ನವರಾತ್ರಿ 9ನೇ ದಿನ ಸಿದ್ಧಿಧಾತ್ರಿ ದೇವಿ: ಶುಭ ಮುಹೂರ್ತ, ಪೂಜೆ ವಿಧಾನ
ದುರ್ಗೆಯ ಒಂಬತ್ತನೇ ರೂಪವಾದ ಮಾತೆ ಸಿದ್ಧಿದಾತ್ರಿಯನ್ನು ನವರಾತ್ರಿಯ ಒಂಬತ್ತನೇ ದಿನದಂದು ಅಂದರೆ ಮಹಾ ನವಮಿಯ ದಿನದಂದು ಪೂಜಿಸಲಾಗುತ್ತದೆ. ದೇವಿಯ ಹೆಸರಿನ ಅರ್ಥ ಎಂದರೆ ಎಲ್ಲಾ ರೀತಿಯ ಸಾಧನೆಗಳನ್ನು ಮತ್ತು ಮೋಕ್ಷವನ್ನು ನೀಡುವ ತಾಯಿ ಎಂದರ್ಥ. ಸಾಮಾನ್ಯವಾಗಿ ಸಿದ್ಧಿದಾತ್ರಿ ದೇವಿಯನ್ನು ದೇವತೆಗಳು, ದೇವತಾ, ಯಕ್ಷ, ಗಂಧರ್ವ, ಕಿನ್ನರ, ರಾಕ್ಷಸ, ಋಷಿ, ಮುನಿ, ಸಾಧಕ ಮತ್ತು ಮನೆಗಳು ಮತ್ತು ಆಶ್ರಮಗಳಲ್ಲಿ ವಾಸಿಸುವ ಜನರು ಸಹ ಪೂಜಿಸುತ್ತಾರೆ.
ದೇವಿಯ ಅವತಾರ:
ತಾಯಿ ಸಿದ್ಧಿಧಾತ್ರಿ ಕೆಂಪು ಸೀರೆಯುಟ್ಟು ಸಂಪೂರ್ಣವಾಗಿ ಅರಳಿದ ಕಮಲದ ಹೂವಿನ ಮೇಲೆ ಕುಳಿತಿರುತ್ತಾಳೆ. ಅವಳು ಆಯುಧದೊಂದಿಗೆ ನಾಲ್ಕು ತೋಳುಗಳನ್ನು ಹೊಂದಿದ್ದಾಳೆ. ಅವಳ ಮೇಲಿನ ಬಲಗೈಯ ತೋರು ಬೆರಳಿನಲ್ಲಿ, ಚಕ್ರ ಹಿಡಿದಿದ್ದು, ಮೇಲಿನ ಎಡಗೈಯಲ್ಲಿ, ಅವಳು ಶಂಖವನ್ನು ಹಿಡಿದಿದ್ದಾಳೆ. ಅವಳು ತನ್ನ ಕೆಳಗಿನ ಬಲಗೈಯಲ್ಲಿ ಗದೆಯನ್ನು ಹಿಡಿದಿದ್ದು, ಮತ್ತು ಅವಳ ಕೆಳಗಿನ ಎಡಗೈಯಲ್ಲಿ ಕಮಲದ ಹೂವು ಇದೆ. ಸಿದ್ಧಿದಾತ್ರಿಯ ಆಶೀರ್ವಾದದಿಂದ, ಮಹಾದೇವನ ಅರ್ಧದಷ್ಟು ದೇಹವು ದೇವಿಯ ದೇಹವಾಗಿ ಮಾರ್ಪಟ್ಟಿತು ಮತ್ತು ನಂತರ ಈ ರೂಪದಲ್ಲಿ ಅವನನ್ನು ಅರ್ಧನಾರೀಶ್ವರ ಎಂದು ಕರೆಯಲಾಯಿತು ಎನ್ನಲಾಗುತ್ತದೆ. ಸಿದ್ಧಿದಾತ್ರಿ ಮಾತೆಯನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
ಮಹಾನವಮಿ 2024 ಮುಹೂರ್ತ:
ಈ ವರ್ಷ ಮಹಾನವಮಿಯನ್ನು 2024 ರ ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ. ನವಮಿ ತಿಥಿಯು ಅಕ್ಟೋಬರ್ 11 ರಂದು ಮಧ್ಯಾಹ್ನ 12:06 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 12 ರಂದು ರಾತ್ರಿ 10:58 ಕ್ಕೆ ಕೊನೆಗೊಳ್ಳುತ್ತದೆ.
- ಸಾಮಾನ್ಯ ಮುಹೂರ್ತ: ಮುಂಜಾನೆ 06:20 ರಿಂದ 07:47
- ಲಾಭ ಮುಹೂರ್ತ: ಬೆಳಗ್ಗೆ 07:47 ರಿಂದ 09:14
- ಅಮೃತ ಕಾಲ: ಬೆಳಗ್ಗೆ 09:14 ರಿಂದ 10:41
- ಶುಭ ಮುಹೂರ್ತ: ಮಧ್ಯಾಹ್ನ 12:08 ರಿಂದ 01:34
ದೇವಿಯ ಪೂಜಾ ವಿಧಾನ:
ಈ ದಿನ ಬೆಳಗ್ಗೆ ಬೇಕ ಎದ್ದು ಸ್ನಾನ ಮಾಡಿ ದೇವರ ಮನೆಯನ್ನ ಅಲಂಕರಿಸಿ. ಪೂಜೆಯನ್ನು ಪ್ರಾರಂಭಿಸುವ ಮೊದಲು, ದೇವಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಬಂಧಿಸಿದ ಮಂತ್ರಗಳನ್ನು ಪಠಿಸಿ. ಹಣೆಯ ಮೇಲೆ ತಿಲಕವನ್ನು ಹಚ್ಚಿ, ಮತ್ತು ಕಲಶ ಪೂಜೆಯ ನಂತರ ನಿಮ್ಮ ಅಂಗೈಯಿಂದ ನೀರನ್ನು ಕುಡಿಯುವ ಮೂಲಕ ಆಚಮನ ವಿಧಿ ಮಾಡಿ. ನಿಮ್ಮ ಅಂಗೈಯಲ್ಲಿ ನೀರನ್ನು ತೆಗೆದುಕೊಂಡು ದೇವಿಯನ್ನು ಪ್ರಾರ್ಥಿಸುವ ಮೂಲಕ ಸಂಕಲ್ಪವನ್ನು ಮಾಡಿ. ಹಣ್ಣುಗಳು, ಆಹಾರ ಪದಾರ್ಥಗಳು, ಸಿಹಿತಿಂಡಿಗಳು ಮತ್ತು 5 ವಿಧದ ನೈವೇದ್ಯಗಳನ್ನ ಈ ದಿನ ಮಾಡಬೇಕು. ನಂತರ ಆರತಿ ಮಾಡಬೇಕು.
ಸಿದ್ಧಿಧಾತ್ರಿ ದೇವಿ ಪೂಜೆ ವೇಳೆ ಪಠಿಸಬೇಕಾದ ಮಂತ್ರ:
ಸಿದ್ಧಗಾನ ಧರ್ವೈಕ್ಷದ್ಯಾಯಿರಾಸುರಮರಿಪಿ, ಸೇವ್ಯಮಾನಾ
ಸದಾ ಭೂಯಾತ್ ಸಿದ್ಧಿದಾಯಿನೀ
ಓಂ ದೇವಿ ಸಿದ್ಧಿಧಾತ್ರಿಯೈ ನಮಃ
Leave a Comment