16 ಮಕ್ಕಳನ್ನು ಯಾಕೆ ಹೊಂದಬಾರ್ದು ?; ಸಿಎಂ ಎಂ.ಕೆ.ಸ್ಟಾಲಿನ್ ಅಚ್ಚರಿ ಹೇಳಿಕೆ
ನ್ಯೂಸ್ ಆ್ಯರೋ: ‘ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಇಳಿಕೆ ಆಗುತ್ತಿದೆ. ಹೀಗಾಗಿ ದಕ್ಷಿಣ ಭಾರತೀಯರು ಹೆಚ್ಚು ಮಕ್ಕಳ ಹೆರಬೇಕು’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿದ್ದ ಕರೆಯನ್ನು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ನೇತಾರ ಎಂ.ಕೆ. ಸ್ಟಾಲಿನ್ ಅನುಮೋದಿಸಿದ್ದಾರೆ. ತಮಿಳರು 16 ಮಕ್ಕಳ ಹೆರಬೇಕು ಎಂಬ ನಾಣ್ಣುಡಿ ಪಾಲಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.
ಸೋಮವಾರ ಸಮಾರಂಭವೊಂದರಲ್ಲಿ ಮಾತನಾಡಿದ ಸ್ಟಾಲಿನ್, ‘ಕ್ಷೇತ್ರ ಮರುವಿಂಗಡಣೆಯಲ್ಲಿ ಜನಸಂಖ್ಯೆ ಆಧರಿಸಿ ಕ್ಷೇತ್ರಗಳು ವಿಂಗಡಣೆ ಆಗಲಿದೆ. ಈ ವೇಳೆ ಉತ್ತರ ಭಾರತದ ಲೋಕಸಭಾ ಸ್ಥಾನಗಳು ಹೆಚ್ಚಾಗಬಹುದು ಹಾಗೂ ಜನಸಂಖ್ಯೆ ನಿಯಂತ್ರಣ ನೀತಿ ಅನುಸರಿಸುವ ತಮಿಳುನಾಡಿನ ಸ್ನಾನಗಳು ಕಡಿಮೆ ಆಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
ತಮಿಳಿನ ಗಾದೆ ಮಾತಿನಂತೆ 16 ವಿವಿಧ ರೀತಿಯ ಸಂಪತ್ತು ಹೊಂದಿರಬೇಕು ಎಂಬುದು. ಹೀಗಾಗಿ ತಮಿಳರು ಸಂಪತ್ತಿಗೆ ಸಮಾನರಾದ 16 ಮಕ್ಕಳ ಹೆರಬೇಕು ಎಂದು ಕರೆ ನೀಡಿದರು.
ಇನ್ನು ಕೆಲವು ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಲೋಕಸಭೆ ಕ್ಷೇತ್ರಗಳು ಹೆಚ್ಚಾಗಿವೆ. ಅವರೇ ನಮ್ಮನ್ನು ಆಳುತ್ತಿದ್ದಾರೆ. ಆದರೆ ನಾವು ಜನಸಂಖ್ಯೆ ನಿಯಂತ್ರಣ ಹೇರಿಕೊಂಡಿದ್ದರ ಪರಿಣಾಮ ತಮಿಳುನಾಡಿನಲ್ಲಿ ಕ್ಷೇತ್ರಗಳು ಕಡಿಮೆಯಾಗುತ್ತಿವೆ. ತಮಿಳು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಕಡಿಮೆ ಮಕ್ಕಳನ್ನು ಹೊಂದಲು ನಮ್ಮನ್ನು ಏಕೆ ನಿರ್ಬಂಧಿಸಬೇಕು? ಜನಸಂಖ್ಯೆ ಆಧಾರದ ಮೇಲೆ ಸಂಸತ್ ಸ್ಥಾನಗಳನ್ನು ನಿರ್ಧರಿಸುನಾವುದರಿಂದ 16 ಮಕ್ಕಳನ್ನು ಏಕೆ ಹೊಂದಬಾರದು? ಎಂದು ಪ್ರಶ್ನಿಸಿದರು.
ಆಂಧ್ರ ಸರ್ಕಾರವು ವಯಸ್ಸಾದ ಜನಸಂಖ್ಯೆಯಿಂದಾಗಿ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕುಟುಂಬಗಳನ್ನು ಪ್ರೋತ್ಸಾಹಿಸಲು ಯೋಜಿಸುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಇತ್ತೀಚೆಗೆ ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲ, ದಕ್ಷಿಣ ಭಾರತದ ರಾಜ್ಯಗಳ ಜನರನ್ನು ಹೆಚ್ಚು ಮಕ್ಕಳನ್ನು ಹೊಂದುವಂತೆ ಒತ್ತಾಯಿಸಿದ್ದರು.
Leave a Comment