ಜೊಮ್ಯಾಟೋ, ಸ್ವಿಗ್ಗಿಗೆ ಸಖತ್ ಕಾಂಪಿಟೇಷನ್ ಕೊಡ್ತಿದೆ ಈ ಮಹಿಳೆಯ ಸಂಸ್ಥೆ – ಇದು ಫುಡ್ ಸಂಸ್ಥೆಯೇ ಅಲ್ಲ, ಆದ್ರೂ ಠಕ್ಕರ್ ಕೊಡ್ತಿರೋದು ಹೇಗೆ?

ನ್ಯೂಸ್ ಆ್ಯರೋ : ಪ್ರಖ್ಯಾತವಾಗಿರುವ ಕಂಪೆನಿಗೆ ಸೆಡ್ಡು ಹೊಡೆಯುವ ಹಾಗೆ ಪ್ರತಿಸ್ಪರ್ಧೆ ಕೊಡೋದು ಸುಲಭದ ಮಾತಲ್ಲ. ವ್ಯವಹಾರ ಎಂದ ಮೇಲೆ ಲಾಭ- ನಷ್ಟ ಎಲ್ಲವೂ ಇದ್ದದ್ದೇ. ಎಲ್ಲವನ್ನು ಸಮತೋಲನ ಮಾಡಿಕೊಂಡು ಸಾಗಿದಾಗ ಮಾತ್ರ ಲಾಭ ಗಳಿಸಲು ಸಾಧ್ಯವಾಗುತ್ತದೆ. ಇದೀಗ ಅಚ್ಚರಿ ಸಂಗತಿ ಎಂದರೆ ಫುಡ್ ಡೆಲಿವರಿ ಸಂಸ್ಥೆಯಲ್ಲದಿದ್ದರೂ ಈ ಮಹಿಳೆಯ ಮಾಲೀಕತ್ವದ ಸಂಸ್ಥೆ ಪ್ರಖ್ಯಾತ ಫುಡ್ ಕಂಪೆನಿ ಸ್ವಿಗ್ಗಿ, ಜೊಮೆಟೋಗಳಿಗೆ ಸಖತ್ ಪೈಪೋಟಿ ನೀಡುತ್ತಿದೆ ಅಂದ್ರೆ ನಂಬ್ತೀರಾ…?

ಎಡೆಲ್ವೀಸ್ ಅಸೆಟ್ ಮ್ಯಾನೇಜ್ಮೆಂಟ್ ನ ಸಿಇಒ ಆಗಿರುವ ರಾಧಿಕಾ ಗುಪ್ತಾ, ಸೋಶಿಯಲ್ ಮೀಡಿಯಗಳಲ್ಲಿ ಆಕ್ಟಿವ್ ಆಗಿರುವ ಪ್ರಭಾವಶಾಲಿ ಮಹಿಳೆಯಾಗಿದ್ದಾರೆ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ತಮ್ಮ ಸಂಸ್ಥೆಯೂ, ಪ್ರಮುಖ ಫುಡ್ ಡೆಲಿವರಿ ಸಂಸ್ಥೆಗಳಾದ ಜೊಮ್ಯಾಟೊ, ಸ್ವಿಗ್ಗಿ ಜೊತೆ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಹಾಗೆಂದು ಗುಪ್ತಾ ಅವರು ಮುನ್ನಡೆಸುವ ಕಂಪನಿಯು ಫುಡ್ ಡೆಲಿವರಿ ಪೋರ್ಟಲ್ ಅಲ್ಲ ಎಂಬುದು ಗಮನಾರ್ಹ. ಸುಮಾರು 78,640 ಕೋಟಿ ರೂಪಾಯಿಗಳ ಎಯುಎಂ (Assets Under Management) ನಿರ್ವಹಿಸುವ ಅವರ “ಎಡೆಲ್ವೀಸ್ ಮ್ಯೂಚುಯಲ್ ಫಂಡ್‌” ಕಂಪನಿ, ಆನ್‌ಲೈನ್ ಆಹಾರ ವಿತರಣಾ ವ್ಯವಹಾರದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.

ಅವರು ಜೊಮ್ಯಾಟೊ ಮತ್ತು ಸ್ವಿಗ್ಗಿ ಇಂತಹ ಯಾವುದೇ ಆಹಾರ ವಿತರಣಾ ಪೋರ್ಟಲ್ ಅನ್ನು ಮುನ್ನಡೆಸುತ್ತಿಲ್ಲದಿದ್ದರೂ, ಅವರ ಸಂಸ್ಥೆ ಎಸ್ಐಪಿಗಳನ್ನು ಮಾರಾಟ ಮಾಡುತ್ತಿದ್ದರೂ, ಫುಡ್ ಡೆಲಿವರಿ ಕಂಪನಿ ಜೊತೆ ಸ್ಪರ್ಧಿಸಬೇಕಾಗಿದೆ ಎಂದು ಗುಪ್ತಾ ವ್ಯಂಗ್ಯವಾಡಿದ್ದಾರೆ.

ಗುಪ್ತಾ ವ್ಯವಹಾರ ನಡೆಸುವ ಬಗ್ಗೆ ಏನ್ ಹೇಳ್ತಾರೆ ಗೊತ್ತಾ..?

