ಇಂದು ನವರಾತ್ರಿ ಎರಡನೇ ದಿನ; ಬ್ರಹ್ಮಚಾರಿಣಿ ದೇವಿ ಆರಾಧಿಸುವ ವಿಧಾನ ಹೀಗಿದೆ

Maa Brahmacharini
Spread the love

ನ್ಯೂಸ್ ಆ್ಯರೋ: ನವರಾತ್ರಿಯಲ್ಲಿ ದುರ್ಗಾ ದೇವಿಯ ಆರಾಧನೆಯಲ್ಲಿ ಒಂಬತ್ತು ಅವತಾರಗಳು ಬಹಳ ಮಹತ್ವದ ಪಾತ್ರವನ್ನು ವಹಿಸಿವೆ. ಒಂದೊಂದು ದಿನವನ್ನೂ ಒಂದೊಂದು ದೇವಿಯ ಅವತಾರಕ್ಕೆ ಮೀಸಲಿಡಲಾಗಿದೆ. ನವರಾತ್ರಿ ಹಬ್ಬದ ಎರಡನೇ ದಿನ ಬ್ರಹ್ಮಚಾರಿಣಿ ದೇವಿಗೆ ಮೀಸಲಿಡಲಾಗಿದೆ.

ಬಹಳ ಸಾತ್ವಿಕ ಮತ್ತು ಸುಂದರ ರೂಪ ಹೊಂದಿರುವ ಈ ತಾಯಿಯನ್ನ ಪೂರ್ಣ ಜ್ಯೋತಿರ್ಮಯ ಸ್ವರೂಪಿ ತಾಯಿ ಎನ್ನಲಾಗುತ್ತದೆ. ಮಂಗಳ ಗ್ರಹ ಆಳುವ ಬ್ರಹ್ಮಚಾರಿಣಿ ದೇವಿಯು ಅದೃಷ್ಟವನ್ನು ಒದಗಿಸುವವಳು ಎನ್ನುವ ನಂಬಿಕೆ ಇದೆ. ಈ ಅವತಾರದಲ್ಲಿ ತಾಯಿಯು ಬಲಗೈಯಲ್ಲಿ ಜಪ ಮಾಲೆ ಮತ್ತು ಎಡಗೈಯಲ್ಲಿ ಕಮಂಡಲವನ್ನು ಹಿಡಿದಿದ್ದು, ಆಕೆ ಬರಿಗಾಲಿನಲ್ಲಿ ನಡೆಯುತ್ತಾಳೆ ಎಂದು ರೂಪವನ್ನ ವರ್ಣಿಸಲಾಗಿದೆ. ಈ ದೇವಿಯನ್ನ ಪೂಜಿಸುವುದು ಹೇಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಬ್ರಹ್ಮಚಾರಿಣಿ ದೇವಿಯ ಮಹತ್ವ:

ತಪಸ್ಸು, ತ್ಯಾಗ ಮತ್ತು ಅದೃಷ್ಟವನ್ನು ತರುವ ಮಾ ದುರ್ಗೆಯ ಅವತಾರವಾದ ಬ್ರಹ್ಮಚಾರಿಣಿಯನ್ನು ಪೂಜಿಸಲು ಈ ನವರಾತ್ರಿ ಎರಡನೇ ದಿನವನ್ನು ಮೀಸಲಿಡಲಾಗಿದೆ. ಈ ದಿನ ಆಕೆಯನ್ನ ಆರಾಧನೆ ಮಾಡುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ. ಅಂದುಕೊಂಡ ಕೆಲಸಗಳನ್ನ ಸಾಧಿಸಬಹುದು. ಇದರ ಜೊತೆಗೆ ಈ ದಿನ ಶಿವನ ಪೂಜೆ ಸಹ ಮಾಡಲಾಗುತ್ತದೆ.

