Mangalore : ಬಾಡಿಗೆ ಮನೆಯಲ್ಲಿ ಅಪ್ರಾಪ್ತ ಬಾಲಕಿಯ ಕೊಲೆ ಪ್ರಕರಣ – 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೋಲಿಸರು, ಆರೋಪಿಯ ಬಂಧನ
ನ್ಯೂಸ್ ಆ್ಯರೋ : ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ 14 ವರ್ಷದ ಅಪ್ರಾಪ್ತ ಬಾಲಕಿಯ ಕೊಲೆ ಪ್ರಕರಣವನ್ನು ಪಣಂಬೂರು ಪೋಲಿಸರು ಘಟನೆ ನಡೆದ 24 ಗಂಟೆಗಳ ಒಳಗೆ ಭೇದಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಫಕ್ಕೀರಪ್ಪ ಹಣಮಪ್ಪ ಮಾದರ ಪ್ರಾಯ: 51 ವರ್ಷ, ತಂದೆ: ಹಣಮಪ್ಪ ಮಾದರ ಸ್ವಂತ ವಿಳಾಸ : 1085 ಮಾದರ ಓಣಿ, ಹಂಚಿನಾಳ, ಪರಸಘಡ, ಬೆಳಗಾವಿ ಜಿಲ್ಲೆ. 591110. ಹಾಲಿ ವಿಳಾಸ : ಕೇಶವ ಎಂಬವರ ಬಾಡಿಗೆ ಮನೆ, ವಿಜಯ ವಿಠಲ ಭಜನಾ ಮಂದಿರದ ಹಿಂಭಾಗ, ಜೋಕಟ್ಟೆ. 62 ನೇ ತೋಕೂರು ಗ್ರಾಮ, ಮಂಗಳೂರು ತಾಲೂಕು ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಪ್ಪ ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:67/2024 ಕಲಂ:103 (1) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ಜಾರಿಯಲ್ಲಿದೆ.
ಆರೋಪಿಯು ಕಳೆದ 06 ತಿಂಗಳಿನಿಂದ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು, ಬಾಲಕಿಯ ಚಿಕ್ಕಪ್ಪನ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ನಿನ್ನೆಯೂ ಕೂಡ ಮನೆಗೆ ಬಂದಿದ್ದು ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದು, ಬಾಲಕಿ ವಿರೋಧಿಸಿದಾಗ ಆಕೆಯನ್ನು ಕೊಂದು ಪರಾರಿಯಾಗಿದ್ದ.
ಈ ಪ್ರಕರಣವನ್ನು ಅತೀ ಶೀಘ್ರದಲ್ಲಿ ಭೇದಿಸುವಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಐ.ಪಿ.ಎಸ್. ರವರ ಮಾರ್ಗದರ್ಶನದಂತೆ, ಸಿದ್ದಾರ್ಥ ಗೋಯಲ್, ಐ.ಪಿ.ಎಸ್. ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ), ಬಿ.ಪಿ ದಿನೇಶ್ ಕುಮಾರ್ ಡಿ.ಸಿ.ಪಿ. (ಅಪರಾಧ ಮತ್ತು ಸಂಚಾರ ವಿಭಾಗ), ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರವೀಶ್ ನಾಯಕ್ (ಪ್ರಭಾರ) ಮತ್ತು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್ ಕುಮಾರ್ ನಾಯ್ ರವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್, ಪಣಂಬೂರು ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕಿ ಶ್ರೀಮತಿ ಶ್ರೀಕಲಾ ಕೆ.ಟಿ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ. ಕೃಷ್ಣ, ಬಿ.ಕೆ. ಹೆಚ್.ಸಿ.ಗಳಾದ ಸತೀಶ್ ಎಮ್ ಆರ್, ಸಯ್ಯದ್ ಇಂತಿಯಾಜ್, ಸಿಪಿಸಿ ಗಳಾದ ಶಶಿಕುಮಾರ್, ರಾಕೇಶ್ ರವರುಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.
Leave a Comment