ನೊಬೆಲ್ ಪುರಸ್ಕೃತ ಯೂನುಸ್ ಕೈಗೆ ಕೆಂಡದಂತಿರುವ ಬಾಂಗ್ಲಾದೇಶದ ಚುಕ್ಕಾಣಿ – ಹಿಂದೂಗಳ ಮಾರಣಹೋಮಕ್ಕೆ ಸಾಕ್ಷಿಯಾದ ಢಾಕಾ..!
ನ್ಯೂಸ್ ಆ್ಯರೋ : ಬಾಂಗ್ಲಾದೇಶದಲ್ಲಿ ಉಂಟಾದ ಕ್ಷಿಪ್ರ ಕ್ರಾಂತಿಯಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶವನ್ನು ತೊರೆದು ಪರಾರಿಯಾಗಿರುವ ನಂತರ, ದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರನ್ನು ನೇಮಕ ಮಾಡಲಾಗಿದೆ.
ಬಾಂಗ್ಲಾದೇಶದ ವಿದ್ಯಾರ್ಥಿ ಮುಖಂಡರು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರಿಗೆ ಉಸ್ತುವಾರಿ ಸರ್ಕಾರದ ನೇತೃತ್ವ ವಹಿಸುವಂತೆ ಕರೆ ನೀಡಿದರು. ಇದಕ್ಕೂ ಮುನ್ನ ದೇಶದ ಆಡಳಿತವನ್ನು ಸೈನ್ಯ ಸ್ವಾಧೀನಪಡಿಸಿಕೊಂಡಿತ್ತು.
ಇದರ ನಡುವೆ ಬಾಂಗ್ಲಾದೇಶದ ಮೊದಲ ಮಹಿಳಾ ನಾಯಕಿ ಖಲೀದಾ ಜಿಯಾ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದ್ದು, ಅವರ ಆರು ವರ್ಷಗಳ ಜೈಲು ಶಿಕ್ಷೆಗೆ ತೆರೆ ಬಿದ್ದಿದೆ.
ಇನ್ನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಲಂಡನ್‌ಗೆ ತೆರಳುವ ಶೇಖ್ ಹಸೀನಾ ಪ್ಲಾನ್ ಉಲ್ಟಾ ಆಗಿದೆ. ಹೀಗಾಗಿ ಇನ್ನೂ ಕೆಲವು ದಿನಗಳ ಕಾಲ ಅವರು ಭಾರತದಲ್ಲೇ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಹಲವು ಮುಗ್ಧ ಜೀವಗಳು ಬಲಿಯಾಗಿವೆ. ಈ ಬಗ್ಗೆ ವಿಶ್ವಸಂಸ್ಥೆ ನೇತೃತ್ವದಲ್ಲಿ ಸ್ವತಂತ್ರ ಹಾಗೂ ಸವಿಸ್ತಾರ ತನಿಖೆ ನಡೆಯಬೇಕಾದ ಅನಿವಾರ್ಯತೆ ಇದೆ’ ಎಂದು ಬ್ರಿಟನ್ ವಿದೇಶಾಂಗ ಸಚಿವ ಡೇವಿಡ್ ಲ್ಯಾಮ್ಮಿ ಹೇಳಿದ್ದರು. ಅಲ್ಲದೇ ಹಸೀನಾ ಅವರಿಗೆ ಕಾನೂನಾತ್ಮಕ ರಕ್ಷಣೆ ಒದಗಿಸಲು ಅಥವಾ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಬ್ರಿಟನ್ ಸರ್ಕಾರ ಹೇಳಿದೆ.
ಹಸೀನಾ ದೇಶ ಬಿಟ್ಟು ಪರಾರಿಯಾದ ನಂತರವೂ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಕಡಿಮೆಯಾಗಿಲ್ಲ. ನೂರಾರು ಹಿಂದೂ ದೇವಾಲಯಗಳಿಗೆ ಬೆಂಕಿ ಹಚ್ಚಲಾಗಿದ್ದು, ಪ್ರತಿಭಟನಾಕಾರರು ಹಿಂದೂಗಳ ಮನೆಗೆ ನುಗ್ಗಿ ಕೊಲೆಗೆ ಯತ್ನಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಅಲ್ಲಲ್ಲಿ ಹಿಂದೂಗಳ ಕೊಲೆಯೂ ಆಗಿದ್ದು, ಒಟ್ಟಾರೆ ಲೆಕ್ಕ ಸಿಕ್ಕಿಲ್ಲ. ನಿನ್ನೆ ಹಿಂದೂ ಎಂಬ ಕಾರಣಕ್ಕೆ ಶಿಕ್ಷಕರೊಬ್ಬರನ್ನು ಪ್ರತಿಭಟನಾಕಾರರು ಕೊಂದು ಹಾಕಿದ್ದಾರೆ.
Leave a Comment