ಅವರ ವಿವರಣೆಯ ಪ್ರಕಾರ “ಜನ ತಮ್ಮ ಹಣವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಆದರೆ ಫುಡ್ ಡೆಲಿವರಿ ಅಪ್ಲಿಕೇಶನ್‌ಗಳು ಮತ್ತು ನೆಟ್‌ಫ್ಲಿಕ್ಸ್ ಹಾಗೂ ಇತರ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡುತ್ತಾರೆ,” ಎಂದು ಹೇಳಿದ್ದಾರೆ.

ನಮ್ಮಲ್ಲಿ ಹಣವಿಲ್ಲದ ಕಾರಣ ಎಸ್‌ಐಪಿಗಳಲ್ಲಿ 100 ರೂಪಾಯಿ ಕೂಡಾ ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಜನ ನನ್ನ ಬಳಿ ಹೇಳುತ್ತಾರೆ. ಆದರೆ ಅದೇ ಜನ ನೆಟ್‌ಫ್ಲಿಕ್ಸ್‌ಗೆ ಬೇಕಾದರೆ ತಿಂಗಳಿಗೆ 100 ರೂಪಾಯಿ ಪಾವತಿಸುತ್ತಾರೆ,” ಎಂದು ಎಡೆಲ್ವೀಸ್ ಮ್ಯೂಚುವಲ್ ಫಂಡ್ ಸಿಇಒ ತಿಳಿಸಿದರು.

ಈ ದೇಶದಲ್ಲಿ 40 ಕೋಟಿ ಜನರು ಒಂದು ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ಚಂದಾದಾರರಾಗಿದ್ದಾರೆ ಅಥವಾ ಜೊಮ್ಯಾಟೊ, ಸ್ವಿಗ್ಗಿ ಆಪ್‌ಗಳಲ್ಲಿ ಹೇಗೆ ಹಣ ವ್ಯರ್ಥ ಮಾಡುತ್ತಾರೆ ಎಂಬುವುದು ಒಂದು ಉದಾಹರಣೆಯಾಗಿದೆ.

ತಿಂಗಳಿಗೆ ಕನಿಷ್ಠ 100 ರೂಪಾಯಿ ಮಾತ್ರ ಗಮನದಲ್ಲಿಟ್ಟುಕೊಂಡು ಹೇಳುದಾದರೂ ದೇಶದಲ್ಲಿ ಕೇವಲ 4 ಕೋಟಿ ಜನರು ಮಾತ್ರ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ!,” ಎಂದು ಎಡೆಲ್ವೀಸ್ ಮ್ಯೂಚುವಲ್ ಫಂಡ್ ಸಿಇಒ ಇತ್ತೀಚೆಗೆ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿರುವುದನ್ನು ಬಿಸಿನೆಸ್ ಟುಡೇ ಉಲ್ಲೇಖಿಸಿದೆ.

ರಾಧಿಕಾ ಗುಪ್ತಾ ಯಾರು?

ಗುಪ್ತಾ ಅವರು ಭಾರತೀಯ ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿ ಏಕೈಕ ಮಹಿಳಾ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಪ್ರಮುಖ ಹಣಕಾಸು ಮತ್ತು ಹೂಡಿಕೆ ತಜ್ಞೆಯಾಗಿದ್ದು, ಕಾರ್ಪೊರೇಟ್ ಜಗತ್ತಿನಲ್ಲಿ ಸ್ಪೂರ್ತಿದಾಯಕ ಸಾಧನೆಯ ಹಾದಿಯನ್ನು ಹೊಂದಿದ್ದಾರೆ. ರಾಧಿಕಾ ಗುಪ್ತಾ ಅವರು ಪಾಕಿಸ್ತಾನದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಪುತ್ರಿಯಾಗಿ ಪಾಕ್‌ನಲ್ಲಿಯೇ ಜನಿಸಿದರು.

ಇವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಹಳೆ ವಿದ್ಯಾರ್ಥಿನಿಯಾಗಿದ್ದಾರೆ. McKinsey & Company ಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದು, 2017 ರಲ್ಲಿ ಎಡೆಲ್ವೀಸ್ ಗೆ ಸೇರ್ಪಡೆಗೊಂಡರು.

ಆ ಸಮಯದಲ್ಲಿ, ಮ್ಯೂಚುವಲ್ ಫಂಡ್ ಎಯುಎಂ (ನಿರ್ವಹಣೆಯಲ್ಲಿರುವ ಆಸ್ತಿಗಳು) 6,000 ಕೋಟಿ ರೂಪಾಯಿಗಳಿಂದ ಸುಮಾರು 80,000 ಕೋಟಿ ರೂಪಾಯಿ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಒಬ್ಬ ಮಹಿಳೆಯಾಗಿದ್ದುಕೊಂಡು ಇಂತಹ ಸಾಧನೆಯನ್ನು ಮಾಡಿದ್ದಾರೆ ಎಂದರೆ ಅವರ ಕಾರ್ಯವನ್ನು ಶ್ಲಾಘಿಸಲೇಬೇಕು.