Mangalore : 15ರಂದು ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಮಾನವ ಸರಪಳಿ ಕಾರ್ಯಕ್ರಮ – ಮಂಗಳೂರು ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಲು ಪರ್ಯಾಯ ಮಾರ್ಗ ಬಳಸಲು ಕಮೀಷನರ್ ಸೂಚನೆ

20240913 135857
Spread the love

ನ್ಯೂಸ್ ಆ್ಯರೋ : ಇದೇ ತಿಂಗಳ ದಿನಾಂಕ 15ರಂದು ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೆ ಹಮ್ಮಿಕೊಂಡಿರುವ ಬೃಹತ್ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಮಂಗಳೂರು ನಗರದ ವಾಹನ ದಟ್ಟಣೆಯನ್ನು ತಡೆಗಟ್ಟಲು ಕಮೀಷನರ್ ಅಧಿಕೃತ ಸೂಚನೆ ಹೊರಡಿಸಿದ್ದಾರೆ.

ಆ ದಿನ ಮಂಗಳೂರು ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ-ಹೆಜಮಾಡಿ ಗಡಿಯಿಂದ ನಂತೂರು ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ 73 ರ ಅರ್ಕುಳ- ಫರಂಗಿಪೇಟೆವರೆಗೆ ಶಾಲಾ ಮಕ್ಕಳು ಬೆಳಿಗ್ಗೆ ಸುಮಾರು 07.30 ಗಂಟೆಯಿಂದ 11.00 ರವರರೆಗೆ ಮಾನವ ಸರಪಳಿಯನ್ನು ನಿರ್ಮಿಸುವ ಸಮಯ ಹಾಗೂ ಶಾಲಾ ಮಕ್ಕಳ ಆಗಮನ ಮತ್ತು ನಿರ್ಗಮನದ ಸಮಯ ಮಕ್ಕಳ ಮತ್ತು ಸಾರ್ವಜನಿಕರ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಈ ಕೆಳಗಿನ ಸೂಚನೆ ನೀಡಲಾಗಿದೆ.

ಹೆಜಮಾಡಿ ಬಪ್ಪನಾಡು – ಮುಲ್ಕಿ ಕಾರ್ನಾಡು -ಹಳೆಯಂಗಡಿ – ಪಾವಂಜೆ – ಮುಕ್ಕ – ಸುರತ್ಕಲ್ – ಹೊಸಬೆಟ್ಟು – ಹೊನ್ನಕಟ್ಟೆ – ಬೈಕಂಪಾಡಿ – ಪಣಂಬೂರು ಕೂಳೂರು- ಕೊಟ್ಟಾರಚೌಕಿ- ಕುಂಟಿಕಾನ- ಬಿಕರ್ನಕಟ್ಟೆ – ಕೈಕಂಬ ಪಡಿಲ್- ಕೆಪಿಟಿ ವೃತ್ತ – ಪದವು ಜಂಕ್ಷನ್ ಕಣ್ಣೂರು – ಅಡ್ಯಾರ್ – ಸಹ್ಯಾದ್ರಿ – ವಳಚ್ಚಿಲ್ ನಂತೂರು ವೃತ್ತ ಅರ್ಕುಳ ವರೆಗಿನ ರಾಷ್ಟ್ರೀಯ ಹೆದ್ದಾರಿ 66 ಮತ್ತು 73 ರಲ್ಲಿ ಸಂಚರಿಸುವ ಎಲ್ಲಾ ವಿಧದ ವಾಹನಗಳ ಚಾಲಕರು / ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.

20240913 1406277647217790523474850

ಅಲ್ಲದೇ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕಮೀಷನರ್ ಅನುಪಮ್ ಅಗರ್ವಾಲ್ ಮನವಿ ಮಾಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!