
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸುಪ್ರೀಂ ಕೋರ್ಟ್ – ವಾದ ಮಂಡಿಸಿದ ವಾಕ್- ಶ್ರವಣ ದೋಷವುಳ್ಳ ವಕೀಲೆ, ವ್ಯಾಪಕ ಮೆಚ್ಚುಗೆ
- ರಾಷ್ಟ್ರೀಯ ಸುದ್ದಿ
- September 27, 2023
- No Comment
- 44
ನ್ಯೂಸ್ ಆ್ಯರೋ : ದೇಶದ ಉನ್ನತ ನ್ಯಾಯಾಲಯವು ಒಂದು ಅತ್ಯದ್ಭುತ ಕ್ಷಣಕ್ಕೆ ಸಾಕ್ಷಿಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನಲ್ಲಿ ವಾಕ್- ಶ್ರವಣ ದೋಷವುಳ್ಳ ವಕೀಲೆಯೊಬ್ಬರು ವಾದ ಮಂಡಿಸಿರುವುದಕ್ಕೆ ಅನೇಕ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರ್ಚುವಲ್ ಮೂಲಕ ಅನೇಕ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರು ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ವಾಕ್ ಶ್ರವಣ ದೋಷವುಳ್ಳ ನ್ಯಾಯವಾದಿ ಸಾರಾ ಸನ್ನಿ ಅವರು ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ವಾದ ಮಂಡಿಸಿದರು. ಇವರು ಮಾಡುತ್ತಿದ್ದ ಸಂಜ್ಞೆಗಳನ್ನು ವ್ಯಾಖ್ಯಾನಕಾರ ಸೌರಭ್ ರಾಯ್ ಚೌಧರಿ ಕೋರ್ಟ್ ಗೆ ಅರ್ಥವಾಗುವಂತೆ ವಿವರಿಸಿದ್ದಾರೆ.
ವರ್ಚುವಲ್ ವಿಚಾರಣೆಯ ತಾಂತ್ರಿಕ ತಂಡವು ಸಾರಾ ಅವರಿಗೆ ವಿಚಾರಣೆಯ ಆರಂಭದಲ್ಲಿ ಸ್ಕ್ರೀನ್ ಮೇಲೆ ಬರಲು ಅನುಮತಿ ನೀಡಿರಲಿಲ್ಲ. ವ್ಯಾಖ್ಯಾನಕಾರ ಮಾತ್ರ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿದ್ದರು. ತೆರೆಯ ಹಿಂದೆ ನಿಂತು ಸಾರಾ ಅವರು ಸಂಜ್ಞೆಗಳನ್ನು ನೀಡುತ್ತಿದ್ದು, ಸೌರಭ್ ಅದನ್ನು ವಿವರಿಸುತ್ತಿದ್ದರು.
ಸಮಾನ ನ್ಯಾಯದ ಪ್ರತಿಪಾದಕರಾಗಿರುವ ನ್ಯಾ। ಚಂದ್ರಚೂಡ್ ಅವರು ಇದನ್ನು ಗಮನಿಸಿ ವಕೀಲೆ ಸಾರಾ ಅವರು ಸ್ಕ್ರೀನ್ ಮೇಲೆ ಬರುವಂತೆ ಆದೇಶಿಸಿದರು. ಬಳಿಕ ಸಾರಾ ಅವರು ಸ್ಕ್ರೀನ್‌ನಲ್ಲಿ ಸಂಜ್ಞೆಗಳ ಮೂಲಕ ವಾದ ಮಂಡಿಸಿದರು. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.