ಮನು ಭಾಕರ್‌ಗೆ ಅತ್ಯುನ್ನತ ಗೌರವ; ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ
ನ್ಯೂಸ್ ಆ್ಯರೋ: ಡಬಲ್ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಹಾಗೂ ವಿಶ್ವ ಚೆಸ್ ಚಾಂಪಿಯನ್ಶಿಪ್ ವಿಜೇತ ಡಾ ಗುಕೇಶ್ ಜೊತೆ ಒಟ್ಟು ನಾಲ್ಕು ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ಖೇಲ್ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಜನವರಿ 17 ರಂದು ಈ ನಾಲ್ವರು ಕ್ರೀಡಾಪಟುಗಳೀಗೆ ಮೇಜರ್ ಧ್ಯಾನ್ ಚಂದ್ ಖೇಲ್ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.
ಮನು ಭಾಕರ್ ಹಾಗೂ ಗುಕೇಶ್ ಜೊತೆ ಭಾರತೀಯ ಪುರುಷರ ಹಾಕಿ ಟೀಂನ ನಾಯಕ ಹರ್ಮನ್ಪ್ರೀತ್ ಸಿಂಗ್ ಹಾಗೂ ಪ್ಯಾರಾ ಒಲಿಂಪಿಯನ್ ಪ್ರವೀಣ್ ಕುಮಾರ್ಗೂ ಕೂಡ ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಹೇಳುವ ಪ್ರಕಾರ ಮನು ಭಾಕರ್ ಅವರ ಹೆಸರು ಈ ಬಾರಿಯ ಖೇಲ್ರತ್ನ ಪ್ರಶಸ್ತಿಯ ಪಟ್ಟಿಯಲ್ಲಿ ಆರಂಭದಲ್ಲಿ ಮಿಸ್ ಆಗಿತ್ತು. ಕೊನೆಗೆ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆಯಂತೆ. ಜನವರಿ 17 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ.
ಕ್ರೀಡಾ ಸಮಿತಿಯ ಶಿಫಾರಸ್ಸು ಹಾಗೂ ಹಲವು ಪರಿಶೀಲನೆಗಳನ್ನು ನಡೆಸಿದ ಬಳಿಕ ಈ ನಾಲ್ವರಿಗೆ ಈ ವರ್ಷದ ಖೇಲ್ರತ್ನ ಪ್ರಶಸ್ತಿಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Leave a Comment