ʼಒಂದು ದೇಶ, ಒಂದು ಚುನಾವಣೆ ಶೀಘ್ರʼ; ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ ಯಾವಾಗ ?

PM Modi’s BIG push
Spread the love

ನ್ಯೂಸ್ ಆ್ಯರೋ: ಪ್ರಜಾಪ್ರಭುತ್ವವನ್ನು ಬಲಪಡಿಸುವ ಒಂದು ರಾಷ್ಟ್ರ, ಒಂದು ಚುನಾವಣೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಇದು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಸಹಾಯ ಆಗಲಿದೆ. ಜೊತೆಗೆ ನಿಗಧಿತ ಗುರಿಯನ್ನು ಸಾಧಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಹಿನ್ನೆಲೆಯಲ್ಲಿ ಗುಜರಾತ್‌ನ ಕೆವಾಡಿಯಾದಲ್ಲಿ ‘ರಾಷ್ಟ್ರೀಯ ಏಕತಾ ದಿನ’ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ಪರೇಡ್ ವೀಕ್ಷಿಸಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆಗೆ ತಕ್ಕ ಉತ್ತರವನ್ನು ನೀಡಿದ್ದೇವೆ. ಕಳೆದ 10 ವರ್ಷಗಳ ಪ್ರಯತ್ನದಿಂದ ನಕ್ಸಲಿಸಂ ಕೂಡ ಭಾರತದಲ್ಲಿ ಕೊನೆಯುಸಿರೆಳೆದಿದೆ.

ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಉತ್ತರ ನೀಡಲಾಗಿದೆ. ಭಯೋತ್ಪಾದನೆಯ ಮಾಸ್ಟರ್ಸ್​ ದೇಶವನ್ನು ತೊರೆಯಬೇಕಾಗಿದೆ. ಕಳೆದ 10 ವರ್ಷಗಳ ಅವಧಿಯು ಭಾರತದ ಏಕತೆ ಮತ್ತು ಸಮಗ್ರತೆಗೆ ಅಭೂತಪೂರ್ವ ಸಾಧನೆಗಳಿಂದ ತುಂಬಿದೆ.

ರಾಷ್ಟ್ರೀಯ ಏಕತೆಯ ಬದ್ಧತೆಯು ಸರ್ಕಾರದ ಪ್ರತಿಯೊಂದು ಕೆಲಸ ಮತ್ತು ಧ್ಯೇಯಗಳಲ್ಲಿಯೂ ಗೋಚರಿಸುತ್ತದೆ ಎಂದರು. ಅಲ್ಲದೆ ಒಂದು ದೇಶ, ಒಂದು ಚುನಾವಣೆ ಕುರಿತು ಮಹತ್ವದ ಮಾಹಿತಿ ಸದ್ಯದಲ್ಲೇ ಹಂಚಿಕೊಳ್ಳುವುದಾಗಿ ತಿಳಿಸಿದರು. ಇದೇ ವೇಳೆ ದೇಶದ ಸಮಸ್ತ ಜನರಿಗೆ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿದರು. ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಈ ವಿಶೇಷ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಆರೋಗ್ಯ ಮತ್ತು ಅದೃಷ್ಟ ವನ್ನು ತರಲಿ ಎಂದು ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!