ಬ್ರಹ್ಮಚಾರಿಣಿಯ ಕಥೆಯನ್ನ ನೋಡುವುದಾದರೆ ಅರ್ಥ ಪವಿತ್ರ ಧಾರ್ಮಿಕ ಜ್ಞಾನವನ್ನು ಹೊಂದಿರುವ ಮಹಿಳೆ ಎಂಬ ಅರ್ಥ ಇದೆ. ಮುಖ್ಯವಾಗಿ ಪುರಾಣಗಳ ಪ್ರಕಾರ, ಶಿವನನ್ನು ಪಡೆಯಲು ಬ್ರಹ್ಮಚಾರಿಣಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡ್ತಾಳೆ ಎನ್ನುವ ಕಥೆ ಇದೆ. ಮುಖ್ಯವಾಗಿ ಈ ತಪಸ್ಸಿನ ನಂತರ, ಶಿವನು ಅವಳನ್ನು ಸ್ವಾಧಿಷ್ಠಾನ ಚಕ್ರದಲ್ಲಿ ಮದುವೆಯಾದನು ಎನ್ನಲಾಗುತ್ತದೆ. ಈ ಬ್ರಹ್ಮಚಾರಿಣಿ ದೇವಿಯು ಮಂಗಳ ಗ್ರಹವನ್ನ ನಿಯಂತ್ರಿಸುತ್ತಾಳೆ ಎಂಬ ನಂಬಿಕೆ ಇದೆ. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಆಕೆ ಕೇವಲ ಹೂವು, ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು, ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸಿದಳು. ಆಕೆಯ ಕಠಿಣ ತಪಸ್ಸಿನಿಂದ ಶಿವನು ಆಕೆಗೆ ಒಲಿಯುತ್ತಾನೆ.

​ನವರಾತ್ರಿ 2024 ರ ಎರಡನೇ ದಿನ ಬ್ರಹ್ಮಚಾರಿಣಿ ಪೂಜೆ ವಿಧಾನ​

ಅಕ್ಟೋಬರ್ 4 ರಂದು, ವೈಧೃತಿ ಯೋಗವು ಇಡೀ ದಿನ ಮತ್ತು ರಾತ್ರಿಯಲ್ಲಿ ಶನಿವಾರ ಬೆಳಿಗ್ಗೆ 5.21 ರವರೆಗೆ ಇರುತ್ತದೆ. ಅಲ್ಲದೆ, ಚಿತ್ರ ನಕ್ಷತ್ರವು ಶನಿವಾರ ಸಂಜೆ 6:38 ರವರೆಗೆ ಇರುತ್ತದೆ. ಹಾಗಾಗಿ ಶುಕ್ರವಾರ 10:39 ರಿಂದ 12:08 ರವರೆಗೆ ಬಿಟ್ಟು ಉಳಿದ ಸಮಯದಲ್ಲಿ ಪೂಜೆ ಮಾಡಬಹುದು. ಇನ್ನು ಸೂರ್ಯೋದಯದ ನಂತರ ಹಾಗೂ ಸೂರ್ಯಸ್ತದ ಒಳಗೆ ಪೂಜೆ ಮಾಡಬೇಕು. ಅದರ ಪ್ರಕಾರ ಈ ದಿನ ಸೂರ್ಯೋದಯ-ಸೂರ್ಯಾಸ್ತ ಸಮಯ ಸೂರ್ಯೋದಯ – ಬೆಳಗ್ಗೆ 6:15, ಸೂರ್ಯಾಸ್ತ- ಸಂಜೆ 6:03 ಇರಲಿದೆ.

ಪೂಜೆ ಮಾಡುವಾಗ ಪಠಣೆ ಮಾಡುವಾಗ ಪಠಿಸಬೇಕಾದ ಮಂತ್ರ

ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ||
ದಧಾನ ಕರ ಪದ್ಮಾಭ್ಯಾಮಕ್ಷಮಾಲಾ ಕಮಂಡಲು |
ದೇವಿ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||
ಯಾ ದೇವೀ ಸರ್ವಭೂತೇಷು ಮಾ ಬ್ರಹ್ಮಚಾರಿಣೀ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

Leave a Comment

Leave a Reply

Your email address will not be published. Required fields are marked *

error: Content is protected !!