇವರಿಗೆ ಅಕ್ಷತೆ, ಸಿಂಧೂರ, ಕುಂಕುಮ, ಹೂವು, ಮಾಲೆ, ಧೂಪ, ದೀಪ, ನೈವೇದ್ಯ, ಹಣ್ಣು ಇತ್ಯಾದಿಗಳನ್ನು ಅರ್ಪಿಸಿ. ಈ ಸಮಯದಲ್ಲಿ, ಪೂಜಾ ಮಂತ್ರವನ್ನು ತಪ್ಪದೇ ಪಠಿಸಿ. ಅದರ ನಂತರ, ಮಾ ಚಂದ್ರಘಂಟ ದೇವಿಗೆ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸಿ. ಮಾ ಚಂದ್ರಘಂಟಾ ದೇವಿಯನ್ನ ಪೂಜಿಸುವುದರಿಂದ ಶುಕ್ರಗ್ರಹದ ದುಷ್ಪರಿಣಾಮಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ. ನೀವು ಮೂರ್ತಿಯನ್ನ ಇಟ್ಟಿದ್ದರೆ ಅಕ್ಷತೆ, ನಾಣ್ಯಗಳು,ಗರಿಕೆ, ಗಂಗಾ ಜಲ, ಸುಪಾರಿ ಮತ್ತು ನಾಣ್ಯಗಳನ್ನು ತುಂಬಿದ ಕಲಶವನ್ನು ಇಡಿ, ಇದರ ಜೊತೆಗೆ ತಪ್ಪದೇ ದೇವಿಗೆ ಪಾಯಸ ಅಥವಾ ಖೀರ್ ಮಾಡಿ ನೈವೇದ್ಯ ಮಾಡಬೇಕು.
ಚಂದ್ರಘಂಟಾ ದೇವಿಯ ಅವತಾರದ ಕಥೆ:
ರಾಕ್ಷಸರ ಭಯವು ಹೆಚ್ಚಾದಾಗ, ದುರ್ಗಾ ದೇವಿಯು ಚಂದ್ರಘಂಟಾ ರೂಪವನ್ನು ಪಡೆದುಕೊಂಡು ಸಂಹಾರ ಮಾಡಿದ್ದಳು ಎನ್ನುವ ನಂಬಿಕೆ ಇದೆ. ಮಹಿಷಾಸುರನೆಂಬ ರಾಕ್ಷಸನು ಇಂದ್ರ ದೇವನ ಸಿಂಹಾಸನವನ್ನು ಪಡೆಯಲು ಪ್ರಯತ್ನ ಮಾಡಿದಾಗ ಈ ಚಂದ್ರಘಂಟಾ ದೇವಿ ಅವತಾರ ಎತ್ತಿದ್ದು ಎನ್ನಲಾಗುತ್ತದೆ. ಹೌದು. . ಪ್ರಾಚೀನ ಕಾಲದಲ್ಲಿ ಮಹಿಷಾಸುರ ಎಂಬ ರಾಕ್ಷಸನಿದ್ದನು. ಅವನು ದೇವತೆಗಳಿಗೆ ತೊಂದರೆ ಕೊಡುತ್ತಿದ್ದನು. ನಂತರ ಎಲ್ಲಾ ದೇವರುಗಳು ತ್ರಿಮೂರ್ತಿಗಳ ಬಳಿಗೆ ಹೋದರು. ನಂತರ ತ್ರಿಮೂರ್ತಿಗಳು ತಮ್ಮ ಶಕ್ತಿಯಿಂದ ದೇವತೆಯನ್ನು ರೂಪಿಸಿದರು. ಈ ದೇವಿಯನ್ನು ದುರ್ಗಾ ಎಂದು ಕರೆಯಲಾಯಿತು. ದೇವಿಯ ತಲೆಯ ಮೇಲೆ ಚಂದ್ರನು ಕುಳಿತಿದ್ದರಿಂದ ಅವಳ ಹೆಸರು ಚಂದ್ರಘಂಟಾ ಎಂದು ಬಂತು. ಈ ದೇವಿಯು ಮಹಿಷಾಸುರನೊಂದಿಗೆ ಹೋರಾಡಿ ಅವನನ್ನು ಕೊಂದಳು.
ಚಂದ್ರಘಂಟಾ ಹೇಗಿದ್ದಾಳೆ:
ಚಂದ್ರಘಂಟಾ ದೇವಿ ಪಾರ್ವತಿ ದೇವಿಯ ಮೂರನೇ ಅವತಾರ. ಈಕೆಗೆ ಹತ್ತು ಕೈಗಳಿವೆ. ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ. ಕಠಿಣ ತಪ್ಪಿಸಿನ ಮೂಲಕ ಶಿವನನ್ನು ಮೆಚ್ಚಿಸಿ ಮದುವೆಯಾಗಲು ತೀರ್ಮಾನಿಸುತ್ತಾಳೆ ಹಿಮವಂತ ಹಾಗೂ ಮೈನಾ ದೇವಿಯ ಮಗಳು. ಮದುವೆ ಮೆರವಣಿಗೆಯಲ್ಲಿ ಶಿವನು ಸ್ಮಶಾನವಾಸಿಯಾಗಿ ಇರುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವು, ಗಂಟಿನಂತಿರುವ ಜಟೆ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳು ಇರುತ್ತಾರೆ. ಇದನ್ನು ನೋಡಿ ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ಇದನ್ನು ಕಂಡು ಶಿವನಿಗೆ ಮುಜುಗರವಾಗದಿರಲಿ ಎಂದು ಭಯಾನಕ ರೂಪವಾಗಿ ಚಂಧ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ. ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತುಗಳಲ್ಲಿ ಒಂದೊಂದು ಆಯುಧಗಳನ್ನು ಹಿಡಿದಿರುತ್ತಾಳೆ. ಒಂದರಲ್ಲಿ ತ್ರಿಶೂಲ, ಗದೆ, ಬಿಲ್ಲು ಬಾಣ, ಖಡ್ಗ, ಕಮಲ, ಘಂಟೆ, ಕಂಡಲ ಹಾಗೂ ಅಭಯ ಮುದ್ರೆಯಿಂದ ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ಆಗ ಶಿವನಿಗೆ ನಿಜ ರೂಪ ತಾಳಲು ಚಂದ್ರಘಂಟೆ ಪ್ರೇರೇಪಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ತನ್ನ ನಿಜರೂಪ ತಾಳುತ್ತಾನೆ. ಇದರಿಂದ ಮದುವೆಯಲ್ಲಿದ್ದವರು ಅಚ್ಚರಿಗೊಳ್ಳುತ್ತಾರೆ. ಬಳಿಕ ಇವರಿಬ್ಬರ ಮದುವೆ ನಡೆಯುತ್ತದೆ.
Leave a Comment